ಓ ಮಳೆಯೇ
ಓ ಮಳೆಯೇ ನಿನ್ನ ಈ ರುದ್ರ ನರ್ತನ
ನಾನೇಲೋಕೊ ತಂತು ಕಂಪನ
ಒಮ್ಮೆ ಹೇಳು ನಾನು ಬಂದರೆ
ಭೂಮಿ ತಾಯಿ ಹುಡುವಳು ಹಸಿರೇ
ಯಾಕಾದೆ ಓ ನಿ ಮೌನ
ನೀ ನನ್ನ ಹೃದಯದ ಕವನ
ಮಾತಿಲ್ಲದ ಒಲವು ಚೆಂದ
ನಿನ್ನ ನುಡಿಯು ಇನ್ನು ಅಂದ
ಹಸಿರುಟ್ಟ ನಲ್ಮೆಯ ಒಲವೇ
ನೀ ನೆಡೆದ ದಾರಿಯು ಗೆಲುವೇ
ನಸುನಕ್ಕ ಇಬ್ಬನಿ ಹೇಳಿತು
ನನ್ನಗೆದ್ದ ಸುಂದರ ಚೆಲುವೆ
ಮೈಮೇಲೆ ಜಾರಿದ ಹನಿಯೇ
ಧರೆಗಿಳಿದ ನೋವಿನ ಕಂಬನಿಯೇ
ನೀ ಬಿದ್ದ ನೆಲವು ತಂಪು
ನೀ ಹರಿವ ಜಲವೇ ನಸುಗೇಮ್ಪು
ಮೈ ಕುಣಿಸಿ ಮಿಸುಕದೆ ನೀ ಹರಿವೆ
ಧರೆಗಿಳಿದ ವರುಣನ ವರವೇ
ನೀ ಇದ್ದರೆ ಪ್ರಕೃತಿ ಹಸಿರು
ಗಿಡ ಮರವು ಹೇಳಿದೆ ನಿನ್ನ ಹೆಸರು
ಋತುಗಳ ಮಿಡಿವ ಚಲನ
ಬಣ್ಣದ ಬದುಕಿನಾ ನಯನ
ಕಾಲದ ನಡುಗೆಯ ಸಲುಗೆ
ತಂದಿದೆ ಬದುಕಿಗೆ ಹೊಸ ಬೆಸುಗೆ
ಓ ಮಳೆಯೇ ನಿನ್ನ ಈ ರುದ್ರ ನರ್ತನ
ಭೂಮಿಯಲ್ಲಿ ತಂತು ಕಂಪನ
**********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment