💃❤ನಾ ಸೋತೆ 💃❤
ನಿನಗಾಗಿ ನಾ ಸೋತೆ
ಪ್ರೀತಿಯಲಿ ಮೈಮರೆತೆ
ಸೆರೆಯಾದೆ ನೋಟದ
ಆ ನಿನ್ನ ಕಣ್ಣ ಸನ್ನೆಗೆ
ಹೃದಯದ ಅಂಗಳದಿ
ಬಿಂದಿಗೆಯ ನೀ ತಂದೆ
ತುಂಬಿರಲು ಒಲವಿನ ಬಿಂದಿಗೆ
ನಸು ನಕ್ಕು ನೀ ನಡೆದೇ
ನನ ಮನವನು ನೀ ಸೆಳೆದೆ
ನಿನ್ನ ನೋಡಿದ ನನಗೆ
ಒಲವಾಯಿತು ಹಾಗೆ
ನಿನ ಮೇಲೆ ಕನಸಿಯಿತು
ಪಿಸು ಮಾತು ಬಳಿ ಬಂತು
ನಿನ್ನನು ಕೂಗಿ
ಎದೆ ಬಡಿತ ಹೆಚ್ಚಾಯಿತು
ಕೇಳಿಸದೇ ನಿನಗೆ
ವಯಸ್ಸಿನ ಬೇಗೆ
ತಣಿಸುವೆಯ ನನ್ನ
ಪ್ರೀತಿಯ ಬಯಕೆ
ಸೋತಿರುವೆ ನಾನು
ನಿನ್ನಯ ಚೆಲುವಿಗೆ
ಚಂದಾದಾರ ನಾನೆ
ನಿನ್ನ ಪ್ರೀತಿಗೆ
ಓ ನನ್ನ ರೂಪಸಿ
ಬಳಿ ಬಂದೆ ನಿನ್ನ ಅರಸಿ
ಹೇಳುವೆಯ ಕನಸ
ಮಾಡುವೆನು ನನಸಾ
ಕೈ ಇಡಿದು ನಡೆಯುವೆ
ಕೊನೆವರೆಗೂ ಜೊತೆಗಿರುವೆ
ಬಾಳಿನ ಪಯಣದಿ
ನಡೆ ನೀನು ಮುಂದೆ
ಬರುವೆನು ಇಂದೆ
ಸಾಗುತಾ ಹೇಳುವ ನಾವಿಬ್ಬರೂ ಒಂದೇ
ನಿನಗಾಗಿ ನಾ ಸೋತೆ ಪ್ರೀತಿಯಲಿ ಮೈಮರೆತೆ
******ರಚನೆ ******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment