🙏🙏ಸಣ್ಣ ಕವನಗಳು -4🙏🙏


⛈️⛈️🌈 ಪ್ರೀತಿಯ ಸೆಳೆತ 🌦️🌦️🌈


ಆಕಾಶದ ಮೋಡದಲಿ ಗುಡುಗಿನ ನರ್ತನ 

ಗುಡುಗಿನ ಜೊತೆಗೆ ಮಿಂಚಿನ ಸೆಳೆತ 

ಸುರಿಯುತ್ತಿರುವ ಆ ತುಂತುರು ಮಳೆ ಹನಿಯ ಕೊರೆತ 

ಹುಟ್ಟುವುದೇ ನಮ್ಮಿಬರಿಗೂ ಪ್ರೀತಿಯ ಸೆಳೆತ 


🤦🏻‍♂️🤦🏻‍♂️ಚಿಂತಿಸುವ ಮುನ್ನ 🙆🏽‍♂️🙆🏽‍♂️


ಚಿಂತಿಸುವ ಮುನ್ನ  ಒಮ್ಮೆ ಯೋಚಿಸು 

ಯೋಚಿಸುವ ಮುನ್ನ ಒಮ್ಮೆ ಪ್ರೀತಿಸು 

ಪ್ರೀತಿಸುವ ಮುನ್ನ ಒಮ್ಮೆ ನಕ್ಕುಸಾಯಿಸು 

ಸಾಯಿಸುವ ಮುನ್ನ ನನ್ನ ಕನಸನ್ನು ಪೂರೈಸು 

ಪ್ರೇಮದಲ್ಲಿ ನೀ ನನ್ನ ಕ್ಷಮಿಸು 


💃💃💃ಸಾಹಿತ್ಯ 💃💃💃


ನಿನ್ನಯ ಹೆಸರು ಸಾಹಿತ್ಯ 

ಬಯಸದೆ ಬಂದ ಸಾಂಗತ್ಯ 

ಪ್ರೀತಿಸುವೆ ನಿನ್ನ ದಿನ ನಿತ್ಯ 

ಹೇಳಬೇಡ ನೀನು ದಿನ ಮಿಥ್ಯ 

ಪೂಜಿಸಲಾರೆ ಇದು ಸತ್ಯ


*******ರಚನೆ *****

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35