🌹💃❤ಪ್ರೀತಿಸುವೆಯ ನನ್ನ ನೀನು💃❤ 🌹
ಹುಡುಗಿ ನಿನ್ನ ನೋಟ ಚೆಂದ
ಪ್ರೀತಿಯಲ್ಲಿ ನೀನು ಅಂದ
ಚೆಲುವಿನಲ್ಲಿ ಹೊಳಪು ನೀನು
ಮಾತಿನಲ್ಲಿ ಕೋಲಜೇನು
ನೀನು ಒಲವ ಹೂವಿನಂತೆ
ಸುತ್ತುತಿಹೇನು ದುಂಬಿಯಂತೆ
ಹೇಳುವೆಯೇನು ನಿನ್ನ ಹೆಸರು
ಪ್ರೀತಿಗಾಗಿ ಕೊಡುವೆ ಉಸಿರು
ಮಾತು ಒಂದೂ ಮಧುರ ಗಾನ
ನಿನ್ನ ಪ್ರೀತಿ ತುಂಬ ಮೌನ
ನಿನ್ನ ಕಣ್ಣ ಸನ್ನೆ ನೋಡಿ
ನಾನು ಬಂದೆ ಓಡಿ ಓಡಿ
ನಗುವಿನಲ್ಲಿ ಎನೋ ಸೆಳೆತ l
ತುಡಿಯುತಿದೆ ಪ್ರೀತಿ ಮೊರೆತ
ಏರುತಿದೆ ಹೃದಯ ಬಡಿತ
ಮನವು ಹೇಳುತ್ತಿದೆ ಲವ್ ಯು ಅಂತ
ನೀನು ಒಂದೂ ಗೊಂಬೆಯಂತೆ
ಪ್ರೀತಿಸುವೆನು ಬಿಡು ಚಿಂತೆ
ಭಯವ ಬಿಟ್ಟು ಪ್ರೀತಿ ಮಾಡು
ಒಲವು ಎಷ್ಟು ಸುಂದರ ನೋಡು
ಮನಸ್ಸು ತುಂಬ ನಿನದೆ ಧ್ಯಾನ
ಮಾತಾಡು ನೀನು ಮುರಿದು ಮೌನ
ಹೇಳು ಒಮ್ಮೆ ಪ್ರೀತಿಸುವೆನು
ಪ್ರೇಮಕ್ಕಾಗಿ ಕಾಯುತಿಹೆನು
ನೀನು ಒಮ್ಮೆ ಒಪ್ಪಿ ನಕ್ಕರೆ
ಹಾಲು ಜೇನಿನಂತೆ ಜೀವನವು ಸಕ್ಕರೆ.
******ರಚನೆ ******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment