ಭಾವ ಗೀತೆ -3
🌹ನಿನ್ನ ನಾ ಕಂಡೆ 🌹
ಕವನದಲ್ಲಿ ಕವಿಯ ಕಂಡೆ
ಕವಿತೆ ಪಡೆದ ರಾಗ ಕಂಡೆ
ರಾಗದೀ ಬೆರೆತ ಶ್ರುತಿ ಕಂಡೆ
ಕೇಳಿ ನೋವ ಮರೆತು ಉಂಡೆ//ಪ//
ನವಿಲ ನಾಟ್ಯ ಬಲು ಸೊಗಸು
ಕೋಗಿಲೆಗೆ ವಸಂತ ಮಾಸ ದೀರಿಸು
ನವ ಚೈತ್ರ ಚಿಗುರಿ ತಂತು ಕನಸು
ಹಸಿರು ಹಾಸಿಗೆ ಇಳೆಗೆ ಹೊದಿಸು
ಕಾಲ ಮರೆಸಿ ಬದುಕ ಸವೆಸಿದೆ
ಆಸೆ ತರಿಸಿ ದುಃಖ ಬರಿಸಿದೆ
ಹಗಲು ಇರುಳು ಬಂದು ಹೋಗಿ
ಬದುಕು ಬೆಂದಿದೆ ವಯಸ್ಸು ಕೂಗಿ
ನಾಳೆಗಳು ಭರವಸೆಯ ದಿನ
ಹರುಷ ತುಂಬಲಿ ತನುಮನ
ನೆನ್ನೆಗಳ ನೆನಪು ಮರೆತು
ಕುಣಿದು ಕುಪ್ಪಳಿಸೋಣ ಬೆರೆತು
ಜೀವದಲಿ ಭಾವ ಬೆಳಕು ತುಂಬಿ
ಭಕ್ತಿಯಲ್ಲಿ ಮನೆಯ ದೈವ ನಂಬಿ
ಪಾಪವೆಲ್ಲ ತೊಳೆದು ಬದುಕು ಶುಬ್ರವಾಗಲಿ
ಹೊಸ ದಿನಗಳು ಮತ್ತೆ ಬಂದು ಹಳೆಯದಾಗಲಿ
***********ರಚನೆ*********
ಡಾ. ಚಂದ್ರಶೇಖರ್ ಸಿ.ಹೆಚ್
ಚೆಂದದ ಸಾಲುಗಳು ಆಪ್ತವಾಗಿವೆ.
ReplyDelete