ಕರೀಮುಗಿಲು ಗಿರಿ ನವಿಲು
ದೂರದ ಗೂಡಲಿ ಕರೀಮುಗಿಲು ಬಂಡೇ
ನಿನ್ನಯ ಒಲವಲಿ ಗಿರಿನವಿಲು ಕಂಡೆ
ಪ್ರೀತಿಯ ಕನಸಿಗೆ ಗಿರಿ ನವಿಲೇ ಒಲವು
ಸುರಿವ ಮಳೆಗೆ ಕರೀಮುಗಿಲು ಜಲವು
ಆಗಸದಿ ಮಿಂಚೊನ್ದು ಬಂದು
ಕರೀಮುಗಿಲ ನಡುವೆ ಬರಸಿಡಿಲು ಸಿಡಿದು
ಬದುಕಿನ ಬೆವರನು ಮಳೆಯಲ್ಲಿ ತೋಯ್ದು
ಸುಡುಗಾಡ ಸಂತೆಯಲ್ಲಿ ಗಿರಿ ನವಿಲು ಕುಣಿದು
ಹಾಡಿದೆ ಹಾಡೋoದು ಕೇಳುವಿರಿ ನೀವಿಂದು
ಕರೀಮುಗಿಲು ಎಲ್ಲೊ ಗಿರಿನವಿಲು ಎಲ್ಲೊ
ಬಣ್ಣಗಳ ಜಾತ್ರೆ ನಕ್ಷತ್ರಗಳ ಯಾತ್ರೆ
ಮುಗಿಲ್ಲಲ್ಲಿ ಸಂತೆ ನೋಡುತ ನಿಂತೆ
ಸೂರ್ಯನ ಮುಳುಗು ಚಂದ್ರನ ಬೆಳಗು
ನಕ್ಷತ್ರ ನಗುವಾಗ ಉಲ್ಕೆಯು ಬೀಳುವಾಗ
ಸ್ವರ್ಗವ ಕಂಡೆ ಕೂತು ನಮ್ಮೂರ ಬಂಡೇ
ಜಾತ್ರೆಯ ಇಬ್ಬನಿ ಮಿಡಿದ ಕಂಬನಿ
ತುಂತುರು ಮಳೆ ಹನಿ ಹೊಸ ಬೆಳಕಿನ ಸವಿ ಹನಿ
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment