ಭಾವ ಗೀತೆ -5

 



🌹ಎದೆಯ ಬಗೆದು ತೋರಲೆ 🌹

 

ಎದೆಯ ಬಗೆದು ತೋರಲೆ ರಾಮ 

ತೋರಿದನು ಎದೆಯ ಸೀಳಿ  ನಿನ್ನ ಹನುಮ

ಇತಿಹಾಸದೀ ನಡೆದ ಕಥೆಗಳು ನೂರು

ಸಾರಿವೆ ನಮ್ಮ ದೇಶ ದೈವದ ತವರೂರು //ಪ//


ರಾಜರುಗಳು ನೆಲೆಸಿ ಬಿಟ್ಟರೂ ಬೀಡು

ಕಟ್ಟಿದರು ಭವ್ಯ ದೇವಾಲಯಗಳ ನಾಡು

ಭಕ್ತಿಗೆ ಇಲ್ಲಿ ಕೊನೆಗೂ ಕೊನೆಯಿಲ್ಲ

ಭಕ್ತರಿಗೆ ಇಲ್ಲಿ ಮುಂದೆಂದೂ ಬರವಿಲ್ಲ


ತಾಜ್ ಮಹಲ್ ಪ್ರೀತಿಯ ಸಂಕೇತ

ಗೋಳಗುಮ್ಮಟ ಗೋರಿಯ ಸಂಕೇತ

ಆಳಿ ಹೋದ ದೊರೆಗಳು ಎಷ್ಟೋ 

ಸುಟ್ಟು ಹೋದ ಕನಸುಗಳು ಎಷ್ಟೋ 


ಬೆಟ್ಟಗುಡ್ಡಗಳು ಇಂದೂ ಕರಗಲೆ ಇಲ್ಲ

ಕರಗಿಸಲು ಶ್ರಮಪಟ್ಟ ಮಂದಿ ಬಹಳ ಇಲ್ಲ

ಸಂತರುಗಳು ನೆಲೆಸಿದ ಶಾಂತಿಯ ತೋಟ

ಸ್ವಾತಂತ್ರ್ಯದ ನಡೆಯಿತು ಕ್ರಾಂತಿಯ ನೋಟ


ಸುರಿಸಿದರು ಬೆವರು ನಾಡು ನುಡಿಯ ಕಟ್ಟಿ

 ನಡೆದರೂ ದ್ವೇಷ ವೈಷಮ್ಯ ಜಾತಿ ನೀತಿ ಮೆಟ್ಟಿ

ನಮ್ಮ ದೇಶ ನಮಗೆ ಹಸಿರು ಮತ್ತು ಉಸಿರು

ಬೆಳಸಬೇಕು ನಾವೂ ತಾಯಿ ಭಾರತದ ಹೆಸರು 


*********ರಚನೆ*********

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35