ಭಾವ ಗೀತೆ -15
🌹 ಕಾರಣವ ಯಾರಿಗೆ ಕೇಳಲಿ🌹
ಕಡಲು ನೀಲಿ ಆದರೇನು
ಕುಣಿವುದೆನ್ನ ಮನವು
ನೀಲಿ ಅಲೆ ಬಂದು ಹೋಗಿ
ತೂಗಿತೆನ್ನ ಹಡಗು
ನೀರಿಗೇಕೆ ಹರುಷವು
ಅಡಗಿಗೇಕೆ ಭಯವು
ಕಾರಣವ ಯಾರಿಗೆ ಕೇಳಲಿ? //ಪಲ್ಲವಿ//
ಬಿಳಿಯ ಮೋಡ ಓಡುತಿರಲು
ನೋಡಲೇಷ್ಟು ಸುಂದರ
ಮೂಡಡಿಕ್ಕಿ ಒಡೆದು
ಮಳೆ ಹನೀ ಬಂತು ತುಂತುರ
ಮೋಡಕೇನು ಹರುಷವು
ಮಳೆ ಹನಿ ಏಕೆ ಭಯವು
ಕಾರಣವ ಯಾರಿಗೆ ಕೇಳಲಿ?
ಹಕ್ಕಿಗಳು ರೆಕ್ಕೆ ಬಿಚ್ಚಿ
ನೀಲಿ ಆಕಾಶಕ್ಕೆ ಹಾರಿವೆ
ಗೂಡಿನಲ್ಲಿ ಮೊಟ್ಟೆ ಇಟ್ಟು
ಜೀವಕ್ಕಾಗಿ ಕಾದಿವೆ
ಹಾರಲೇನು ಹರುಷವು
ಮೊಟ್ಟೆ ಜೀವದ ಭಯವು
ಕಾರಣವ ಯಾರಿಗೆ ಕೇಳಲಿ?
ತಂಬೂರಿ ತಂತಿ ಮೀಟಿದಾಗ
ಸಂಗೀತದ ಹೊನಲು
ಪ್ರೀತಿ ಬಂದ ಹೃದಯದಿ
ಮನಸ್ಸು ಏಕೋ ಕಡಲು
ನಾದಕೇನು ಹರುಷವು
ಮನಸಲೇನು ಭಯವು
ಕಾರಣವ ಯಾರಿಗೆ ಕೇಳಲಿ?
ಮನದಿ ಭಾವಗೀತೆ ಮೂಡಿ
ಕವಿಯು ನಕ್ಕುನಲ್ಲಿವನು
ಗೀತೆಯ ವ್ಯಥೆಯ ನೋಡಿ
ಕೇಳುಗ ಬಾವುಕನಾದನು
ಕವಿಗೇನು ಹರುಷವು
ಕೇಳುಗನಿಗೆಕೆ ಭಯವು
ಕಾರಣವ ಯಾರಿಗೆ ಕೇಳಲಿ?
**********ರಚನೆ********
ಡಾ. ಚಂದ್ರಶೇಖರ್ ಸಿ.ಹೆ ಚ್
Comments
Post a Comment