🏩🏡ಗ್ರಂಥಾಲಯವೆಂಬ ಮನೆ 🏠🏩


 ಗ್ರಂಥಾಲಯವೆಂಬ ಮನೆ 

ಪುಸ್ತಕದ ಹೂವಿನಕೊನೆ 

ಓದುತ ಕುಳಿತೆನು ಒಬ್ಬನೇ 


ಪುಸ್ತಕವು  ನೂರಾರು 

ಓದುತಿರಲು ಬಲು ಜೋರು 

ಮನದ ಯೋಚನೆ ಸಾವಿರಾರು 

ಹೇಗೆ ಕಲಿಯಲಿ ನಾ 

ಈ ಪುಸ್ತಕವ ಮಸ್ತಕಕೆ 


ಓದಿದೆ ಮೂರು ಬಾರಿ 

ತಲೇಗೆ  ಅತುತ್ತಿಲ್ಲಾ  ಒಂದು ಸಾರಿ 

ಏನೂ ಮಾಡಲಿ ನಾ 

ಹೇಗೆ ಓದಲಿ ನಾ 


ಸಿಟ್ಟಾಯಿತು ಮನಸ್ಸು 

ಚೂರಾಯಿತು ಓದುವ ಕನಸು 

ಮತೊಮ್ಮೆ ಪ್ರಯತ್ನ 

ತಿರುಗಿ ಒಮ್ಮೆ ಯತ್ನ 

ಹೀಗೆ ಸಾಗಿತು ಜೀವನದ 

ಹೇಳು ಬೀಳಿನ ಸ್ವಪ್ನ 


ಬಿಡದಾ ನನ್ನ ಛಲ 

ಓದುತ ಕವನ ಸಂಕಲನ  

ರಚಿಸಿದೆ ಒಂದು ಕವನ 

ಕವನದ ಹೆಸರೇ ಸಿಂಚನ 


ಗ್ರಂಥಾಲಯದ ಪಾಲಕ 

ಪುಸ್ತಕಗಳ ಪೋಷಕ 

ಅವರೇ ನಮ್ಮ  ಸ್ಪೂರ್ತಿ 

ಓದುತ ನಾವು  ಗಳಿಸಿದ ಕೀರ್ತಿ 


ಓದೋಣ ಒಳ್ಳೆ ಪುಸ್ತಕ 

ಗಳಿಸೋಣ ಒಳ್ಳೆ ಜ್ಞಾಪಕ 

ಹಂಚೋಣ ವಿದ್ಯೇಯ  ರಸಪಾಕ 


ಗ್ರಂಥಾಲಯದ ನೆನಪು 

ಪುಸ್ತಕಗಳ ಸವಿನೆನಪು 

ಜೀವನಕೆ ನೀಡುವುದು ತಂಪು 

ಪಸರಿಸೋಣ ಪುಸ್ತಕಗಳ ಕಂಪು


********ರಚನೆ ******

🌹ಡಾ.  ಚಂದ್ರಶೇಖರ. ಸಿ. ಹೆಚ್ 

ರಸಾಯನ ಶಾಸ್ತ್ರ,  ಉಪನ್ಯಾಸಕರು 

ಸ್ನಾತಕೋತ್ತರ ಕೇಂದ್ರ, ಕಡೂರು 

ಕುವೆಂಪು ವಿಶ್ವವಿದ್ಯಾಲಯ🌹🌹

Comments

Post a Comment

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ