ಭಾವ ಗೀತೆ -25
🌹 ಒಲವಿನ ಸವಿ ನೋಟ 🌹 ನಿನ ಒಲವಿನ ಸವಿನೋಟಕೆ ಸೋತವನು ನಾನಾದೆ ನಿನ ಹೃದಯದ ಅರಮನೆಯ ಬಯಸಿ ಕುರುಡಾದೆ //ಪಲ್ಲವಿ// ಲತೆಯಲ್ಲಿರೋ ಮೊಗ್ಗೆಲ್ಲವೂ ಸವಿ ಕನಸಿಗೆ ಹೂವಾಗಿ ಮುತ್ತಿಕ್ಕಲು ಮುಂದಾದರೆ ಕನಸೆಲ್ಲವೂ ಹಾವಗಿ ಸಂಪಿಗೆಯ ಸುವಾಸನೆ ನಲ್ಲೆಯ ಮೂಡಿ ತುಂಬ ಹೂವು ಜಾರಲು ನನ್ನೊಳಗೆ ಅವಳ ನಗುವೇ ಪ್ರತಿಬಿಂಬ ಈ ಮೋಹಕ ಬಲು ಪ್ರಾಯವು ಜೇಡರ ಬಲೆಯಂತೆ ಬಿದ್ದರೆ ತಾನೇ ತಿಳಿಯುವುದು ಚಕ್ರವ್ಯೂಹದಿ ತಾ ಬಲಿಯಾದಂತೆ *********ರಚನೆ******** ಡಾ.ಚಂದ್ರಶೇಖರ್ ಸಿ.ಹೆಚ್l