ಭಾವ ಗೀತೆ -17
🌹 ನಲ್ಮೆಯ ಗೆಳತಿ 🌹
ನನ್ನ ನಲ್ಮೆಯ ಗೆಳತಿ
ಮನದಲ್ಲಿ ನೀ ಭಾವವಾದೆ
ಉಸಿರಲ್ಲಿ ನೀ ಹೆಸರಾದೆ
ಬರೆದ ಪದದಿ ನೀ ಕವಿತೆಯಾದೆ //ಪಲ್ಲವಿ//
ನಿನ್ನ ಕೂಗಿ ಬಳಿ ಬರಲು
ನನ್ನಿಂದ ನೀ ದೂರದೆ
ಸುಡುತ್ತಿದೆ ವಿರಹ ಬರೆದ ಹಣೆಬರಹ
ಜೀವನ ಶೃತಿಯ ಸ್ವರಹ
ಕವನ ನೀನು ಕವಿಯು ನಾನು
ಇನ್ನೇನು ಮತ್ತೆ ನನಗೆ ನೀನು
ನಿನ್ನಯ ಪ್ರೀತಿ ತಂತು ಹೊಸಭೀತಿ
ಓಲವಲ್ಲಿ ನಾ ಹೇಗೆ ನಗಲಿ
ನಿನ್ನನು ಬಿಟ್ಟು ಪ್ರೀತಿ ಕದ ತಟ್ಟಿ
ಒಲವಿನ ನೆಲೆ ನನ್ನಲ್ಲಿ ಚಿಗುರುತೇಗೆ
ಎದೆಯ ಬಡಿತ ನೀನು ಕನಸಿನ ರಾಣಿ ನೀನು
ಮನದ ಮಿಡಿತ ನೀನು ಹೃದಯದ ತುಡಿತ ನೀನು
ಜಾತಿಗಳ ಜೊತೆಯಲ್ಲಿ ನಾವು ಬೆಂದು
ಪ್ರೀತಿಯ ರೀತಿ ನೀತಿ ನಮ್ಮ ತಿಂದು
ಜಗದ ಮುಂದೇ ನಾವು ಬಾಗಬೇಕೆ
ನೋವಲು ತಲೆಬಗ್ಗಿಸಿ ನಾವು ನಡೆಯಬೇಕೆ
*********ರಚನೆ*********
ಡಾ. ಚಂದ್ರಶೇಖರ್ ಸಿ.ಹೆ ಚ್
Comments
Post a Comment