♦️♣️ಸಮನ್ವಯ ಬಣ್ಣ♣️♦️
ನಿನ್ನಯ ಚೆಲುವು
ಒಲವಿನ ಬಣ್ಣ
ನಿನ್ನಯ ನಡಿಗೆ
ನವಿಲಿನ ಬಣ್ಣ
ನಿನ್ನಯ ನುಡಿಯು
ಪ್ರೀತಿಯ ಬಣ್ಣ
ನಿನ್ನಯ ಸ್ನೇಹ
ಆಕಾಶದ ಬಣ್ಣ
ನಿನ್ನಯ ನಗುವು
ಮಿಂಚಿನ ಬಣ್ಣ
ನಿನ್ನಯ ಹಾಡು
ಕೋಗಿಲೆ ಬಣ್ಣ
ಈ ನಿನ್ನ ಸಮನ್ವಯ ಬಣ್ಣಕೆ ನಾ ಸೋತೆನಣ್ಣ
********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment