🌅🌅ದೀಪಾವಳಿ ಹಬ್ಬ 🌅🌄

 ದೀಪಾವಳಿ ಹಬ್ಬ ಬಂತು 

ಬಾಳಲ್ಲಿ ಸಡಗರವ ತಂತು 

ಹಣತೆಯ ಸಾಲು ಸಾಲು 

ಜೀವನದಿ ಗೆಲುವು ತರಲು 


ದೀಪಾವಳಿಯು ನಿಮಗೆ 

ತರಲಿ ಹೊಂದು ಹೊಸಬಗೆ 

ಖುಷಿಯನ್ನು ಹೊತ್ತು ಬರಲಿ 

ಗೆಲುವನ್ನು ಪ್ರತಿಸಲವೂ ಕೊಡಲಿ 

ಪ್ರೀತಿಯು ಹೃದಯವನ್ನು ತುಂಬಲಿ 


 ಮಕ್ಕಳು ಹೊಸ ವಸ್ತ್ರ ತೊಟ್ಟು 

ಮಹಿಳೆಯರು ಸೀರೆ ಉಟ್ಟು 

ಪುರುಷರು ಹೊಸ ಉಡುಪು ತೊಟ್ಟು 

ಸಂಭ್ರಮಿಸುವರು ಖುಷಿಯ ಪಟ್ಟು 


ದೀಪದಿಂದ ದೀಪ ಹಚ್ಚಿ 

ಬೆಳಕು ಬಂದು ಕೊಳೆಯ ಕೊಚ್ಚಿ 

ಮನಸ್ಸನ್ನು ಶುಭ್ರ ಮಾಡಿ 

ಹೊಸತನವು ಜೀವನದಿ ಮೂಡಿ 

ಹರುಷ ತುಂಬಲಿ ಬಾಳೆಲ್ಲ 

ದೂರ ಹೋಗಲಿ ನೋವೆಲ್ಲಾ 


ಪಟಾಕಿಯ ಸದ್ದು ಜೋರು 

ಚಿಣ್ಣರ ನಲಿವಿನ ತೇರು 

ಪಟಾಕಿಯನ್ನು ಅಳಿಸಿ 

ಪರಿಸರವನ್ನು ಉಳಿಸಿ 


ಹಬ್ಬದ ಅಡುಗೆ ಘಮ 

ಊರ ತುಂಬ ಸಂಭ್ರಮ 

ಹೊಬ್ಬಿಟಿನ ಊಟವಂತೆ 

 ಸವಿ ಭೋಜನದ  ಸಂತೆ 

ದೀಪಾವಳಿಯ ವಿಶೇಷವಂತೆ 


ಪಟಾಕಿಯನ್ನು ಅಳಿಸಿ ಪರಿಸರವನ್ನು ಉಳಿಸಿ 

ದೀಪಾವಳಿಯನ್ನು ಸಂಭ್ರಮಿಸಿ

*****ರಚನೆ ***-*-

ಡಾ. ಚಂದ್ರಶೇಖರ. ಸಿ . ಹೆಚ್ 

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35