🐳🐋ಮೀನಾದೆ ನಾನು 🐬🐟
ಪ್ರೀತಿಯ ತೋರಣಕೆ
ಎಲೆಯಾದೇ ನೀನು
ಬಾಳಲ್ಲಿ ಬಂದ
ಒಲವಾದೇ ನೀನು
ಚೆಲುವಿನ ನಗುವಿಗೆ
ಸೆರೆಯಾದೆ ನಾನು
ಮಾತಿನಾ ಕಡಲಲ್ಲಿ
ಮಿನುಗುತಿಹ ನೋಟಕ್ಕೆ
ಬಲಿಯಾದೆ ನಾನು
ಮೋಹಕ ನಗುವು
ಸೆಳೆತದ ಚೆಲುವು
ಹರಿಯದ ಮನಧಿ
ಮಾಯವಾದೆ ನಾ
ನಿನ್ನಯ ನಡಿಗೆ
ನವಿಲಿನ ನಾಟ್ಯ
ನಾಟ್ಯವ ನೋಡಿ
ಕಳೆದೋದೆ ನಾ
ಮಾತಲ್ಲಿ ಇಂಪು
ಮನಸಲಿ ಕಂಪು
ನುಡಿಯಲಿ ನಿನಗೆ
ವಶವಾದೆ ನಾ
ನಿನ್ನಯ ಬಲೆಗೆ
ಬಿದ್ದ ನಾನು
ನೀರೇ ಇಲ್ಲದ
ಮೀನಾದೆ ನಾ
*********ರಚನೆ ******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment