ಭಾವಗೀತೆ -23
🌹 ಕುಣಿಯು ಬಾ ನವಿಲೇ🌹
ಕೂಗು ಬಾ ಕೋಗಿಲೆ
ಕುಹೂ ಕುಹೂ ಎಂದು
ರೆಕ್ಕೆ ಪುಕ್ಕ ಬಿಚ್ಚಿ ನವಿಲೇ
ಕುಣಿಯು ಬಾ ಬಂದು //ಪಲ್ಲವಿ//
ಹುಣ್ಣಿಮೆಯ ಚಂದ್ರ
ನೋರೆ ಹಾಲ ಬೀಳುಪು
ನಕ್ಷತ್ರಗಳ ಸಾಲು
ಸೀರಿಯಲ್ ಸೆಟ್ ಅಂತೆ ಹೊಳಪು
ಸೂರ್ಯನ ಕೆಂಪು ಬಣ್ಣ
ಸುಡುತ್ತಿದೆ ಜಗವ
ಮೋಡದ ಮಳೆಹನಿಗೆ
ತೋರು ನಿನ್ನ ಮೊಗವ
ಸಾಗರದ ಅಲೆಯೇಕೆ
ನೀಲಿಯ ಬಣ್ಣ
ಬೀಸುವ ಗಾಳಿಯು
ಸುಯ್ ಎಂದು ಕೂಗಿತಣ್ಣ
ಹಸಿರೇ ಉಸಿರು
ಇದು ಪ್ರಕೃತಿಯ ಸೊಬಗು
ಪರಿಸರವ ಕವಿತೆ ಮಾಡಿ
ಹಾಡಿದರೆ ಮೆರಗು
***********ರಚನೆ *******
ಡಾ.ಚಂದ್ರಶೇಖರ್ ಸಿ ಹೆ ಚ್
Comments
Post a Comment