📗📖✒️ನನ್ನ ಸಾಲುಗಳು✒️ 📖📗

 ಪ್ರಿಯಾ ಗೆಳೆಯರೇ 

ನಾನು ಕವನಗಳನ್ನು  ಬರೆಯಲು ಶುರು ಮಾಡಿ ಸರಿ ಸುಮಾರು ಮೂರು ವರ್ಷಗಳು ಕಳೆದವು ನನ್ನ  ಬಿಡುವಿನ ಸಮಯದಲ್ಲಿ ನನ್ನ ಮನಸ್ಸಿಗೆ ತೋಚಿದ ವಿಷಯಗಳ  ಮೇಲೆ ಕೆಲವು ಸಾಲುಗಳನ್ನು ಕವನಗಳನ್ನಾಗಿ ಬರೆದ್ದಿದೇನೆ. ನಾನು ಸಹ್ಯಾದ್ರಿ ಕಾಲೇಜಿನಲ್ಲಿ ಬಿ. ಎಸ್ಸಿ ಪದವಿ  ಓದುತಿರುವಾಗಲೇ ಕವನಗಳು ಬರೆಯುವ ಗೀಳಿತ್ತು  ಆದರೇ ಸರಿಯಾದ ಸಮಯವನ್ನು ಕೊಟ್ಟಿರಲಿಲ್ಲ ಹಾಗು ನನ್ನ ಕವನಗಳು ಆಟೋಗ್ರಾಫ್ಗೆ  ಮಾತ್ರ ಸೀಮಿತವಾಗಿದ್ದವು. ಮತ್ತೆ ನನಗೆ ಕವನವನ್ನು ಬರೆಯುವ ಉತ್ಸಾಹ  ಬಂದಿದ್ದು 2016ರಿಂದ ಸಹ್ಯಾದ್ರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಪ್ರಾರಂಬಿಸಿದಾಗಿನಿಂದ, ನನ್ನ  ಬಿಡುವಿನ ಸಮಯದಲ್ಲಿ  ಕವನ ರಚಿಸುತ್ತಿದೇನೆ ಹಾಗು ಈ ಕವನಗಳ್ಳನ್ನು  ಒಂದು ಕಿರು ಪುಸ್ತಕವನ್ನಾಗಿ ಪ್ರಕಟಿಸುವ ಅಭಿಲಾಷೆ ಇದೆ, ನೀವುಗಳು ನನ್ನ ಕವನಗಳ್ಳನ್ನು ಓದಿ, ತಮ್ಮ ಅನಿಸಿಕೆ ವ್ಯಕ್ತ ಪಡಿಸಿ  ಪ್ರೋತ್ಸಹಿಸಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳಿತ್ತಿದ್ದೇನೆ 


ಇಂತಿ ನಿಮ್ಮ ಪ್ರೀತಿಯ 

ಡಾ. ಚಂದ್ರಶೇಖರ. ಸಿ. ಹೆಚ್

ಅತಿಥಿ ಉಪನ್ಯಾಸಕ 

ರಸಾಯನಶಾಸ್ತ್ರ ವಿಭಾಗ 

ಸ್ನಾತಕೋತ್ತರ ಕೇಂದ್ರ, ಕಡೂರ 

ಕುವೆಂಪು ವಿಶ್ವವಿದ್ಯಾಲಯ 


Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35