🌺🌻🌼ಹೂವೂoದು ಬಳಿ ಬಂದು🌺🌻🌼
ಹೂವೂoದು
ಬಳಿ ಬಂದು ಹೇಳಿತು
ಚೆಲುವೆಲ್ಲಾ ನನದೆಂದು
ದುಂಬಿಯೊಂದು
ನಸುನಕ್ಕುಹೇಳಿತು
ಈ ಮಕರಂದ ನನದೆಂದು
ಸೂರ್ಯನು ಕೆಂಪಾಗಿ
ಕಿರಣವು ಭೂಮಿ ತಾಗಿ
ಹೇಳಿದನು ಬೆಳಕೆಲ್ಲ ನಾನೆಂದು
ಚಂದ್ರನು ತಂಪಾಗಿ
ಕತ್ತಲೆ ಕಳೆದೋಗಿ
ಹೇಳಿದನು ಈ ರಾತ್ರಿಯೇ ನನಗೆಂದು
ಕೋಳಿಯು ಕೂಗುತ
ಮಾನವರನು ಬಡಿದೆಬ್ಬಿಸಿ
ಹೇಳಿತು ಮುಂಜಾನೆ ನನದೆಂದು
ಕೋಗಿಲೆಯ ಕುಹೂ ಕುಹೂ
ಅರಳಿದ ಚಿಗುರು
ಹೇಳಿತು ವಸಂತಮಾಸವೇ ನಾನೆಂದು
ದಟ್ಟನೆಯ ಕಾಡಲ್ಲಿ
ಕೆರಳಿದ ಸಿಂಹವು ಹೇಳಿತು
ಕಾಡಿನ ರಾಜ ನಾನೆಂದು
ಆವಿಯು ಆಕಾಶ ಸೇರಿ
ಮೋಡವು ಹೇಳಿತು
ಮಳೆ ಹನಿಯೇ ನಾನೆಂದು
ಪ್ರಕೃತಿಯು ಹಸಿರಾಗಿ
ಜೀವಿಗಳ ಉಸಿರಾಗಿ ಕೇಳಿತು
ಎಲೆ ಮಾನವ ನೀನು ಯಾರು ಹೇಳೆಂದು
ನಸುನಕ್ಕು ಮಾನವನು
ಪ್ರಕೃತಿಗೆ ಸೆಡ್ದುವೂಡೆದು
ಗರ್ವದಿ ಹೇಳಿದನು
ಬುದ್ದಿ ಜೀವೆಯೇ ನಾನೆಂದು
ಪ್ರೀತಿಯಲ್ಲಿ ಕಂಗೊಳಿಸಿ
ಪೂಜೆಯನ್ನು ಸ್ವೀಕರಿಸಿ
ಆ ದೇವರೇ ಹೇಳಿದನು
ಈ ಸೃಷ್ಟಿ ನನದೆಂದು
*******ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Super Dr Chndru
ReplyDelete