ಭಾವ ಗೀತೆ -12

 



     🌹ಕನಸಿನ ರಾಣಿ🌹


ನನ್ನ ಕನಸಿನ ರಾಣಿ

ನಗೆ ಚೆಲ್ಲಿ ಬರುತ್ತಾಳೆ

ಕಣ್ಣ ನೋಟದೀ ಚುಚ್ಚಿ 

ಕಣ್ಣ ಹನಿ ತರುತ್ತಾಳೆ  //ಪ//


ಕನಸಲ್ಲಿ ಬಂದು ಮನಸಲ್ಲಿ 

ಚಿತ್ರವ ಬಿಡಿಸೋಳೆ

ಪ್ರೀತಿಯ ಗೋಪುರದೀ   

 ದೇವತೆಯಾಗಿ ನಿಲ್ಲುತಾಳೆ


ಬೋರ್ಗರೆವ ನದಿಯಾಗಿ

ಧುಮ್ಮಿಕ್ಕಿ ಬರುತ್ತಾಳೆ

ಕಡಲ ಒಡಲ ಸೇರಿ

ಉಪ್ಪಾಗಿ ಅಳುತ್ತಾಳೆ


ದಟ್ಟ ಕಾಡಿನಲ್ಲಿ ಕುಹೂ ಕುಹೂ

ಧ್ವನಿಯ ಕೋಗಿಲೆಯಾಗಿರುತ್ತಾಳೆ

ನನ್ನ ಅರಮನೆಗೆ ನವಿಲಂತೆ

ಕುಣಿದು ಬರುತ್ತಾಳೆ


ಬಾನಲ್ಲು ಅವಳೇ ಭುವಿಯಲ್ಲೂ ಅವಳೇ

ಎಲ್ಲೆಲ್ಲೂ ಅವಳೇ

ನನ್ನ ಹೃದಯದ ಅರಮನೆಯ

ರಾಣಿಯಾಗಿ ಮೇರಿತವಳೆ


***********ರಚನೆ*******

ಡಾ. ಚಂದ್ರಶೇಖರ್ ಸಿ ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20