🌙☀️ಸೂರ್ಯ -ಚಂದ್ರ ☀️🌙
ಬದುಕನ್ನು ಬೆಳಗಲು
ಸೂರ್ಯಬಂದ
ಕತ್ತಲೆ ಕಳೆಯಲು
ಚಂದ್ರನು ಬೆಳಕು ತಂದ
ಮನದಿ ಮೂಡಿದೆ
ಒಂದು ಕಥೆಯು
ಬದುಕಲು ಕಲಿಸಿದ
ಒಂದು ವ್ಯಥೆಯು
ಪ್ರೀತಿಯ ಸಾರ
ಹೇಳಲು ಹೊರಟೆ
ಮುದುಡಿದ ಮನಸ್ಸಿಗೆ
ನೀರನ್ನು ಕೊಟ್ಟೆ
ಬಾಳಿನ ಪಯಣದಿ
ನೋವು ನಲಿವು
ಸಾಗುವ ಸವೆಸಿ
ನೆನಪಿನ ಒಲವು
ಬದುಕಿನ ಪಯಣದಿ
ಅರಳಿತು ಹೂವು
ಪದಗಳೇ ಇಲ್ಲ
ವರ್ಣಿಸಲು ಅದರ ಚೆಲುವು
******ರಚನೆ ********
ಚಂದ್ರಶೇಖರ. ಸಿ ಹೆಚ್
Comments
Post a Comment