Posts

Showing posts from November, 2020

♦️♣️ಸಮನ್ವಯ ಬಣ್ಣ♣️♦️

  ನಿನ್ನಯ ಚೆಲುವು                        ಒಲವಿನ ಬಣ್ಣ  ನಿನ್ನಯ ನಡಿಗೆ                       ನವಿಲಿನ ಬಣ್ಣ  ನಿನ್ನಯ ನುಡಿಯು                       ಪ್ರೀತಿಯ ಬಣ್ಣ  ನಿನ್ನಯ ಸ್ನೇಹ                       ಆಕಾಶದ ಬಣ್ಣ  ನಿನ್ನಯ ನಗುವು                        ಮಿಂಚಿನ ಬಣ್ಣ  ನಿನ್ನಯ ಹಾಡು                        ಕೋಗಿಲೆ ಬಣ್ಣ  ಈ ನಿನ್ನ ಸಮನ್ವಯ ಬಣ್ಣಕೆ ನಾ ಸೋತೆನಣ್ಣ  ********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್ 

💃❤ನಾ ಸೋತೆ 💃❤

  ನಿನಗಾಗಿ ನಾ ಸೋತೆ  ಪ್ರೀತಿಯಲಿ ಮೈಮರೆತೆ  ಸೆರೆಯಾದೆ ನೋಟದ  ಆ ನಿನ್ನ ಕಣ್ಣ ಸನ್ನೆಗೆ  ಹೃದಯದ ಅಂಗಳದಿ  ಬಿಂದಿಗೆಯ ನೀ ತಂದೆ  ತುಂಬಿರಲು ಒಲವಿನ ಬಿಂದಿಗೆ  ನಸು ನಕ್ಕು ನೀ ನಡೆದೇ  ನನ ಮನವನು ನೀ ಸೆಳೆದೆ  ನಿನ್ನ ನೋಡಿದ ನನಗೆ  ಒಲವಾಯಿತು ಹಾಗೆ  ನಿನ ಮೇಲೆ ಕನಸಿಯಿತು  ಪಿಸು ಮಾತು ಬಳಿ ಬಂತು  ನಿನ್ನನು ಕೂಗಿ  ಎದೆ ಬಡಿತ ಹೆಚ್ಚಾಯಿತು  ಕೇಳಿಸದೇ ನಿನಗೆ  ವಯಸ್ಸಿನ ಬೇಗೆ  ತಣಿಸುವೆಯ ನನ್ನ  ಪ್ರೀತಿಯ ಬಯಕೆ  ಸೋತಿರುವೆ ನಾನು  ನಿನ್ನಯ ಚೆಲುವಿಗೆ  ಚಂದಾದಾರ ನಾನೆ  ನಿನ್ನ ಪ್ರೀತಿಗೆ  ಓ ನನ್ನ ರೂಪಸಿ ಬಳಿ ಬಂದೆ ನಿನ್ನ ಅರಸಿ  ಹೇಳುವೆಯ ಕನಸ  ಮಾಡುವೆನು ನನಸಾ  ಕೈ ಇಡಿದು ನಡೆಯುವೆ  ಕೊನೆವರೆಗೂ ಜೊತೆಗಿರುವೆ  ಬಾಳಿನ ಪಯಣದಿ  ನಡೆ ನೀನು ಮುಂದೆ  ಬರುವೆನು ಇಂದೆ  ಸಾಗುತಾ ಹೇಳುವ ನಾವಿಬ್ಬರೂ ಒಂದೇ  ನಿನಗಾಗಿ ನಾ ಸೋತೆ ಪ್ರೀತಿಯಲಿ ಮೈಮರೆತೆ  ******ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್

🙏🙏ಸಣ್ಣ ಕವನಗಳು -9🙏🙏

    🌼🌼    ಕನಸು 🌼🌼 ಅರಿಯಲಾರೆ ನೀನು ನನ್ನ ಮನಸ್ಸು  ಕಾಣುವೆಯೇನು ದಿನ ಕನಸು  ಮುಸ್ಸಂಜೆಯ ಬಾನು ಬಲು ಸೊಗಸು  ನನಗೆ ನಿನ್ನನು ನೋಡಿ ಆಯಿತು  ಮನಸ್ಸು  ಪ್ರೀತಿಸುವೆಯೇನು ನೀ ನನ್ನನು ತಿಳಿಸು  🌻🌻 ಮರೆಯಲಾರೆ 🌻🌻 ಕಣ್ಣನು ನೋಡಿ                     ನೀ ಕಾಡಲಾರೆ  ತಲೆಯನು ನೋಡಿ                      ನೀ ತಿಳಿಯಲಾರೆ  ಮನವನು ನೋಡಿ                        ನೀ ಮರೆಯಲಾರೆ  ಹೃದಯವ ನೋಡಿ                         ನೀ ಅರಿಯಲಾರೆ  ನನ್ನನು ಕಂಡು                          ನೀ ಮರುಗಲಾರೆ  ******ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್

🌷🥀ಓ ನನ್ನಯ ಒಲವೇ🌷🥀

ಪ್ರೀತಿಯ ಹೆಸರಲಿ  ನೀ ಬಳಿ ಬಂದೆ  ನನ್ನಲಿ ನೀನು  ನೂರಾಸೆಯ ತಂದೆ  ನೀ ನನ್ನವಳೆಂದು  ಜೀವ ನಂಬಿತು  ನೀ ಮಾಡಿದ ಸಂಚಿಗೆ  ಮನಸ್ಸು ನೊಂದಿತು  ಓ ಮೋಸಗಾತಿಯೇ ನೀನೇಕೆ ಓಡುವೇ ಸನಿಹಕೆ ಬಂದು ಮತ್ತೆ ಕಾಡುವೆ  ಜೊತೆಯಲ್ಲಿ ಕಳೆದ ನಿನ್ನಯ  ನೆನಪು ನನ್ನ ಕಾಡಿದೆ  ನಿನ್ನ ಒಲವಿಗಾಗಿ  ಹೃದಯ ಬೇಡಿದೆ  ಯಾಕಿ ಮೌನ ಮಾತಾಡು  ನನ್ನ ಒಲವೇ  ನೀ ಜೊತೆಗಿದ್ದರೆ  ನನ ಪ್ರೀತಿ ನಿನದಲ್ಲವೇ  ಓ ಮೋಸಗಾತಿಯೇ ನೀನೇಕೆ ಓಡುವೇ  ಸನಿಹಕೆ ಬಂದು ಮತ್ತೆ ಕಾಡುವೆ  ಮೋಹಕ ಮಾತಿಗೆ  ಮನಸ್ಸು ಕರಗಿತು  ಈ ಪ್ರೀತಿಯು ಸುಳ್ಳೆಂದು  ಅರಿಯದೆ ಹೋಯಿತು  ನಿನ್ನಯ ಚೆಲುವು  ನನ್ನ ಕಾಡಿದೆ  ಪ್ರೀತಿಯ ಒಲವಿಗೆ  ಮತ್ತೆ ಬೇಡಿದೆ ನೀನಾಗಾಗಿ ಹೃದಯದಿ  ಮನೆಯ ಮಾಡಿದೆ  ನಿನ ಕಣ್ಣಾಮುಚ್ಚಾಲೆ  ಆಟಕೆ ಹೃದಯ ಹೊಡೆದಿದೆ  ಓ ಮೋಸಗಾತಿಯೇ ನೀನೇಕೆ ಓಡುವೇ ಸನಿಹಕೆ ಬಂದು ಮತ್ತೆ ಕಾಡುವೆ  *******ರಚನೆ***** ಡಾ. ಚಂದ್ರಶೇಖರ. ಸಿ. ಹೆಚ್

🙏🙏ಸಣ್ಣ ಕವನಗಳು -8🙏🙏

❤ ಪ್ರೀತಿಯ ಕಥೆ ❤ ಬರೆಯಲೇ ನಾನು                       ಒಲವಿನ ಕಥೆಯ  ಹೇಳುವೆಯೇನು ನಿನ್ನ                    ಪ್ರೀತಿಯ ವ್ಯಥೆಯ  ಓದಲೇ ನಾನು                    ಮರೆಯದ ಪುಟವ  ನೀ ನನಗಾಗಿ ಬಂದ                     ದೇವರ ಕೃಪೆಯ  ಇದುವೇ ನಿನ್ನ ಈ                     ಪ್ರೀತಿಯ ಹೃದಯ 😂 ಹೃದಯದ ನಡುಕ 😪 ಪ್ರೇಮದ ಅಲೆಯಲಿ                     ಹೃದಯದ ನಡುಕ  ಪ್ರಣಯದ ಸೆಲೆಯಲಿ                     ಮೈಯಲಿ ಪುಳಕ  ಕಡಲಿನ ತಡಿಯಲಿ            ಭೋರ್ಗರೆಯುವ ಜಳಕ  ಈ ನಿನ್ನಯ ಪ್ರೀತಿಯ ನೋಡಿ                      ನಾನಾದೆ ಭಾವುಕ 🚣‍♀️ ದೋಣಿಯ ಕಥೆ 🚣🏻‍♂️  ಇದುವೇ ನಿನ್ನ ಮಿಂಚಿನ                                                           ಹೃದಯ  ಕಾಡಿತು ನನ್ನ ಅರಿಯದ                                        ಹೃದಯ  ಸೇರಲು ಬಂದು ಬರೆಯಿತು                                   ಕಥೆಯ  ನಾವಿಕನಿಲ್ಲದ ದೋಣಿಯ                                         ವ್ಯಥೆಯ  *******ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್

🌙☀️ಸೂರ್ಯ -ಚಂದ್ರ ☀️🌙

  ಬದುಕನ್ನು ಬೆಳಗಲು                     ಸೂರ್ಯ ಬಂದ  ಕತ್ತಲೆ ಕಳೆಯಲು                     ಚಂದ್ರನು ಬೆಳಕು ತಂದ  ಮನದಿ ಮೂಡಿದೆ                          ಒಂದು ಕಥೆಯು  ಬದುಕಲು ಕಲಿಸಿದ                           ಒಂದು ವ್ಯಥೆಯು  ಪ್ರೀತಿಯ ಸಾರ                     ಹೇಳಲು ಹೊರಟೆ  ಮುದುಡಿದ ಮನಸ್ಸಿಗೆ                              ನೀರನ್ನು ಕೊಟ್ಟೆ  ಬಾಳಿನ ಪಯಣದಿ                          ನೋವು ನಲಿವು   ಸಾಗುವ ಸವೆಸಿ                    ನೆನಪಿನ ಒಲವು  ಬದುಕಿನ ಪಯಣದಿ                            ಅರಳಿತು ಹೂವು   ಪದಗಳೇ ಇಲ್ಲ                    ವರ್ಣಿಸಲು ಅದರ ಚೆಲುವು ******ರಚನೆ ******** ಚಂದ್ರಶೇಖರ. ಸಿ ಹೆಚ್ 

🙏🙏ಸಣ್ಣ ಕವನಗಳು -7🙏🙏

👩‍❤️‍👨 ಓಲವಿನ ನೆನಪು 👩‍❤️‍👨 ಮರೆತೆಯಾ ನೀನು  ಓಲವಿನ ನೆನಪ   ಅರಿಯದೆ ಬರೆದ  ಪ್ರೀತಿಯ ಒಳಪ  ನಿನ್ನಯ ನಗುವು   ತುಂಬಿತು ಹುರುಪು  ತಿಳಿಯದೆ ಬಂತು   ನಿನ್ನಯ ನೆನಪು  ನನ್ನಯ ಮನಕೆ   ನೀಡಿತು ತಂಪು  👬👭 ಗೆಳೆತನ 👭👬 ಬಾನೊಂದು ಸೂರು  ನಿನ ಅದರ ತೇರು  ಜೊತೆಯಾಗಿ ಸೇರು  ಶ್ರಮಿಸೋಣ ದೂರ  ಗೆಳೆತನವು ಜೋರು    🎗️🏵️    ಉಡುಗೊರೆ 🏵️🎗️ ನೀ ನನ್ನನು ನೋಡಲು   ಓಲವಿನ ಉಡುಗೊರೆ  ನೀ ನನ್ನನು ಕಾಡಲು  ಪ್ರೀತಿಯ ಮಳೆ ದರೆ  ನೀ ನನ್ನನು ಸೇರಲು   ತುಂಬಿತು ಜೀವನದ ಹೊಸಕೆರೆ  ******ರಚನೆ ***** ಡಾ. ಚಂದ್ರಶೇಖರ. ಸಿ. ಹೆಚ್

📗📖✒️ನನ್ನ ಸಾಲುಗಳು✒️ 📖📗

  ಪ್ರಿಯಾ ಗೆಳೆಯರೇ  ನಾನು ಕವನಗಳನ್ನು  ಬರೆಯಲು ಶುರು ಮಾಡಿ ಸರಿ ಸುಮಾರು ಮೂರು ವರ್ಷಗಳು ಕಳೆದವು ನನ್ನ  ಬಿಡುವಿನ ಸಮಯದಲ್ಲಿ ನನ್ನ ಮನಸ್ಸಿಗೆ ತೋಚಿದ ವಿಷಯಗಳ  ಮೇಲೆ ಕೆಲವು ಸಾಲುಗಳನ್ನು ಕವನಗಳನ್ನಾಗಿ ಬರೆದ್ದಿದೇನೆ. ನಾನು ಸಹ್ಯಾದ್ರಿ ಕಾಲೇಜಿನಲ್ಲಿ ಬಿ. ಎಸ್ಸಿ ಪದವಿ  ಓದುತಿರುವಾಗಲೇ ಕವನಗಳು ಬರೆಯುವ ಗೀಳಿತ್ತು  ಆದರೇ ಸರಿಯಾದ ಸಮಯವನ್ನು ಕೊಟ್ಟಿರಲಿಲ್ಲ ಹಾಗು ನನ್ನ ಕವನಗಳು ಆಟೋಗ್ರಾಫ್ಗೆ  ಮಾತ್ರ ಸೀಮಿತವಾಗಿದ್ದವು. ಮತ್ತೆ ನನಗೆ ಕವನವನ್ನು ಬರೆಯುವ ಉತ್ಸಾಹ  ಬಂದಿದ್ದು 2016ರಿಂದ ಸಹ್ಯಾದ್ರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಪ್ರಾರಂಬಿಸಿದಾಗಿನಿಂದ, ನನ್ನ  ಬಿಡುವಿನ ಸಮಯದಲ್ಲಿ  ಕವನ ರಚಿಸುತ್ತಿದೇನೆ ಹಾಗು ಈ ಕವನಗಳ್ಳನ್ನು  ಒಂದು ಕಿರು ಪುಸ್ತಕವನ್ನಾಗಿ ಪ್ರಕಟಿಸುವ ಅಭಿಲಾಷೆ ಇದೆ, ನೀವುಗಳು ನನ್ನ ಕವನಗಳ್ಳನ್ನು ಓದಿ, ತಮ್ಮ ಅನಿಸಿಕೆ ವ್ಯಕ್ತ ಪಡಿಸಿ  ಪ್ರೋತ್ಸಹಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳಿತ್ತಿದ್ದೇನೆ  ಇಂತಿ ನಿಮ್ಮ ಪ್ರೀತಿಯ  ಡಾ. ಚಂದ್ರಶೇಖರ. ಸಿ. ಹೆಚ್ ಅತಿಥಿ ಉಪನ್ಯಾಸಕ  ರಸಾಯನಶಾಸ್ತ್ರ ವಿಭಾಗ  ಸ್ನಾತಕೋತ್ತರ ಕೇಂದ್ರ, ಕಡೂರ  ಕುವೆಂಪು ವಿಶ್ವವಿದ್ಯಾಲಯ 

🌺🌻🌼ಹೂವೂoದು ಬಳಿ ಬಂದು🌺🌻🌼

ಹೂವೂoದು  ಬಳಿ ಬಂದು ಹೇಳಿತು  ಚೆಲುವೆಲ್ಲಾ  ನನದೆಂದು  ದುಂಬಿಯೊಂದು  ನಸುನಕ್ಕುಹೇಳಿತು  ಈ ಮಕರಂದ ನನದೆಂದು  ಸೂರ್ಯನು ಕೆಂಪಾಗಿ  ಕಿರಣವು ಭೂಮಿ ತಾಗಿ  ಹೇಳಿದನು ಬೆಳಕೆಲ್ಲ ನಾನೆಂದು  ಚಂದ್ರನು ತಂಪಾಗಿ  ಕತ್ತಲೆ ಕಳೆದೋಗಿ  ಹೇಳಿದನು ಈ ರಾತ್ರಿಯೇ ನನಗೆಂದು  ಕೋಳಿಯು ಕೂಗುತ  ಮಾನವರನು ಬಡಿದೆಬ್ಬಿಸಿ  ಹೇಳಿತು ಮುಂಜಾನೆ ನನದೆಂದು  ಕೋಗಿಲೆಯ ಕುಹೂ ಕುಹೂ  ಅರಳಿದ ಚಿಗುರು  ಹೇಳಿತು ವಸಂತಮಾಸವೇ ನಾನೆಂದು  ದಟ್ಟನೆಯ ಕಾಡಲ್ಲಿ  ಕೆರಳಿದ ಸಿಂಹವು  ಹೇಳಿತು  ಕಾಡಿನ ರಾಜ ನಾನೆಂದು  ಆವಿಯು ಆಕಾಶ  ಸೇರಿ  ಮೋಡವು ಹೇಳಿತು  ಮಳೆ ಹನಿಯೇ ನಾನೆಂದು  ಪ್ರಕೃತಿಯು ಹಸಿರಾಗಿ  ಜೀವಿಗಳ ಉಸಿರಾಗಿ ಕೇಳಿತು  ಎಲೆ ಮಾನವ ನೀನು  ಯಾರು ಹೇಳೆಂದು  ನಸುನಕ್ಕು ಮಾನವನು  ಪ್ರಕೃತಿಗೆ ಸೆಡ್ದುವೂಡೆದು  ಗರ್ವದಿ ಹೇಳಿದನು  ಬುದ್ದಿ ಜೀವೆಯೇ ನಾನೆಂದು  ಪ್ರೀತಿಯಲ್ಲಿ ಕಂಗೊಳಿಸಿ  ಪೂಜೆಯನ್ನು ಸ್ವೀಕರಿಸಿ  ಆ ದೇವರೇ ಹೇಳಿದನು ಈ ಸೃಷ್ಟಿ ನನದೆಂದು  *******ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

🙏🙏ಸಣ್ಣ ಕವನಗಳು -6🙏🙏

💃💃 ನನ್ನ ಮನದೆನ್ನೆ 💃💃 ನೀ ನನ್ನ ಮನದೆನ್ನೆ  ಮಾಡುವೆ ಏಕೆ ಕಣ್ಣಸನ್ನೆ  ಸೂರೆ ಒಡೆದೆ ನನ್ನನ್ನೇ  ಕಾಡುವೆಯಲ್ಲೇ ಹೃದಯವನ್ನೇ  ನೀ ಇಲ್ಲದ ಆ ನೆನ್ನೆ  ನನಗೆ ತೋರುತಿಹುದು ಇಂದು ಬರಿ ಸೊನ್ನೆ   🐀🐀 ಗಣೇಶ 🐀🐀 ನಿನಗ್ಯಾಕೆ ಬಂತು ಈ ಸಿಟ್ಟು  ಮಾಡುವುದಿಲ್ಲ ನಾ ಯಡವಟ್ಟು ಹೇಳುವೆಯೇನು ನಿಜ ಜೀವನದ ಗುಟ್ಟು  ಗೌರಿ ಗಣೇಶ ಹಬ್ಬದ ತಂಬಿಟ್ಟು  ಜೀವನವೆಂಬುದು ಉಪ್ಪಿಟ್ಟು  ಎಲ್ಲರೂ ಸವಿಯುವ ಖುಷಿಪಟ್ಟು   🙎🏼‍♀️🙎🏼‍♀️ ಸ್ಪರ್ಶಿಸು ನನ್ನ 🙎🏼‍♀️🙎🏼‍♀️ ಕಲಿಯುವ ಮುನ್ನ  ಕಾಡಿಸು ನೀ ನನ್ನ  ಬರೆಯುವ ಮುನ್ನ  ನೀ ಪ್ರೀತಿಸು ನನ್ನ  ಕರೆಯುವ ಮುನ್ನ  ನೀ ಕಾಣಿಸು ಚಿನ್ನ  ಮರೆಯುವ ಮುನ್ನ  ನೀ ಮೋಹಿಸು ಎನ್ನ  ನೋಯಿಸುವ ಮುನ್ನ  ನೀ  ಸ್ಪರ್ಷಿಸು ನನ್ನ ******ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್

🌹❤💃ಒಲವಾಯಿತು ನನಗೆ 💃❤🌹

ಒಲವಯಿತು ನನಗೆ  ನಿನಮೇಲೆ ಹಾಗೆ  ಮಳೆ ಬಂದು ಹನಿಯೊಂದು  ಎಲೆಯನ್ನು ಮುತ್ತಿಟ್ಟ ಹಾಗೆ  ಮನಸಿನ ಅಸೆ ಹೇಳುವೆ ನಾನು  ಕನಸಿಗೆ ಬಂದ ರಾಣಿಯು ನೀನು  ಚೆಲುವಾದ ಮೊಗವು ಸುಂದರ ನಗುವು  ಕಾಡಿದೆ ನನ್ನ ಕೇಳುವೆಯ ನೀನು  ಏಳು ಬಾ ನನ್ನ ಹೃದಯವೇ  ಎದೆ ಬಡಿತ ನೀನೆಂದು  ನನ್ನ ಉಸಿರ ಏರಿಳಿತಾ  ನಿನಗಾಗಿ ಹುಡುಕುತಿದೆ  ನಿನ ಚೆಲುವು ನನಗೆಂದು  ಕಣ್ಣ ಸನ್ನೆಯಲಿ ಕಾಡಿ  ಹೃದಯದಿ ಮನೆ ಮಾಡಿ ಮನಸಿನಾ ಕದ ತೀಡಿ ಒಳ ಬಂದು ನನ ನೋಡಿ  ನೀನೇಕೆ ನಗುವೇ  ಬಾ ಬಾರೆ ಚೆಲುವೆ  ಒಲವಯಿತು ನನಗೆ  ನಿನಮೇಲೆ ಹಾಗೆ  ಮಳೆ ಬಂದು ಹನಿಯೊಂದು  ಎಲೆಯನ್ನು ಮುತ್ತಿಟ್ಟ ಹಾಗೆ  ಪ್ರೀತಿಯು ಮಕರಂದ  ನಾ ಬಂದೆ ಒಲವಿಂದ  ಕಣ್ಣ ಮುಂದೆ ಬಾರೆ  ಮೊಗವನ್ನು ತೊರೆ  ನೋಟವು  ಮಿಂಚಂತೆ  ಮಾತುಗಳು ಸಿಡಿಲಂತೆ  ಮಳೆ ಹನಿಯು ಬಿದ್ದಂತೆ  ಹನಿಯೊಂದು ತಾಗಿ  ಕರೆದಂತೆ ನನ ಕೂಗಿ  ಬಳಿಬಂದೆ ನಿನಗಾಗಿ  ಹೇಳುವೆನು ಪ್ರೀತಿಯನು  ಸೋತಿಹೆನು ನಿನಗಿನ್ನೂ  ಒಪ್ಪಿಗೆಯ ನಿ ನೀಡು  ಒಮ್ಮೆ ನನ ನೋಡು  ಪ್ರಾಣವನ್ನೆ ನಾ ಕೊಡುವೆ  ನಿನಗಾಗಿ ಚೆಲುವೆ  ಒಲವಯಿತು ನನಗೆ  ನಿನಮೇಲೆ ಹಾಗೆ  ಮಳೆ ಬಂದು ಹನಿಯೊಂದು  ಎಲೆಯನ್ನು ಮುತ್ತಿಟ್ಟ ಹಾಗೆ  ******ರಚನೆ ****** ಡಾ. ಚಂದ್ರಶೇಖರ. ಸಿ .ಹೆಚ್

🙏🙏ಸಣ್ಣ ಕವನಗಳು -5🙏🙏

😔😔 ಮುನಿಸು 😔😔 ನಾ ನಿನ್ನ ನೋಡಿದ ಮೇಲೆ ಹಾಯಿತು ಮುನಿಸು  ನೀ ನನ್ನ ನೋಡುವಾಗ ಹಾಯಿತು ಕನಸು  ಕನಸು ಮತ್ತು ಮುನಿಸುಗಳ  ಮದ್ಯೆ ನಡೆಯುವ ಜೀವನವೇ ಸೊಗಸು  🖋️🖋️ ಒಂದು ಕವನ 🖋️🖋️ ಬರೆಯಲೇ ನಾನು ಒಂದು ಕವನ  ಹೇಳುವೆಯೇನು ನಿನ್ನ ಜನನ  ದಿನ ಪೂರ್ತಿ ಆಗುವುದೇ ಮನನ  ಸೆಳೆಯುವೇಯ ನೀನು ಗಮನ  ಇದುವೇ ನಮ್ಮಯ ಈ ಜೀವನ  🎂🎂 ನಿನ್ನಯ ಜನನ 🎂🎂 ಇದುವೇ ಇಂದು ನಿನ್ನಯ ಜನನ  ಸಂಭ್ರಮವಿರಲಿ ತಪ್ಪದೆ ಈ ದಿನ  ಈ ನಿನ್ನ ಜನನಕೆ ನನ್ನ ಶುಭನಮನ  ನಿನಗಾಗಿ ನಾ ಬರದೇ ಸಣ್ಣ ಕವನ  *******ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್

🚬🚬🌿ಗಾಂಜಾದ ಗಮ್ಮತ್ತು🌿🚬🚬

ಗಾಂಜಾದ ಗಮ್ಮತ್ತು ತುಳಸಿಗೆ ಆಪತ್ತು  ತುಳಸಿಯು ಒಲವೋ ಗಾಂಜಾದ ನಲಿವೋ  ದೇವರು ಕೊಟ್ಟ ಪ್ರೀತಿಯ ವರವೋ  ಮಾನವರು ಸ್ವರ್ಗವ ಗೆದ್ದ ಗೆಲುವೋ  ತುಳಸಿಯಾ ಗಿಡವು ಪೂಜುವ ದೇವರಂತೆ  ಗಾಂಜಾದ ಗಿಡವು ಮಾನವ ಸೇದುವ ಬಂಗಿಯಂತೆ  ದೇವರ ಕಾಣಲು ತುಳಸಿಯಾ ಪೂಜೆ  ಸ್ವರ್ಗವ ನೋಡಲು ಗಾಂಜಾದ ಸೇವೆ  ಒಲಿಯುವನೇ ದೇವರು ಪೂಜೆಯ ಕಂಡು  ಮಾನವನು ಸೇದುವ ಗಾಂಜಾದ ತುಂಡು  ಗಾಂಜಾದಲ್ಲಿ ಓಷಧೀಯ ಗುಣವಿದೆಯಂತೆ  ಸೇದಲು ಸ್ವರ್ಗವು ಬಳಿ ಬರುವುದಂತೆ  ತುಳಸಿಯ ಪೂಜೆ ಗಾಂಜಾ  ಸೇವೆ  ದೇವರನು ಒಲಿಸುವ ಮಾಡುವ  ಚಲವೇ  ಕಾಲವು ಬದಲಾಯಿತು ತುಳಸಿಯಪೂಜೆಯುನಿಂತೋಯಿತು  ಗಾಂಜಾದ  ನಶೆಯು ಮೈಮೇಲೆ ಬಂದಾಯಿತು  ತುಳಸಿಯ ಬಿಟ್ಟು ಗಾಂಜಾವಾ ಸುಟ್ಟು  ನಶೆಯೇರಿದ ಮೋಜಿನ ಗುಟ್ಟು  ತುಳಸಿಯ ಗಿಡವೋ ಗಾಂಜಾದ ಗಿಡವೋ  ಮಾನವರು ತೋರುವ ಪ್ರೀತಿಯ ಒಲವೋ  ******ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್

🙏🙏ಸಣ್ಣ ಕವನಗಳು -4🙏🙏

⛈️⛈️🌈 ಪ್ರೀತಿಯ ಸೆಳೆತ 🌦️🌦️🌈 ಆಕಾಶದ ಮೋಡದಲಿ ಗುಡುಗಿನ ನರ್ತನ  ಗುಡುಗಿನ ಜೊತೆಗೆ ಮಿಂಚಿನ ಸೆಳೆತ  ಸುರಿಯುತ್ತಿರುವ ಆ ತುಂತುರು  ಮಳೆ ಹನಿಯ ಕೊರೆತ  ಹುಟ್ಟುವುದೇ ನಮ್ಮಿಬರಿಗೂ ಪ್ರೀತಿಯ ಸೆಳೆತ  🤦🏻‍♂️🤦🏻‍♂️ ಚಿಂತಿಸುವ ಮುನ್ನ 🙆🏽‍♂️🙆🏽‍♂️ ಚಿಂತಿಸುವ ಮುನ್ನ  ಒಮ್ಮೆ ಯೋಚಿಸು  ಯೋಚಿಸುವ ಮುನ್ನ ಒಮ್ಮೆ ಪ್ರೀತಿಸು  ಪ್ರೀತಿಸುವ ಮುನ್ನ ಒಮ್ಮೆ ನಕ್ಕು ಸಾಯಿಸು  ಸಾಯಿಸುವ ಮುನ್ನ ನನ್ನ ಕನಸನ್ನು ಪೂರೈಸು  ಪ್ರೇಮದಲ್ಲಿ ನೀ ನನ್ನ ಕ್ಷಮಿಸು  💃💃💃 ಸಾಹಿತ್ಯ 💃💃💃 ನಿನ್ನಯ ಹೆಸರು ಸಾಹಿತ್ಯ  ಬಯಸದೆ ಬಂದ ಸಾಂಗತ್ಯ  ಪ್ರೀತಿಸುವೆ ನಿನ್ನ ದಿನ ನಿತ್ಯ  ಹೇಳಬೇಡ ನೀನು ದಿನ ಮಿಥ್ಯ  ಪೂಜಿಸಲಾರೆ ಇದು ಸತ್ಯ *******ರಚನೆ ***** ಡಾ. ಚಂದ್ರಶೇಖರ. ಸಿ. ಹೆಚ್

❤❤🌹 ವರ್ಜಿನ್ 🌹 ❤❤

  🌹🌹❤ಪ್ರಿಯ ಗೆಳೆಯರೇ ❤🌹🌹 ನಾನು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಹುಡುಕುತಿದ್ದಾಗ ವರ್ಜಿನ್ ಎಂಬ ಪುಸ್ತಕ ನನ್ನ  ಕಣ್ಣಿಗೆ ಬಿತ್ತು. ಈ ಪುಸ್ತಕದ ಹೇ ಸರನ್ನು ಮೊದಲ ಬಾರಿ  ಕೇಳಿದಾಗ ಎಲ್ಲರು ಯೋಚಿಸಿವ ರೀತಿಯಲ್ಲೇ ನನಗು ಯೋಚನೆ ಬಂತು.  ಆ ಮೇಲೆ ತಿಳಿಯಿತು ಇದು ಒಂದು ಕಂಪನಿಯ ಹೆಸರು ಸ್ಥಾಪಕ ರಿಚರ್ಡ್ ಚಾರ್ಲ್ಸ್ ನಿಕೋಲಸ್ ಬ್ರಾನ್ ಸನ್ ಎಂದು ಇದು ಅವರ ಆತ್ಮ ಚರಿತ್ರೆ ಹಾಗು ಇವರು   ಅಪ್ರತಿಮ ಬಿಸಿನೆಸ್ ಮ್ಯಾನ್, ಉತ್ತಮ ಮಾನವೀಯ ಗುಣಗಳು ಉಳ್ಳಾ ವ್ಯಕ್ತಿ. ಸಾಹಸಿಗ, ಧೈತ್ಯ ಕಂಪನಿ ಕಟ್ಟಿ ಬೆಳಿಸಿದ ಅಸಾಧಾರಣ ವ್ಯಕ್ತಿ, ಸಾವಿರಾರು ಕೋಟಿಗಳ ಒಡೆಯ    ಎಂದು. ನಾನು ವರ್ಜಿನ್ ಪುಸ್ತಕವನ್ನು ಓದಿದ ಮೇಲೆ ನನಗು ಕವನ ಬರೆಯಲು ಮನಸ್ಸಾಯಿತು ನನಗೆ ತೋಚಿದ ಪದಗಳಿಂದ ಕವನವನ್ನು ಬರೆಯಲು ಪ್ರಯತ್ನಿಸಿದ್ದೇನೆ. ಓದಿ ನಿಮ್ಮ ಅನಿಸಿಕೆಯನ್ನು  ಕಾಮೆಂಟ್ ಮಾಡಿ ಮತ್ತು ದೋಷವಿದ್ದಲ್ಲಿ ಕ್ಷಮಿಸಿ.  🌹❤❤❤ ವರ್ಜಿನ್ ❤❤❤🌹 ಹೇಳಲು ಹೊರಟೆ ಒಂದು ಕವನ   ವರ್ಜಿನ್ ಕಂಪನಿ ಬೆಳೆದ ಸುಂದರ ಕಥನ  ರಿಚರ್ಡ್ ಬ್ರಾನಸನ್  ಬೆಳೆದ ಪರಿ  ತಿಳಿದರೆ ಆಗುವುದು ನಿಮಗೆ  ಅಚ್ಚರಿ  ಹದಿನಾರನೇ ವಯಸ್ಸಿನ ಸುಂದರ ಪೋರ  ಕಟ್ಟಿದ ಒಂದು ವರ್ಜಿನ್ ಎಂಬ ಶಿಖರ.  ಓದಲಿ ಇವನು ಇಂದೆ ಬಿದ್ದ  ಗೆಳೆಯರ ಮನವನು ಗೆದ್ದ  ಶುರುಮಾಡಿದ ಒಂದು ಸ್ಟೂಡೆಂಟ್  ಪತ್ರಿಕೆಯನ್ನು  ಗೆಲ್ಲಲ್ಲು ಯುವಕರ ಹೃದಯವನ್ನು  ಚಲದಲಿ ಬೆಳೆಯಿತು ಇವನ ಪತ್ರಿಕೆ  ಸ್ಪಂದಿಸಿತು ಜನಗಳ ಕಷ್ಟಕೆ  ಇವನ ಕಂಪನ

🙏🙏ಸಣ್ಣ ಕವನಗಳು -3🙏🙏

🌹 ಮನಸ್ಸೆಂಬ ಮನೆ 🌹  ಮನಸ್ಸು  ಎಂಬ ಮನೆಯಲ್ಲಿ  ಕನಸು ಎಂಬ ಬಾಗಿಲು ತೆರೆದು  ಜೀವನ ಎಂಬ ಗಾಡಿಯಲ್ಲಿ  ಹೃದಯ ಎಂಬ ತಂತಿ ಮಿಡಿದಾಗ  ಹುಟ್ಟುವುದೇ ಈ ಪ್ರೀತಿ......  🌹 ಮನಸ್ಸಿನ ಅಲೆ 🌹 ಮನಸ್ಸಿನ ಅಲೆಯಲ್ಲಿ  ಮೌನದ ಮಿಡಿತ......  ಎದೆಯ    ಅಂಗಳದಲ್ಲಿ  ಹೃದಯದ ಬಡಿತ.........  ಸೆಳೆಯುತ್ತಿದೆ ನನ್ನ  ಈ ಪ್ರೇಮದ  ಸೆಳೆತ........  ಸಾಗಬಹುದೇ ನಾವು  ನಮ್ಮನು ನಾವು ಮರೆಯುತಾ........  ******ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್ 

🌹💃❤ಪ್ರೀತಿಸುವೆಯ ನನ್ನ ನೀನು💃❤ 🌹

  ಹುಡುಗಿ ನಿನ್ನ ನೋಟ ಚೆಂದ  ಪ್ರೀತಿಯಲ್ಲಿ ನೀನು ಅಂದ  ಚೆಲುವಿನಲ್ಲಿ ಹೊಳಪು ನೀನು  ಮಾತಿನಲ್ಲಿ ಕೋಲಜೇನು  ನೀನು  ಒಲವ ಹೂವಿನಂತೆ  ಸುತ್ತುತಿಹೇನು ದುಂಬಿಯಂತೆ  ಹೇಳುವೆಯೇನು ನಿನ್ನ ಹೆಸರು  ಪ್ರೀತಿಗಾಗಿ ಕೊಡುವೆ ಉಸಿರು  ಮಾತು ಒಂದೂ ಮಧುರ ಗಾನ  ನಿನ್ನ ಪ್ರೀತಿ ತುಂಬ ಮೌನ  ನಿನ್ನ ಕಣ್ಣ ಸನ್ನೆ ನೋಡಿ  ನಾನು ಬಂದೆ ಓಡಿ ಓಡಿ  ನಗುವಿನಲ್ಲಿ ಎನೋ ಸೆಳೆತ l ತುಡಿಯುತಿದೆ ಪ್ರೀತಿ ಮೊರೆತ  ಏರುತಿದೆ ಹೃದಯ ಬಡಿತ  ಮನವು ಹೇಳುತ್ತಿದೆ ಲವ್ ಯು ಅಂತ  ನೀನು ಒಂದೂ ಗೊಂಬೆಯಂತೆ  ಪ್ರೀತಿಸುವೆನು ಬಿಡು ಚಿಂತೆ  ಭಯವ ಬಿಟ್ಟು ಪ್ರೀತಿ ಮಾಡು  ಒಲವು ಎಷ್ಟು ಸುಂದರ ನೋಡು  ಮನಸ್ಸು ತುಂಬ ನಿನದೆ ಧ್ಯಾನ ಮಾತಾಡು ನೀನು ಮುರಿದು ಮೌನ  ಹೇಳು ಒಮ್ಮೆ ಪ್ರೀತಿಸುವೆನು  ಪ್ರೇಮಕ್ಕಾಗಿ ಕಾಯುತಿಹೆನು  ನೀನು ಒಮ್ಮೆ ಒಪ್ಪಿ ನಕ್ಕರೆ  ಹಾಲು ಜೇನಿನಂತೆ ಜೀವನವು ಸಕ್ಕರೆ.  ******ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್

🙏🙏ಸಣ್ಣ ಕವನಗಳು -2🙏🙏

 🌹 ಹೃದಯದ ಕವನ 🌹 ಒಲವಿನ ಜೊತೆಗೆ  ಹೃದಯದ ಕವನ  ಹೃದಯದ ಜೊತೆಗೆ  ನನ್ನ ಮನಸ್ಸಿನ ಕಥನ  ಬರೆದೇನು ನಾನು  ಈ ಮೌನದ ಕವನ  ಜೊತೆಯಾಗಿ ಸಾಗುವುದೆ  ನಮ್ಮ ಜೀವನ ಪಯಣ  🌹 ಹೃದಯವನು ಕೊಂದು 🌹 ಹೃದಯವನ್ನು ಕೊಂದು  ನೋವನ್ನು ತಂದು  ಜೀವನದಿ ಬೆಂದು  ಒಲಿದವಳು ನೀನೆಂದರೆ ತಪ್ಪೇನು  🌹 ಕಳೆದ ಹೊತ್ತು   🌹 ಅರಿಯದೆ ಆಡಿದ ಆ ಮಾತು  ಬಗೆಹರಿಯದೆ ಕಳೆದ ಈ ಹೊತ್ತು  ತಂದು ಕೊಡುವುದೇ ನಮ್ಮ ಜೀವನಕ್ಕೆ  ಸಂಪತ್ತು  ********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್ 

🌅🌅ದೀಪಾವಳಿ ಹಬ್ಬ 🌅🌄

  ದೀಪಾವಳಿ ಹಬ್ಬ ಬಂತು  ಬಾಳಲ್ಲಿ ಸಡಗರವ ತಂತು  ಹಣತೆಯ ಸಾಲು ಸಾಲು  ಜೀವನದಿ ಗೆಲುವು ತರಲು  ದೀಪಾವಳಿಯು ನಿಮಗೆ  ತರಲಿ ಹೊಂದು ಹೊಸಬಗೆ  ಖುಷಿಯನ್ನು ಹೊತ್ತು ಬರಲಿ  ಗೆಲುವನ್ನು ಪ್ರತಿಸಲವೂ ಕೊಡಲಿ  ಪ್ರೀತಿಯು ಹೃದಯವನ್ನು ತುಂಬಲಿ   ಮಕ್ಕಳು ಹೊಸ ವಸ್ತ್ರ ತೊಟ್ಟು  ಮಹಿಳೆಯರು ಸೀರೆ ಉಟ್ಟು  ಪುರುಷರು ಹೊಸ ಉಡುಪು ತೊಟ್ಟು  ಸಂಭ್ರಮಿಸುವರು ಖುಷಿಯ ಪಟ್ಟು  ದೀಪದಿಂದ ದೀಪ ಹಚ್ಚಿ  ಬೆಳಕು ಬಂದು ಕೊಳೆಯ ಕೊಚ್ಚಿ  ಮನಸ್ಸನ್ನು ಶುಭ್ರ ಮಾಡಿ  ಹೊಸತನವು ಜೀವನದಿ ಮೂಡಿ  ಹರುಷ ತುಂಬಲಿ ಬಾಳೆಲ್ಲ  ದೂರ ಹೋಗಲಿ ನೋವೆಲ್ಲಾ  ಪಟಾಕಿಯ ಸದ್ದು ಜೋರು  ಚಿಣ್ಣರ ನಲಿವಿನ ತೇರು  ಪಟಾಕಿಯನ್ನು ಅಳಿಸಿ  ಪರಿಸರವನ್ನು ಉಳಿಸಿ  ಹಬ್ಬದ ಅಡುಗೆ ಘಮ  ಊರ ತುಂಬ ಸಂಭ್ರಮ  ಹೊಬ್ಬಿಟಿನ ಊಟವಂತೆ   ಸವಿ ಭೋಜನದ  ಸಂತೆ  ದೀಪಾವಳಿಯ ವಿಶೇಷವಂತೆ  ಪಟಾಕಿಯನ್ನು ಅಳಿಸಿ ಪರಿಸರವನ್ನು ಉಳಿಸಿ  ದೀಪಾವಳಿಯನ್ನು ಸಂಭ್ರಮಿಸಿ *****ರಚನೆ ***-*- ಡಾ. ಚಂದ್ರಶೇಖರ. ಸಿ . ಹೆಚ್ 

🙏🙏ಸಣ್ಣ ಕವನಗಳು-1🙏🙏

 🙏🙏🙏ಪ್ರೀತಿಯ ಗೆಳೆಯರೆ 🙏🙏🙏 ನನ್ನ  ಕವನದ ಸಾಲುಗಳು ಶುರುವಾಗಿದ್ದು ಮೂರು ಸಾಲುಗಳಿಂದ, ಕೆಲವಾರು ದಿನಗಳು ನಾನು ಬರೆಯಲು ಪ್ರಯತ್ನಿಸಿದಾಗ ಸಣ್ಣ ಸಣ್ಣ ಕವನಗಳು ಮೂಡಿದವು. ಆ ಕವನಗಳನ್ನು ನಾನು ಪ್ರಕಟಿಸುತಿದ್ದೇನೆ. ಕವನಗಳು ಇಷ್ಟವಾದಲ್ಲಿ ಅಥವಾ ಇಲ್ಲವಾದಲ್ಲಿ  ಅನಿಸಿಕೆಗಳನ್ನು ವ್ಯಕ್ತಪಡಿಸಿ  ಇದು ನನ್ನ  ಸಣ್ಣ ಪ್ರಯತ್ನ.  🌹ಹಚ್ಚಿ ಲಗತೀ   ಹೋ 🌹 ಹಚ್ಚಿ ಲಗತೀ ಹೋ ಕುಬಸುರತ್  ನಹೀ  ಕುಬಸುರತ್  ಲಗತೀ ಹೋ ಪ್ಯಾರ್ ನಹೀ  ಪ್ಯಾರ್ ಲಗತೀ ಹೋ ಮೇರಾ ನಾಮ್ ನಹೀ  🌹ಜೀವನದ  ಕಲೆ 🌹 ಜೀವನವೆಂಬುದು ಕಲೆ ಅರಿತವನಿಗೆ ಇಲ್ಲಿದೆ ಬೆಲೆ  ಇಲ್ಲವೆಂದರೆ ಅವನ ಕೊಲೆ  🌹 ಗೆಲುವು ಒಲುವು 🌹 ನೀ ನನ್ನ ಮುಟ್ಟಿದರೆ ಒಲವು  ನಾ ನಿನ್ನ. ಮುಟ್ಟಿದರೆ ಗೆಲುವು  ಆಗಬಹುದೇ ನಮಗೆ ಒಂದೆರಡು ಮಗುವು ****ರಚನೆ **** ಡಾ. ಚಂದ್ರಶೇಖರ. ಸಿ. ಹೆಚ್ 

🐳🐋ಮೀನಾದೆ ನಾನು 🐬🐟

  ಪ್ರೀತಿಯ ತೋರಣಕೆ  ಎಲೆಯಾದೇ ನೀನು  ಬಾಳಲ್ಲಿ ಬಂದ  ಒಲವಾದೇ  ನೀನು  ಚೆಲುವಿನ  ನಗುವಿಗೆ  ಸೆರೆಯಾದೆ ನಾನು  ಮಾತಿನಾ ಕಡಲಲ್ಲಿ  ಮಿನುಗುತಿಹ  ನೋಟಕ್ಕೆ  ಬಲಿಯಾದೆ ನಾನು  ಮೋಹಕ ನಗುವು  ಸೆಳೆತದ  ಚೆಲುವು  ಹರಿಯದ ಮನಧಿ  ಮಾಯವಾದೆ ನಾ  ನಿನ್ನಯ  ನಡಿಗೆ  ನವಿಲಿನ ನಾಟ್ಯ  ನಾಟ್ಯವ ನೋಡಿ  ಕಳೆದೋದೆ ನಾ  ಮಾತಲ್ಲಿ ಇಂಪು  ಮನಸಲಿ ಕಂಪು  ನುಡಿಯಲಿ ನಿನಗೆ ವಶವಾದೆ ನಾ  ನಿನ್ನಯ  ಬಲೆಗೆ  ಬಿದ್ದ  ನಾನು  ನೀರೇ ಇಲ್ಲದ  ಮೀನಾದೆ  ನಾ  *********ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್ 

🌿🌾🌴ರೈತನೇ ನಮ್ಮ ಉಸಿರು 🍇🍋🥦

ರೈತನಾ ಶ್ರಮ ಸಿರಿವಂತರು ಅನುಭವಿಸುವ ಘಮ.  ಹೊಲದಲ್ಲಿನ ಬೆಳೆ  ಕೈ ಕೊಟ್ಟರೆ ರೈತರ  ಜೀವನವೇ ಕೊಳೆ  ಬಿತ್ತಿದ ಬೆಳೆಗೆ ಬೆಲೆಯಿಲ್ಲ  ಮಧ್ಯವರ್ತಿಗಳ ಸುಲಿಗೆಗೆ  ಕೊನೆಯಿಲ್ಲ  ರೈತನ ಶ್ರಮಕ್ಕೆ ನಲಿವಿಲ್ಲ  ರೈತನೇ ದೇಶದ ಬೆನ್ನೆಲುಬು  ಮುರಿಯದಿರೋಣ ರೈತನ  ಪಕ್ಕೆಲುಬು  ರೈತರ ಹೆಸರಲಿ ವೇಷ  ವೇಷದ ನೆಪದಲ್ಲಿ  ರೈತನ ನಾಶ  ಬೆಳೆದ ಬೆಳೆಗಿಲ್ಲ ಕಿಮ್ಮತು  ರೈತನ ಜೀವನದಲ್ಲಿ ಇಲ್ಲ  ಗಮ್ಮತ್  ದೇಶದ ಆಧಾರವೇ ರೈತ  ಸಾಲದ ಸುಳಿಯಲ್ಲಿ ಸಿಕ್ಕ  ರೈತನ ಜೀವ ಒಂದು ಪ್ರೇತ  ರೈತನ ಸಾವಿಗೆ ಕೊನೆಯಿಲ್ಲ  ಬೆಳೆದ ಬೆಳೆಗೆ ಬೆಲೆಯಿಲ್ಲ  ಅವನ ಸಂಸಾರಕೆ ದಿಕ್ಕಿಲ್  ರೈತರ ಹೆಸರಲ್ಲಿ ಧರ್ಬಾರು  ಗೂಟದ ಕಾರಿನ ಕಾರ್ಬಾರು  ರೈತ ಬೆಳೆದ ಅನ್ನ  ತಿನ್ನುವವರ ಪಾಲಿನ ಚಿನ್ನ  ಆದರೂ ರೈತನ ಜೇಬಿಗೆ ಕನ್ನ  ರೈತನ ಬೆಳೆದ ಹಸಿರು  ನಮ್ಮೆಲ್ಲರ ಉಸಿರು ರೈತರಿಗಾಗಿ ಕೈಜೋಡಿಸೋಣ  ದುಃಖ್ಖವನು ಓಡಿಸೋಣ  ದೇಶವನ್ನು ಗೆಲ್ಲಿಸೋಣ  ******ರಚನೆ ***** ಡಾ. ಚಂದ್ರಶೇಖರ. ಸಿ. ಹೆಚ್  

🕺👫👭ಕಾಲೇಜು ಲೈಫು ಚೆಂದ 💃💃👭

ವಿದ್ಯಾರ್ಥಿಗಳ ಜೀವನ  ನೋವು ನಲಿವಿನ ಪಯಣ  ಮುಗಿಸಿದೆವು ನಾವು  ಹೈಸ್ಕೂಲ ನು  ಸೇರಿದೆವು ನಾವು  ಕಾಲೇಜೇನು  ಹುಡುಗರ ಹೆದೆ ಬಡಿತ  ಹುಡುಗಿಯರು  ಹುಡುಗಿಯರ ಕಣ್ಣಸೆಳೆದ  ಹುಡುಗರು  ಮಾತಿನಲ್ಲೇ  ಮೋಜು ಮಸ್ತಿ  ಪ್ರೀತಿಸಿದ ಹುಡುಗಿಗಾಗಿ  ಜಂಗಿ ಕುಸ್ತಿ  ಪ್ರೊಪೋಸ್ ಮಾಡಿಬಿಟ್ಟೆ  ನನ್ನ ಹುಡುಗಿಗೆ  ಒಪ್ಪಿಕೊಂಡ್ರೆ ಪ್ರೀತಿ ಜೋರು  ಇಲ್ಲ ಅಂದ್ರೆ ಜೀವನ ಬೋರು  ಸೋತ ಪ್ರೀತಿಗಾಗಿ ಕುಡಿತ  ಅವಳೇ ನನ್ನ ನಾಡಿ ಮಿಡಿತ  ಈ ನಮ್ಮ ಲೈಫ್ ಚೆಂದ  ಕ್ರಿಕೆಟ್ ಹಾಡಿದ ಆಟ ಅಂದ  ನಾವು ಹೋದ ಟೂರ್ ನೆನಪು  ಕ್ಲಿಕ್ಕಿಸಿದ ಫೋಟೋ ಒಳಪು  ಕಾಲೇಜು ಜೀವನ ಬೇಕು  ಪುಸ್ತಕದ ಗೀಳು ಸಾಕು  ಮುಗಿಸೇದವು ಎಕ್ಸಾಮಾನು  ಮುಂದಿನ ಪ್ಲಾನ್ ಏನು  ಯೋಚನೆಯೇ ಜೀವನವಿನ್ನೂ ಸುಮ್ಮನೆ ಇದ್ದು ಬಿಡಲೇ  ದುಡ್ಡಿಗಾಗಿ ನೊಂದು  ಬಿಡಲೇ  ಗೆಳೆಯನಿಗಾಗಿ ಜೀವ ಕೊಡಲೇ  ಪ್ರೀತಿಸಿದ ಪ್ರೇಮಿಗಾಗಿ  ಪ್ರಾಣ ತೆರಲೇ...  ಕಾಲೇಜು ಜೀವನ  ಸವಿನೆನಪುಗಳ ಸೋಪಾನ  ಮೆಲುಕು ಹಾಕುತ ಸವಿಯೋಣ  ಮುಂದಿನ ಗುರಿಯಡಗೆ  ನಾವು ನಗು ನಗುತಾ ಸಾಗೋಣ  ಡಾ. ಚಂದ್ರಶೇಖರ. ಸಿ. ಹೆಚ್               🌹🌹🌹

🏩🏡ಗ್ರಂಥಾಲಯವೆಂಬ ಮನೆ 🏠🏩

 ಗ್ರಂಥಾಲಯವೆಂಬ ಮನೆ  ಪುಸ್ತಕದ ಹೂವಿನಕೊನೆ  ಓದುತ ಕುಳಿತೆನು ಒಬ್ಬನೇ  ಪುಸ್ತಕವು  ನೂರಾರು  ಓದುತಿರಲು ಬಲು ಜೋರು  ಮನದ ಯೋಚನೆ ಸಾವಿರಾರು  ಹೇಗೆ ಕಲಿಯಲಿ ನಾ  ಈ ಪುಸ್ತಕವ ಮಸ್ತಕಕೆ  ಓದಿದೆ ಮೂರು ಬಾರಿ  ತಲೇಗೆ  ಅತುತ್ತಿಲ್ಲಾ  ಒಂದು ಸಾರಿ  ಏನೂ ಮಾಡಲಿ ನಾ  ಹೇಗೆ ಓದಲಿ ನಾ  ಸಿಟ್ಟಾಯಿತು ಮನಸ್ಸು  ಚೂರಾಯಿತು ಓದುವ ಕನಸು  ಮತೊಮ್ಮೆ ಪ್ರಯತ್ನ  ತಿರುಗಿ ಒಮ್ಮೆ ಯತ್ನ  ಹೀಗೆ ಸಾಗಿತು ಜೀವನದ  ಹೇಳು ಬೀಳಿನ ಸ್ವಪ್ನ  ಬಿಡದಾ ನನ್ನ ಛಲ  ಓದುತ ಕವನ ಸಂಕಲನ   ರಚಿಸಿದೆ ಒಂದು ಕವನ  ಕವನದ ಹೆಸರೇ ಸಿಂಚನ  ಗ್ರಂಥಾಲಯದ ಪಾಲಕ  ಪುಸ್ತಕಗಳ ಪೋಷಕ  ಅವರೇ ನಮ್ಮ  ಸ್ಪೂರ್ತಿ  ಓದುತ ನಾವು  ಗಳಿಸಿದ ಕೀರ್ತಿ  ಓದೋಣ ಒಳ್ಳೆ ಪುಸ್ತಕ  ಗಳಿಸೋಣ ಒಳ್ಳೆ ಜ್ಞಾಪಕ  ಹಂಚೋಣ ವಿದ್ಯೇಯ  ರಸಪಾಕ  ಗ್ರಂಥಾಲಯದ ನೆನಪು  ಪುಸ್ತಕಗಳ ಸವಿನೆನಪು  ಜೀವನಕೆ ನೀಡುವುದು ತಂಪು  ಪಸರಿಸೋಣ ಪುಸ್ತಕಗಳ ಕಂಪು ********ರಚನೆ ****** 🌹 ಡಾ.  ಚಂದ್ರಶೇಖರ. ಸಿ. ಹೆಚ್  ರಸಾಯನ ಶಾಸ್ತ್ರ,  ಉಪನ್ಯಾಸಕರು  ಸ್ನಾತಕೋತ್ತರ ಕೇಂದ್ರ, ಕಡೂರು  ಕುವೆಂಪು ವಿಶ್ವವಿದ್ಯಾಲಯ 🌹🌹