ಭಾವ ಗೀತೆ -19
🌹 ಪರೀಕ್ಷೆ ಬರೆಯುವ ಹುಡುಗ🌹
ನಾಳೆ ಇವನ ಪರೀಕ್ಷೆ ಅಂತೆ
ಮುಂಜಾನೆದ್ದು ದೇವರ ನೋಡಿ
ಅಣೆಯಲ್ಲಿ ಕುಂಕುಮದ ಮೊಡಿ
ಕಿವಿಯ ತುಂಬಾ ಹೂವ ನೋಡಿ
ಮೌನವಾಗಿ ನಡಿತಾ ಇರೋ
ಹೈದ ಯಾರಣ್ಣ....... ಇವನು ಏನು ಮಾಡ್ಕೊಂಡವನಣ್ಣ //ಪಲ್ಲವಿ//
( ಇವನು ವಿದ್ಯಾರ್ಥಿ ಆಗಿರ್ಬೋಹುದಾ
ಪರೀಕ್ಷೆ ಬರೆಯಲು ಹೊರಟಿರಬಹುದಾ)
ಕಾಲೇಜ್ ಒಳಗೆ ಕಾಲಿಟ್ಟು
ಬೆಂಚ್ ಮೇಲೆ ಕೂತ್ಬಿಟ್ಟು
ಉತ್ತರ ಪತ್ರಿಕೆ ಮೇಲೆ
ಕೈಯಲ್ಲಿ ತುಟಿಯ ಮುಟ್ಟಿಕೊಂಡು
ಮತ್ತೆ ಎದೆಗೆ ಒತ್ತಿಕೊಂಡು
ಮಾಡಿದ್ದೇನೆಣ್ಣ......... ಇವನ ಮಂತ್ರ ಕಾಣಣ್ಣ
( ದೇವರೇ ಬಂದು ವರವ ಕೊಟ್ನಾ
ದೇವರು ಬಿಟ್ರೆ ಇವನು ಕೆಟ್ನಾ)
ಪ್ರಶ್ನೆ ಪತ್ರಿಕೆ ತೆಗೆದುಕೊಂಡು
ಉತ್ತರ ಪತ್ರಿಕೆ ಹಿಡಿದುಕೊಂಡು
ಹಾಳೆಯಲ್ಲಿ ಬರಿತಾವ್ನೆ ನೋಡಣ್ಣ
ನಾನು ಬಡವ ದಯವಿಟ್ಟು ಪಾಸ್ ಮಾಡಿ
ಬರೆಯುತ್ತಿರುವ ಬಂಟ ಇವನಣ್ಣ
( ಶಿಕ್ಷಕರ ಮರಳು ಮಾಡುತ್ತಾವನೆ
ಅಣೆಬರಹ ಹೊಣೆ ಮಾಡ್ತಾವ್ನೆ)
*******ರಚನೆ*********
ಡಾ. ಚಂದ್ರಶೇಖರ್ ಸಿ.ಹೆ ಚ್
Comments
Post a Comment