ಭಾವ ಗೀತೆ -8
🌹ವಂದನೆಗಳು ಗೆಳತೀ ನಿನಗೆ 🌹
ನನ್ನ ಪ್ರೀತಿ ವಂದನೆಗಳು ಗೆಳತಿ ನಿನಗೆ ವಂದನೆಗಳು
ದೇಹಕ್ಕೆ ಜಡತ್ವದ ಬೀಗ ಹಾಕಿದಾಗ
ಹೃದಯದ ಬಾಗಿಲು ತೆರೆದೆ
ಮನಸ್ಸಿನಲ್ಲಿ ಪ್ರೀತಿಸುರಿದೆ ಗೆಳತಿ //ಪಲ್ಲವಿ//
ನನ್ನ ಪ್ರೀತಿ ವಂದನೆಗಳು ಗೆಳತಿ ನಿನಗೆ ವಂದನೆಗಳು
ಹಣದಿಂದ ಮಾನವೀಯತೆ ಅಳೆವಾಗ
ಜೀವನ ಮೌಲ್ಯಗಳಿಗೆ ಬೆಲೆ ಕೊಟ್ಟೆ
ಒಲವಿನ ಸಾರವನ್ನು ಹೃದಯದಲ್ಲಿಟ್ಟೆ ಗೆಳತಿ
ನನ್ನ ಪ್ರೀತಿ ವಂದನೆಗಳು ಗೆಳತಿ ನಿನಗೆ ವಂದನೆಗಳು
ಮಾತಿನಲ್ಲಿ ಮಂಟಪ ಕಟ್ಟಿ
ಮೋಸ ಅಧರ್ಮಗಳು ನಗುವಾಗ
ನೋಟದಲ್ಲಿ ನ್ಯಾಯ ಮಿನುಗುತ್ತಿತ್ತು ಗೆಳತಿ
ನನ್ನ ಪ್ರೀತಿ ವಂದನೆಗಳು ಗೆಳತಿ ನಿನಗೆ ವಂದನೆಗಳು
ಕವಿತೆಗೆ ಕತ್ತಲು ಕವಿದು
ಭಾಷೆ ಬಾವುಕವಾದಾಗ
ನಿನ್ನ ಕವನ ಮೌನದ ಉತ್ತರ ಗೆಳತಿ
ನನ್ನ ಪ್ರೀತಿ ವಂದನೆಗಳು ಗೆಳತಿ ನಿನಗೆ ವಂದನೆಗಳು
ಬೀದಿಯಲ್ಲಿ ನಾ ಪ್ರೀತಿ ಪ್ರೇಮ ಹುಡುಕುವಾಗ
ಕೆಡು ನೋಟಗಳ ಬಾಣ ತಾಕಿರಲು
ನೀ ನನ್ನ ಹೃದಯದ ಹೂಬಾಣವಾದೆ ಗೆಳತಿ
********ರಚನೆ**********
ಡಾ. ಚಂದ್ರಶೇಖರ್ ಸಿ.ಹೆ ಚ್
ಚಂದದ ಸಾಲುಗಳು. ಭಾವ ಬೆಸುಗೆ
ReplyDeleteThis comment has been removed by the author.
ReplyDelete