ಜನಪರ ಗೀತೆ-4
🌹ಓ ನನ್ನ ಪರಿಸರ 🌹
ಪ್ರಕೃತಿಯ ಮಡಿಲಲ್ಲಿ ಬೆಟ್ಟ ಬಯಲುಗಳಲ್ಲಿ
ಮರ-ಗಿಡಗಳ ವೇದನೆ
ಕಾಡು ಕಡಿದು ನಾಡು ಮಾಡೋ
ನರ ಮಾನವರ ರೋಧನೆ. //ಪ//
ಗಾಳಿಯ ಮಲಿನಕೆ ಓಝೋನ್ ಪದರ ಬಿರುಕು
ನುಗ್ಗಿದೆ ಹರಿದು ಸೂರ್ಯನ ಬೆಳಕು
ರಾತ್ರಿ ಕಾಣುವ ತಂಪು ಚಂದ್ರನಿಗೂ ಸೆಕೆ
ಚಂದ್ರನಲ್ಲಿ ಜೀವಿಸಲು ಮಾನವನ ಬಯಕೆ
ಹುಡುಕಬೇಕು ನಾವು ಆಮ್ಲಜನಕ ಗಾಳಿ
ವಾಹನವು ಬಿಡುತ್ತಿದೆ ವಿಷದ ಬಿಸಿ ಗಾಳಿ
ಉಸಿರು ನಿಂತ ಆಗಿದೆ ಶುದ್ಧ ಗಾಳಿ ಇಲ್ಲದೆ
ಬೆಟ್ಟಗುಡ್ಡ ಬಯಲು ಗಿಡಮರ ಗಳಿಲ್ಲದೆ
ಮಳೆ ಹನಿಯೂ ವಿಷವಾಗಿ ಭೂಮಿಗೆ ತಾ ಸೇರಿ
ಉಣಿಸುತ್ತಿಹರು ರಾಸಾಯನಿಕ ವಿಷದ ಮಾರಿ
ಭೂಮಿಯನ್ನ ರಂದ್ರ ಮಾಡಿ ತೆಗೆದಿಹರು ನೀರು
ಕುಡಿಯುವ ನೀರಿಗಾಗಿ ಸೋರುತ್ತಿದೆ ಸೂರು
ಭೂಮಿ ತಾಯಿಗೆ ವಿಷವ ಉಣಿಸುತ್ತಿಹರು
ಅನ್ನ ತಿನ್ನುವ ಬಾಯಲ್ಲಿ ರಕ್ತ ಕಕ್ಕುತಿಹರು
ಪರಿಸರವ ನಾಶ ಮಾಡಿ ಹರುಷ ಪಡುತಿಹರು
ಹೆತ್ತ ತಾಯಿಯ ಹಸಿರ ಬಸಿರು ಸುಡುತಿಹರು
**********ರಚನೆ**********
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment