ಭಾವ ಗೀತೆ -22
🌹 ಹಾಡು ಬಾ ಕೋಗಿಲೆ🌹
ಮಾಮರದ ಕೋಗಿಲೆಯೇ
ಹಾಡು ಬಾ ನೀನು
ರಾಗಕ್ಕೆ ತಾಳವಾಗಿ
ಕುಣಿಯುವೆ ನಾನು // ಪಲ್ಲವಿ//
ಋತುಗಳು ನಿನ್ನ ಕರೆದು
ನಲಿಯುತ್ತಿವೆ ನೋಡು
ಒಮ್ಮೆ ನೀ ಹಾಡಬಾರದೆ
ಪ್ರಕೃತಿಯ ಹಾಡು
ನಿನ್ನ ಧನಿಗೆ ಮಾಮರಗಳು
ಚಿಗರಿ ಹೂವಾಗಿವೆ
ಪ್ರಕೃತಿಯ ಮಡಿಲಲ್ಲಿ
ಭಾವ ಬೆಳಗಿವೆ
ಭದ್ರೆ ಹರಿಯುತಿಹಳು
ವನದಿ ಜುಳು ಜುಳು ಎಂದು
ಮಾರುತಗಳು ಗಾಳಿ ಬೀಸಿವೆ
ತಣ್ಣಗೆ ಸುಯ್ ಸುಯ್ ಎಂದು
ಹಸಿರು ಉಸಿರಾಗಿದೆ
ನಿನ್ನ ಮಧುರ ಸ್ವರಕ್ಕೆ
ಮಾತು ಮೌನವಾಗಿದೆ
ನಿನ್ನ ಮಾಧುರ್ಯಕ್ಕೆ
ಶೃಂಗಾರ ಕಾವ್ಯ ಹೇಳು ಬಾರೆ
ನಿನ್ನ ಕಂಠದಿ ಕೂಗಿ
ಪ್ರೀತಿಗೂ ಸ್ವರ ಉಂಟು
ಎಂದು ತೋರು ಬಾರೆ
ನವರಸಗಳು ರಾಗವಾಗಿ
ಹೊರ ಹೊಮ್ಮಲಿ ಕೋಗಿಲೆ
ಬಾವದಿ ಹಾಡೊಂದು
ಗುನುಗು ಬಾ ಕೋಗಿಲೆ
*********ರಚನೆ ********
ಡಾ. ಚಂದ್ರಶೇಖರ್ ಸಿ ಹೆ ಚ್
ಪ್ರಕೃತಿ ಭಾವ ಸುಂದರವಾಗಿದೆ ಸರ್
ReplyDelete