ಭಾವ ಗೀತೆ- 20
🌹 ಬಾರೆ ಸನಿಹ🌹
ಹುಡುಗಿ ಬಾರೆ ನೀ ಸನಿಹ
ನೀನು ಇರದೆ ಏಕೋ ವಿರಹ
ನಿನ್ನ ನೋಡಿ ಬರೆದೆ ಕವಿತೆ
ನನ್ನ ಪ್ರೀತಿ ಮಾಡೆ ವನಿತೆ //ಪಲ್ಲವಿ//
ನನಗೆ ಹೇಳು ನಿನ್ನ ಇಷ್ಟ
ತಂದುಕೊಡುವೆ ಆದರೂ ಕಷ್ಟ
ನನಗೇನಿಲ್ಲ ತುಂಬಾ ನಷ್ಟ
ನನ್ನ ಮಾತು ಬಹಳ ಸ್ಪಷ್ಟ
ನನ್ನ ಪ್ರೀತಿ ಹಿಮಾಲಯದಂತೆ
ಕರಗಿ ನೀರಾದರೂ ನಿನ್ನ ಚಿಂತೆ
ಬೇಡ ನಿನಗೆ ಅಂತೆ ಕಂತೆ
ಸಂತೆಯಲ್ಲಿ ಕೂಡ ನಿನ್ನದೇ ಚಿಂತೆ
ಬದುಕಿ ಬಾಳೋ ಹುಡುಗಿ ನೀನು
ಮಾಡಬೇಡ ಯೋಚನೆಯನ್ನು
ಹುಡುಗಿ ಬೇಡುವೇ ದೇವರಿಗೆ ಹರಕೆ
ಬಾಳಲಿ ಕವಿತೆಯಾಗು ನನ್ನ ಸ್ವರಕ್ಕೆ
ಬದುಕು ಒಂದು ಸುಂದರ ಕಡಲು
ಸೇರು ನನ್ನ ಪ್ರೀತಿಯ ಮಡಿಲು
ಕಾದಿರುವೆ ನಿನಗಾಗಿ ನಾನು
ಬೇಕು ಹೇಳು ಮತ್ತಿನ್ನೇನು
**********ರಚನೆ *******
ಡಾ. ಚಂದ್ರಶೇಖರ್ ಸಿ.ಹೆ ಚ್
🥰🥰,❤️
ReplyDelete