🙏🙏ಸಣ್ಣ ಕವನಗಳು -3🙏🙏
🌹ಮನಸ್ಸೆಂಬ ಮನೆ 🌹
ಮನಸ್ಸು ಎಂಬ ಮನೆಯಲ್ಲಿ
ಕನಸು ಎಂಬ ಬಾಗಿಲು ತೆರೆದು
ಜೀವನ ಎಂಬ ಗಾಡಿಯಲ್ಲಿ
ಹೃದಯ ಎಂಬ ತಂತಿ ಮಿಡಿದಾಗ
ಹುಟ್ಟುವುದೇ ಈ ಪ್ರೀತಿ......
🌹ಮನಸ್ಸಿನ ಅಲೆ 🌹
ಮನಸ್ಸಿನ ಅಲೆಯಲ್ಲಿ
ಮೌನದ ಮಿಡಿತ......
ಎದೆಯ ಅಂಗಳದಲ್ಲಿ
ಹೃದಯದ ಬಡಿತ.........
ಸೆಳೆಯುತ್ತಿದೆ ನನ್ನ
ಈ ಪ್ರೇಮದ ಸೆಳೆತ........
ಸಾಗಬಹುದೇ ನಾವು
ನಮ್ಮನು ನಾವು ಮರೆಯುತಾ........
******ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment