ದೂರಾದ ಮನಸು
ದೂರಾದ ಮನಸು |
ದೂರವಾಯಿತೇಕೆ ಮನಸು
ಕಣ್ಣ ನೀರು ಕಾಣೋಒಳಗೆ
ಒಲವು ಕಂಡ ನೋವ ಬೆಸುಗೆ
ಮಿಂಚಿ ಹೋಯ್ತು ಬಂದು ಹಾಗೆ
ಕನಸಿನಲ್ಲಿ ಕಂಡ ನೆನಪು
ಗಾಳಿಯಲ್ಲಿ ತೆಲಿಹೋಯ್ತು
ನನ್ನ ಕಟ್ಟಿದ ಪ್ರೀತಿ ಗೋಪುರ
ನೀರಿನಲ್ಲಿ ಕೊಚ್ಚಿ ಹೋಯ್ತು
ಮನದ ತುಂಬಾ ಬರಿ ಗಾಯ
ಹೊತ್ತು ತಂದ ಒಲವೇ ಮಾಯಾ
ಓಡಾಲ್ಲಲ್ಲಿ ಕಿತ್ತು ತಿಂತು
ಅರಿಯದೇನೆ ಹಾರಿ ಬಂತು
ಮನಸ್ಸು ತುಂಬಾ ನಿನದೆ ಧ್ಯಾನ
ಮರೆತ ಮಾತು ಯಾಕೋ ಮೌನ
ದೂರದ ಊರಿಗೆ ನನ್ನ ಪಯಣ
ಸಾಕು ಇನ್ನು ಪ್ರೀತಿ ಕೊಂದ ವರುಣ
ಒಲವಲಿ ಏಕೋ ಮನಸು ಬಾರ
ನಿನ್ನ ಒಲವು ನನಗೆ ದೂರ
ಸಾಕು ಇನ್ನು ನೋವ ಘಳಿಗೆ
ಸೋರುತಿಹ ಪ್ರೀತಿ ಮಳಿಗೆ
ದೂರವಾಯಿತೇಕೆ ಮನಸು
ಕಣ್ಣ ನೀರು ಕಾಣೋಒಳಗೆ
ಒಲವು ಕಂಡ ನೋವ ಬೆಸುಗೆ
ಮಿಂಚಿ ಹೋಯ್ತು ಬಂದು ಹಾಗೆ
********ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment