❤❤🌹 ವರ್ಜಿನ್ 🌹 ❤❤
🌹🌹❤ಪ್ರಿಯ ಗೆಳೆಯರೇ ❤🌹🌹
ನಾನು ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಹುಡುಕುತಿದ್ದಾಗ ವರ್ಜಿನ್ ಎಂಬ ಪುಸ್ತಕ ನನ್ನ ಕಣ್ಣಿಗೆ ಬಿತ್ತು. ಈ ಪುಸ್ತಕದ ಹೇ ಸರನ್ನು ಮೊದಲ ಬಾರಿ ಕೇಳಿದಾಗ ಎಲ್ಲರು ಯೋಚಿಸಿವ ರೀತಿಯಲ್ಲೇ ನನಗು ಯೋಚನೆ ಬಂತು. ಆ ಮೇಲೆ ತಿಳಿಯಿತು ಇದು ಒಂದು ಕಂಪನಿಯ ಹೆಸರು ಸ್ಥಾಪಕ ರಿಚರ್ಡ್ ಚಾರ್ಲ್ಸ್ ನಿಕೋಲಸ್ ಬ್ರಾನ್ ಸನ್ ಎಂದು ಇದು ಅವರ ಆತ್ಮ ಚರಿತ್ರೆ ಹಾಗು ಇವರು ಅಪ್ರತಿಮ ಬಿಸಿನೆಸ್ ಮ್ಯಾನ್, ಉತ್ತಮ ಮಾನವೀಯ ಗುಣಗಳು ಉಳ್ಳಾ ವ್ಯಕ್ತಿ. ಸಾಹಸಿಗ, ಧೈತ್ಯ ಕಂಪನಿ ಕಟ್ಟಿ ಬೆಳಿಸಿದ ಅಸಾಧಾರಣ ವ್ಯಕ್ತಿ, ಸಾವಿರಾರು ಕೋಟಿಗಳ ಒಡೆಯ ಎಂದು. ನಾನು ವರ್ಜಿನ್ ಪುಸ್ತಕವನ್ನು ಓದಿದ ಮೇಲೆ ನನಗು ಕವನ ಬರೆಯಲು ಮನಸ್ಸಾಯಿತು ನನಗೆ ತೋಚಿದ ಪದಗಳಿಂದ ಕವನವನ್ನು ಬರೆಯಲು ಪ್ರಯತ್ನಿಸಿದ್ದೇನೆ. ಓದಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಮತ್ತು ದೋಷವಿದ್ದಲ್ಲಿ ಕ್ಷಮಿಸಿ.
🌹❤❤❤ವರ್ಜಿನ್ ❤❤❤🌹
ಹೇಳಲು ಹೊರಟೆ ಒಂದು ಕವನ
ವರ್ಜಿನ್ ಕಂಪನಿ ಬೆಳೆದ ಸುಂದರ ಕಥನ
ರಿಚರ್ಡ್ ಬ್ರಾನಸನ್ ಬೆಳೆದ ಪರಿ
ತಿಳಿದರೆ ಆಗುವುದು ನಿಮಗೆ ಅಚ್ಚರಿ
ಹದಿನಾರನೇ ವಯಸ್ಸಿನ ಸುಂದರ ಪೋರ
ಕಟ್ಟಿದ ಒಂದು ವರ್ಜಿನ್ ಎಂಬ ಶಿಖರ.
ಓದಲಿ ಇವನು ಇಂದೆ ಬಿದ್ದ
ಗೆಳೆಯರ ಮನವನು ಗೆದ್ದ
ಶುರುಮಾಡಿದ ಒಂದು ಸ್ಟೂಡೆಂಟ್ ಪತ್ರಿಕೆಯನ್ನು
ಗೆಲ್ಲಲ್ಲು ಯುವಕರ ಹೃದಯವನ್ನು
ಚಲದಲಿ ಬೆಳೆಯಿತು ಇವನ ಪತ್ರಿಕೆ
ಸ್ಪಂದಿಸಿತು ಜನಗಳ ಕಷ್ಟಕೆ
ಇವನ ಕಂಪನಿ ಆಯಿತು ವರ್ಜಿನ್
ಬ್ರಾನಸನ್ ಒಬ್ಬ ಬಿಸಿನೆಸ್ ಸರ್ಜನ್
ಬ್ರಾನಸನ್ ಒಬ್ಬ ಮಾಧಕ ಯುವಕ
ಹುಡುಗಿಯ ಮನಸ್ಸನು ಗೆದ್ದ ಕಥೆಯೇ ರೋಚಕ
ಈಗ ಇವನಿಗೆ ಮೂರು ಮಕ್ಕಳು
ಸಂಸಾರವೆಲ್ಲ ಬ್ರಿಟನ್ ದೇಶದ ಪ್ರಜೆಗಳು
ಸಿಕ್ಕಿತು ಇವನಿಗೆ ಕುಟುಂಬದ ಬೆಂಬಲ
ತಂದೆ ತಾಯಿಯೇ ಬಲು ಪ್ರೀತಿಯ ಹಂಬಲ
ಸಂಗೀತ ಲೋಕಕೆ ಹೆಜ್ಜೆ ಇಟ್ಟ
ಸಂಗೀತ ಪ್ರಿಯರ ಮನಸ್ಸಿಗೆ ಲಗ್ಗೆ ಇಟ್ಟ
ಸುಂದರ ಆಲ್ಬಮ್ ವರ್ಜಿನ್ ನಿಂದ ಬಂತು
ಸಂಗೀತ ಪ್ರಿಯರಿಗೆ ಖುಷಿಯನ್ನು ತಂತು
ವರ್ಜಿನ್ ಬೆಳೆಸಲು ಪಟ್ಟ ಕಷ್ಟ
ಆಯಿತು ಅವನಿಗೆ ತುಂಬ ನಷ್ಟ
ಜಗ್ಗದೆ ನುಗ್ಗಿದ ಮುಂದೆ
ಈಗ ಪ್ರಪಂಚವೇ ಇವನ ಹಿಂದೆ
ವರ್ಜಿನ್ ವಿಮಾನ ಆಕಾಶಕೆ ಏರಿತು
ಬ್ರಿಟಿಷ್ ವಿಮಾನದ ವಿರುದ್ಧ ಸಮರವ ಸಾರಿತು
ಸಮರದಲ್ಲಿ ತೊಡೆಯನು ತಟ್ಟಿದ
ಬ್ರಿಟಿಷ್ ವಿಮಾನಕೆ ಬುದ್ದಿ ಕಲಿಸಿದ
ಹಡಗಿನಲ್ಲಿ ಸಾಹಸ ಮಾಡಿದ
ಜೊತೆಗಿದ್ದವರ ಪ್ರಾಣವ ಉಳಿಸಿದ
ಹಡಗಲಿ ಪ್ರಯಾಣಿಸಿ ಸೇರಿದ ಧಡವ
ಗೆದ್ದು ಬೀಗಿದ ದೇಶದ ಪ್ರಜೆಗಳ ಮನವ
ಗಾಳಿ ಬಲೂನಲಿ ಹೇರಿದ ಆಕಾಶ
ಜೀವವ ಪಣಕ್ಕಿಟ್ಟು ಸೇರಿದ ದೇಶ
ಇವನ ಸಾಹಸ ಬಲು ರೋಚಕ
ವರ್ಜಿನ್ ಕಂಪನಿ ಬೆಳೆಸಿದ ಮಾಂತ್ರಿಕ
ಏಡ್ಸ್ ರೋಗುವು ಬಂತು ಆಫ್ರಿಕಾದಲ್ಲಿ
ಕಾಯಿಲೆಯಿಂದ ಜನರು ಪರಿತಪಿಸಿದರಲ್ಲಿ
ಚಿಕಿತ್ಸೆಗಾಗಿ ವ್ಯಯಿಸಿದ ಹಣವ
ಆಫ್ರಿಕಾ ಜನರ ಗೆದ್ದ ಮನವ
ಪ್ರಶಸ್ತಿಗಳು ಬಂದವು ಇವನ ಅರಸಿ
ವರ್ಜಿನ್ ಬೆಳೆಸಿದ ಜೀವನ ಸವೆಸಿ
ಬ್ರಾನಸನ್ ಒಬ್ಬ ಬಿಸಿನೆಸ್ ಐಕಾನ್
ನಾನೂರು ಕಂಪನಿಗಳ ಸಮೂಹವೇ ವರ್ಜಿನ್
ವರ್ಜಿನ್ ಕಂಪನಿ ಒಂದು ದಂತಕಥೆ
ಏಳುತ ಹೊರಟರೆ ಮುಗಿಯದ ಕಥೇ
ರಿಚರ್ಡ್ ಬ್ರಾನಸನ್ ನಮಗೆ ಸ್ಪೂರ್ತಿ
ಜಗದೆಲ್ಲೆಡೆ ಹರಡಿದೆ ಅವನ ಕೀರ್ತಿ
******ರಚನೆ *****
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment