ಭಾವಗೀತೆ -11
🌹 ಬೆಳದಿಂಗಳ ಚಂದ್ರ 🌹
ಬೆಳದಿಂಗಳ ಚಂದ್ರ ಬಿಳಿ ಹಾಲನೊರೆಯ
ಬಣ್ಣದಲ್ಲಿ ಮಾಸಿತೇಕೆ
ನಡುರಾತ್ರಿಯಲ್ಲಿ ತಂಪಾದ ನಿನ್ನ
ಮೋಡಗಳು ನುಂಗಿತೇಕೆ //ಪಲ್ಲವಿ//
ಹಸಿರೇಕೊ ಇಂದು ಬಿಸಿಲಿಗೆ ಸುಟ್ಟು
ಗಹ ಗಹಿಸಿ ಅಳುವುದೇಕೆ
ತಿಳಿ ನೀಲಿ ಆಗಸದಿ, ಬಿಳಿ ಮೋಡ ಬಂದು
ಬಣ್ಣವನು ತಿಂದು ತೆಗಿತೇಕೆ
ಮಾಮರ ಚಿಗುರದೆ ಕೋಗಿಲೆಯ ಕುಹೂ ಕುಹೂ
ರಾಗ ಬರುವುದೇಗೆ
ಸತ್ತ ಸ್ಮಶಾನದಲ್ಲಿ ಎಡೆಯೂಟಕ್ಕೆ ಕಾಗೆಯು
ಕಾ ಕಾ ಎಂದು ಹಾಗೆ
ಮಲ್ಲಿಗೆಯ ಪರಿಮಳ ಕಂಪ ಸೂಸಿ
ಮನವ ಕಲಕಿತೇಕೆ
ಮುಡಿಗೆರಿ ಮೈದುಂಬಿ ಗಮವನ್ನು
ಚೆಲ್ಲಲು ಕಾಯಿತೇಕೆ
ನದಿ ಗಾಳಿ ಕಣಿವೆ ಕಡಲು ಮೇಘಗಳು
ಭೋರ್ಗರೆದು ಕೂಗಿತೇಕೆ
ಭೂಮಿಯನ್ನು ತಿಂದು ಸ್ಮಶಾನವನ್ನು ಮಾಡಿದರು
ಹೃದಯ ನಿಮಗಿಲ್ಲವೇಕೆ
******ರಚನೆ************
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment