ಭಾವ ಗೀತೆ -24

 



       🌹 ನಾ ಕುರುಡು🌹


ನಿನ್ನ ಕಣ್ಣ ನೋಟವು ಕಾಡಿತು ನಲ್ಲೆ

ನೀನು   ಬರದೇ ಬಾಳಲ್ಲಿ ಕುರುಡಾದನಲ್ಲೆ

ನಿನ್ನ ಮೌನದ ಮಾತು

ನನ್ನ ಹೃದಯವಾ ತಾಗಿತು

        ನೀ ಇರದೆ ಜಗ ಕುರುಡು

       ನಿನಗಾಗಿ ಹೃದಯ ಬರಡು. //ಪಲ್ಲವಿ//


ನಿನ್ನ ಮನಸು ನನ್ನ ಏಕೆ ಬಯಸಿತು

ಕಣ್ಣ ರೆಪ್ಪೆಯಲ್ಲಿ ಒಲವ ಕಂಬನೀ ಮಿಡಿಯಿತು

ಇದುವೇ ಏನು ಪ್ರೇಮಪರ್ವ

ಅಂತರಂಗದಲ್ಲಿ ಮೊಳೆತಗರ್ವ

  ನೀ ಇರದ ಬದುಕು ಏನ್ ಚಂದ

  ನಿನ್ನ ಒಲವೇ ನನಗೆ ಆನಂದ


ನಿನ್ನ ಪಾದ ತಾಕಿ ಹೃದಯ ಮಿಡಿಯಿತು

ಎಲ್ಲಾ ದಿಕ್ಕುಗಳು ನನ್ನ ಕೂಗಿ ಕರೆಯಿತು

ಮನದ ಆಸೆ ಮನಸಾರೆ ಸೇರ ಬಯಸಿತು

ನಾವಿಕನಿಲ್ಲದ ದೋಣಿ  ದಡ ಹೇಗೆ ಸೇರಿತು

    ಓ ನನ್ನ ಚೆಲುವೆ

    ಮನದ ನಗುವ ಒಲವೇ


ನೀ ನಡೆದ ದಾರಿ ತುಂಬ ಹೂವು

ಕಾಲವೊಂದು ನೆನೆದಿದೆ ಮಾಯದ ನೋವು

ನೋವು ಎದೆಯ ತಾಕಿ ಮಾಡಿತು ಗಾಯ

ಎದೆಯ ಬಡಿತ ಕೂಗಿತು ಓ ಛಾಯಾ

        ಓ ನನ್ನ ಪ್ರೀತಿ ಚಿನ್ನ

ಹೃದಯಕ್ಕೆ ಇಟ್ಟೆ  ಒಲವ ಗುನ್ನ


ತುಟಿಗೆ ತುಟಿ ಸೇರಿ

ಹಾಲು ಜೇನು ಹೀರುವಂತೆ

ಕಾಡದೇಯೆ ಒಮ್ಮೆ ಬಾರೆ

ಮರೆತು ನೂರು ಚಿಂತೆ

   ಬೇಡಿದೆ ನನ್ನ ಅಂತರಂಗ

  ಮಾಡು ನನ್ನ ಒಮ್ಮೆ ಸಂಗ


***********ರಚನೆ *******

ಡಾ. ಚಂದ್ರಶೇಖರ್ ಸಿ.ಹೆ ಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20