ಭಾವ ಗೀತೆ -7
🌹ಗುಡಿಯಲ್ಲಿ ದೇವರಿಲ್ಲ 🌹
ದೇವಾಲಯದ ಗುಡಿಯಲಿ ದೇವರಿಲ್ಲ
ನನ್ನ ಭಕ್ತಿಗೆ ಸಾಟಿ ಯಾರಿಲ್ಲ
ಪೂಜಿಸುವುದು ಕಲ್ಲುಗಳನ್ನು
ಗುಡಿ ಗೋಪುರದ ತುಂಬೆಲ್ಲ //ಪಲ್ಲವಿ//
ಗಂಟೆಗಳ ನಾದ ಘೋಷ
ಕರ್ಪೂರದ ಆರತಿ
ಮೊಳಗುತಿದೆ ನಾಮ ಸ್ತೋತ್ರ
ದೇವಾ ನೀನು ಪ್ರಸನ್ನ ಮಾರುತಿ
ದೈವಕ್ಕೆ ಮೆರವಣಿಗೆಯ ಜಾತ್ರೆ
ತೇರು ಬೀದಿ ರಥದ ಯಾತ್ರೆ
ಪ್ರೀತಿ ಮಮತೆ ಕರುಣೆಯಲ್ಲಿ
ರಥವು ನುಗ್ಗಿ ನೆಡೆವುದು
ಭಕ್ತರೆಲ್ಲ ಕಳಶಕ್ಕೆ ಬಾಳೆಹಣ್ಣು ಎಸೆದು
ಹಣ್ಣು ಕಾಯಿ ತಂದು ಕೈ ಮುಗಿವುದು
ದೈವಕೆ ಹಣದ ಕಾಣಿಕೆ ಬೇಕಿಲ್ಲ
ಪಾಪದ ಮುಕ್ತಿಗೆ ಇದು ಸಾಕಲ್ಲ?
**********ರಚನೆ**********
ಡಾ. ಚಂದ್ರಶೇಖರ್ ಸಿ.ಹೆ ಚ್
Comments
Post a Comment