🙏🙏ಸಣ್ಣ ಕವನಗಳು -6🙏🙏
💃💃ನನ್ನ ಮನದೆನ್ನೆ 💃💃
ನೀ ನನ್ನ ಮನದೆನ್ನೆ
ಮಾಡುವೆ ಏಕೆ ಕಣ್ಣಸನ್ನೆ
ಸೂರೆ ಒಡೆದೆ ನನ್ನನ್ನೇ
ಕಾಡುವೆಯಲ್ಲೇ ಹೃದಯವನ್ನೇ
ನೀ ಇಲ್ಲದ ಆ ನೆನ್ನೆ
ನನಗೆ ತೋರುತಿಹುದು ಇಂದು ಬರಿ ಸೊನ್ನೆ
🐀🐀ಗಣೇಶ 🐀🐀
ನಿನಗ್ಯಾಕೆ ಬಂತು ಈ ಸಿಟ್ಟು
ಮಾಡುವುದಿಲ್ಲ ನಾ ಯಡವಟ್ಟು
ಹೇಳುವೆಯೇನು ನಿಜ ಜೀವನದ ಗುಟ್ಟು
ಗೌರಿ ಗಣೇಶ ಹಬ್ಬದ ತಂಬಿಟ್ಟು
ಜೀವನವೆಂಬುದು ಉಪ್ಪಿಟ್ಟು
ಎಲ್ಲರೂ ಸವಿಯುವ ಖುಷಿಪಟ್ಟು
🙎🏼♀️🙎🏼♀️ಸ್ಪರ್ಶಿಸು ನನ್ನ🙎🏼♀️🙎🏼♀️
ಕಲಿಯುವ ಮುನ್ನ
ಕಾಡಿಸು ನೀ ನನ್ನ
ಬರೆಯುವ ಮುನ್ನ
ನೀ ಪ್ರೀತಿಸು ನನ್ನ
ಕರೆಯುವ ಮುನ್ನ
ನೀ ಕಾಣಿಸು ಚಿನ್ನ
ಮರೆಯುವ ಮುನ್ನ
ನೀ ಮೋಹಿಸು ಎನ್ನ
ನೋಯಿಸುವ ಮುನ್ನ
ನೀ ಸ್ಪರ್ಷಿಸು ನನ್ನ
******ರಚನೆ ******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment