🌿🌾🌴ರೈತನೇ ನಮ್ಮ ಉಸಿರು 🍇🍋🥦



ರೈತನಾ ಶ್ರಮ

ಸಿರಿವಂತರು ಅನುಭವಿಸುವ ಘಮ. 


ಹೊಲದಲ್ಲಿನ ಬೆಳೆ 

ಕೈ ಕೊಟ್ಟರೆ ರೈತರ 

ಜೀವನವೇ ಕೊಳೆ 


ಬಿತ್ತಿದ ಬೆಳೆಗೆ ಬೆಲೆಯಿಲ್ಲ 

ಮಧ್ಯವರ್ತಿಗಳ ಸುಲಿಗೆಗೆ 

ಕೊನೆಯಿಲ್ಲ 

ರೈತನ ಶ್ರಮಕ್ಕೆ ನಲಿವಿಲ್ಲ 


ರೈತನೇ ದೇಶದ ಬೆನ್ನೆಲುಬು 

ಮುರಿಯದಿರೋಣ ರೈತನ 

ಪಕ್ಕೆಲುಬು 


ರೈತರ ಹೆಸರಲಿ ವೇಷ 

ವೇಷದ ನೆಪದಲ್ಲಿ 

ರೈತನ ನಾಶ 


ಬೆಳೆದ ಬೆಳೆಗಿಲ್ಲ ಕಿಮ್ಮತು 

ರೈತನ ಜೀವನದಲ್ಲಿ ಇಲ್ಲ 

ಗಮ್ಮತ್ 


ದೇಶದ ಆಧಾರವೇ ರೈತ 

ಸಾಲದ ಸುಳಿಯಲ್ಲಿ ಸಿಕ್ಕ 

ರೈತನ ಜೀವ ಒಂದು ಪ್ರೇತ 


ರೈತನ ಸಾವಿಗೆ ಕೊನೆಯಿಲ್ಲ 

ಬೆಳೆದ ಬೆಳೆಗೆ ಬೆಲೆಯಿಲ್ಲ 

ಅವನ ಸಂಸಾರಕೆ ದಿಕ್ಕಿಲ್ 


ರೈತರ ಹೆಸರಲ್ಲಿ ಧರ್ಬಾರು 

ಗೂಟದ ಕಾರಿನ ಕಾರ್ಬಾರು 


ರೈತ ಬೆಳೆದ ಅನ್ನ 

ತಿನ್ನುವವರ ಪಾಲಿನ ಚಿನ್ನ 

ಆದರೂ ರೈತನ ಜೇಬಿಗೆ ಕನ್ನ 


ರೈತನ ಬೆಳೆದ ಹಸಿರು 

ನಮ್ಮೆಲ್ಲರ ಉಸಿರು


ರೈತರಿಗಾಗಿ ಕೈಜೋಡಿಸೋಣ 

ದುಃಖ್ಖವನು ಓಡಿಸೋಣ 

ದೇಶವನ್ನು ಗೆಲ್ಲಿಸೋಣ 


******ರಚನೆ *****

ಡಾ. ಚಂದ್ರಶೇಖರ. ಸಿ. ಹೆಚ್ 


Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35