🙏🙏ಸಣ್ಣ ಕವನಗಳು -8🙏🙏
❤ಪ್ರೀತಿಯ ಕಥೆ ❤
ಬರೆಯಲೇ ನಾನು
ಒಲವಿನ ಕಥೆಯ
ಹೇಳುವೆಯೇನು ನಿನ್ನ
ಪ್ರೀತಿಯ ವ್ಯಥೆಯ
ಓದಲೇ ನಾನು
ಮರೆಯದ ಪುಟವ
ನೀ ನನಗಾಗಿ ಬಂದ
ದೇವರ ಕೃಪೆಯ
ಇದುವೇ ನಿನ್ನ ಈ
ಪ್ರೀತಿಯ ಹೃದಯ
😂 ಹೃದಯದ ನಡುಕ 😪
ಪ್ರೇಮದ ಅಲೆಯಲಿ
ಹೃದಯದ ನಡುಕ
ಪ್ರಣಯದ ಸೆಲೆಯಲಿ
ಮೈಯಲಿ ಪುಳಕ
ಕಡಲಿನ ತಡಿಯಲಿ
ಭೋರ್ಗರೆಯುವ ಜಳಕ
ಈ ನಿನ್ನಯ ಪ್ರೀತಿಯ ನೋಡಿ
ನಾನಾದೆ ಭಾವುಕ
🚣♀️ದೋಣಿಯ ಕಥೆ🚣🏻♂️
ಇದುವೇ ನಿನ್ನ ಮಿಂಚಿನ
ಹೃದಯ
ಕಾಡಿತು ನನ್ನ ಅರಿಯದ
ಹೃದಯ
ಸೇರಲು ಬಂದು ಬರೆಯಿತು
ಕಥೆಯ
ನಾವಿಕನಿಲ್ಲದ ದೋಣಿಯ
ವ್ಯಥೆಯ
*******ರಚನೆ ******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment