🌹❤💃ಒಲವಾಯಿತು ನನಗೆ 💃❤🌹
ಒಲವಯಿತು ನನಗೆ
ನಿನಮೇಲೆ ಹಾಗೆ
ಮಳೆ ಬಂದು ಹನಿಯೊಂದು
ಎಲೆಯನ್ನು ಮುತ್ತಿಟ್ಟ ಹಾಗೆ
ಮನಸಿನ ಅಸೆ ಹೇಳುವೆ ನಾನು
ಕನಸಿಗೆ ಬಂದ ರಾಣಿಯು ನೀನು
ಚೆಲುವಾದ ಮೊಗವು
ಸುಂದರ ನಗುವು
ಕಾಡಿದೆ ನನ್ನ ಕೇಳುವೆಯ ನೀನು
ಏಳು ಬಾ ನನ್ನ ಹೃದಯವೇ
ಎದೆ ಬಡಿತ ನೀನೆಂದು
ನನ್ನ ಉಸಿರ ಏರಿಳಿತಾ
ನಿನಗಾಗಿ ಹುಡುಕುತಿದೆ
ನಿನ ಚೆಲುವು ನನಗೆಂದು
ಕಣ್ಣ ಸನ್ನೆಯಲಿ ಕಾಡಿ
ಹೃದಯದಿ ಮನೆ ಮಾಡಿ
ಮನಸಿನಾ ಕದ ತೀಡಿ
ಒಳ ಬಂದು ನನ ನೋಡಿ
ನೀನೇಕೆ ನಗುವೇ
ಬಾ ಬಾರೆ ಚೆಲುವೆ
ಒಲವಯಿತು ನನಗೆ
ನಿನಮೇಲೆ ಹಾಗೆ
ಮಳೆ ಬಂದು ಹನಿಯೊಂದು
ಎಲೆಯನ್ನು ಮುತ್ತಿಟ್ಟ ಹಾಗೆ
ಪ್ರೀತಿಯು ಮಕರಂದ
ನಾ ಬಂದೆ ಒಲವಿಂದ
ಕಣ್ಣ ಮುಂದೆ ಬಾರೆ
ಮೊಗವನ್ನು ತೊರೆ
ನೋಟವು ಮಿಂಚಂತೆ
ಮಾತುಗಳು ಸಿಡಿಲಂತೆ
ಮಳೆ ಹನಿಯು ಬಿದ್ದಂತೆ
ಹನಿಯೊಂದು ತಾಗಿ
ಕರೆದಂತೆ ನನ ಕೂಗಿ
ಬಳಿಬಂದೆ ನಿನಗಾಗಿ
ಹೇಳುವೆನು ಪ್ರೀತಿಯನು
ಸೋತಿಹೆನು ನಿನಗಿನ್ನೂ
ಒಪ್ಪಿಗೆಯ ನಿ ನೀಡು
ಒಮ್ಮೆ ನನ ನೋಡು
ಪ್ರಾಣವನ್ನೆ ನಾ ಕೊಡುವೆ
ನಿನಗಾಗಿ ಚೆಲುವೆ
ಒಲವಯಿತು ನನಗೆ
ನಿನಮೇಲೆ ಹಾಗೆ
ಮಳೆ ಬಂದು ಹನಿಯೊಂದು
ಎಲೆಯನ್ನು ಮುತ್ತಿಟ್ಟ ಹಾಗೆ
******ರಚನೆ ******
ಡಾ. ಚಂದ್ರಶೇಖರ. ಸಿ .ಹೆಚ್
Comments
Post a Comment