🌷🥀ಓ ನನ್ನಯ ಒಲವೇ🌷🥀


ಪ್ರೀತಿಯ ಹೆಸರಲಿ 

ನೀ ಬಳಿ ಬಂದೆ 

ನನ್ನಲಿ ನೀನು 

ನೂರಾಸೆಯ ತಂದೆ 


ನೀ ನನ್ನವಳೆಂದು 

ಜೀವ ನಂಬಿತು 

ನೀ ಮಾಡಿದ ಸಂಚಿಗೆ 

ಮನಸ್ಸು ನೊಂದಿತು 


ಓ ಮೋಸಗಾತಿಯೇ ನೀನೇಕೆ ಓಡುವೇ

ಸನಿಹಕೆ ಬಂದು ಮತ್ತೆ ಕಾಡುವೆ 


ಜೊತೆಯಲ್ಲಿ ಕಳೆದ ನಿನ್ನಯ 

ನೆನಪು ನನ್ನ ಕಾಡಿದೆ 

ನಿನ್ನ ಒಲವಿಗಾಗಿ 

ಹೃದಯ ಬೇಡಿದೆ 


ಯಾಕಿ ಮೌನ ಮಾತಾಡು 

ನನ್ನ ಒಲವೇ 

ನೀ ಜೊತೆಗಿದ್ದರೆ 

ನನ ಪ್ರೀತಿ ನಿನದಲ್ಲವೇ 


ಓ ಮೋಸಗಾತಿಯೇ ನೀನೇಕೆ ಓಡುವೇ 

ಸನಿಹಕೆ ಬಂದು ಮತ್ತೆ ಕಾಡುವೆ 


ಮೋಹಕ ಮಾತಿಗೆ 

ಮನಸ್ಸು ಕರಗಿತು 

ಈ ಪ್ರೀತಿಯು ಸುಳ್ಳೆಂದು 

ಅರಿಯದೆ ಹೋಯಿತು 


ನಿನ್ನಯ ಚೆಲುವು 

ನನ್ನ ಕಾಡಿದೆ 

ಪ್ರೀತಿಯ ಒಲವಿಗೆ 

ಮತ್ತೆ ಬೇಡಿದೆ


ನೀನಾಗಾಗಿ ಹೃದಯದಿ 

ಮನೆಯ ಮಾಡಿದೆ 

ನಿನ ಕಣ್ಣಾಮುಚ್ಚಾಲೆ 

ಆಟಕೆ ಹೃದಯ ಹೊಡೆದಿದೆ 


ಓ ಮೋಸಗಾತಿಯೇ ನೀನೇಕೆ ಓಡುವೇ

ಸನಿಹಕೆ ಬಂದು ಮತ್ತೆ ಕಾಡುವೆ 


*******ರಚನೆ*****

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35