🙏🙏ಸಣ್ಣ ಕವನಗಳು -2🙏🙏

 🌹ಹೃದಯದ ಕವನ 🌹

ಒಲವಿನ ಜೊತೆಗೆ 

ಹೃದಯದ ಕವನ 


ಹೃದಯದ ಜೊತೆಗೆ 

ನನ್ನ ಮನಸ್ಸಿನ ಕಥನ 


ಬರೆದೇನು ನಾನು 

ಈ ಮೌನದ ಕವನ 


ಜೊತೆಯಾಗಿ ಸಾಗುವುದೆ 

ನಮ್ಮ ಜೀವನ ಪಯಣ 


🌹ಹೃದಯವನು ಕೊಂದು 🌹

ಹೃದಯವನ್ನು ಕೊಂದು 

ನೋವನ್ನು ತಂದು 

ಜೀವನದಿ ಬೆಂದು 

ಒಲಿದವಳು ನೀನೆಂದರೆ ತಪ್ಪೇನು 


🌹 ಕಳೆದ ಹೊತ್ತು  🌹

ಅರಿಯದೆ ಆಡಿದ ಆ ಮಾತು 

ಬಗೆಹರಿಯದೆ ಕಳೆದ ಈ ಹೊತ್ತು 

ತಂದು ಕೊಡುವುದೇ ನಮ್ಮ ಜೀವನಕ್ಕೆ  ಸಂಪತ್ತು 


********ರಚನೆ *******

ಡಾ. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20