🚬🚬🌿ಗಾಂಜಾದ ಗಮ್ಮತ್ತು🌿🚬🚬
ಗಾಂಜಾದ ಗಮ್ಮತ್ತು ತುಳಸಿಗೆ ಆಪತ್ತು
ತುಳಸಿಯು ಒಲವೋ ಗಾಂಜಾದ ನಲಿವೋ
ದೇವರು ಕೊಟ್ಟ ಪ್ರೀತಿಯ ವರವೋ
ಮಾನವರು ಸ್ವರ್ಗವ ಗೆದ್ದ ಗೆಲುವೋ
ತುಳಸಿಯಾ ಗಿಡವು ಪೂಜುವ ದೇವರಂತೆ
ಗಾಂಜಾದ ಗಿಡವು ಮಾನವ ಸೇದುವ ಬಂಗಿಯಂತೆ
ದೇವರ ಕಾಣಲು ತುಳಸಿಯಾ ಪೂಜೆ
ಸ್ವರ್ಗವ ನೋಡಲು ಗಾಂಜಾದ ಸೇವೆ
ಒಲಿಯುವನೇ ದೇವರು ಪೂಜೆಯ ಕಂಡು
ಮಾನವನು ಸೇದುವ ಗಾಂಜಾದ ತುಂಡು
ಗಾಂಜಾದಲ್ಲಿ ಓಷಧೀಯ ಗುಣವಿದೆಯಂತೆ
ಸೇದಲು ಸ್ವರ್ಗವು ಬಳಿ ಬರುವುದಂತೆ
ತುಳಸಿಯ ಪೂಜೆ ಗಾಂಜಾ ಸೇವೆ
ದೇವರನು ಒಲಿಸುವ ಮಾಡುವ ಚಲವೇ
ಕಾಲವು ಬದಲಾಯಿತು ತುಳಸಿಯಪೂಜೆಯುನಿಂತೋಯಿತು
ಗಾಂಜಾದ ನಶೆಯು ಮೈಮೇಲೆ ಬಂದಾಯಿತು
ತುಳಸಿಯ ಬಿಟ್ಟು ಗಾಂಜಾವಾ ಸುಟ್ಟು
ನಶೆಯೇರಿದ ಮೋಜಿನ ಗುಟ್ಟು
ತುಳಸಿಯ ಗಿಡವೋ ಗಾಂಜಾದ ಗಿಡವೋ
ಮಾನವರು ತೋರುವ ಪ್ರೀತಿಯ ಒಲವೋ
******ರಚನೆ ******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment