ಭಾವಗೀತೆ -10

 



      🌹 ಅರಳಿದೆ ಕವಿತೆ 🌹


ಮನಸ್ಸಿನಲ್ಲಿ ಮೊಗ್ಗಾಗಿ

ಕವಿತೆ ಹೂವು ಅರಳಿದೆ

ಕವಿತೆಯು ಹಾಡಾಗಿ

ಮನಸೂರೆಗೊಂಡಿದೆ //ಪಲ್ಲವಿ//


ಜಗದ ತುಂಬಾ ನೆರಳು

ಕಂಪಾಗಿ ಸಂಪಾಗಿ

ಮನವನೇಕೊ ಕದಡಿದೆ

ಬದುಕು ತಂಪಾಗಿದೆ


ನೂರು ಮಾತು

ಅರ್ಥವ್ಯರ್ಥ

ನಾನು ಎಂಬ ಮಾತು

ಜೀವನದ ಸ್ವಾರ್ಥ


ಭೂಮಿ ಮುಗಿಲು ದೂರ

ಪ್ರೀತಿ ಏಣಿ ಹಾಕಿ ಏರು ಬಾರ

ನದಿಯು ಹರಿದು

ಕಡಲ ಒಡಲು ಸೇರ


ಮನುಜ ನಿನ್ನ ಮಾತೆ ಕಥನ

ಪ್ರೀತಿ ಪ್ರಣಯಗಳ ವಚನ

 ನನ್ನ ಹೃದಯವ ತಾಕಿ

ಮೂಡಿಸಿದೆ ಸಂಚಲನ?



**********ರಚನೆ********

ಡಾ.ಚಂದ್ರಶೇಖರ್ ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35