ಭಾವ ಗೀತೆ -14
🌹 ನಗು ನೀ ಬೇಕು🌹
ನಗು ನೀನು ಬೇಕು ಬಾಳಿಗೆ
ನನ್ನ ಹೃದಯದ ಮಲ್ಲಿಗೆ
ನೀ ಓಲವ ದೀವಿಗೆ
ನನ್ನ ಬಾಳ ಗೆಲುವಿಗೆ //ಪಲ್ಲವಿ//
ನನ್ನವಳ ಸೆರಗಿನಲ್ಲಿ
ಹಸಿರುನೆರಿಗೆ ಚೆಲುವಿನಲ್ಲಿ
ಮನವ ಕೂಗಿ ಕರೆವಾಗ
ಗಾನ ಕೋಗಿಲೆಯ ದನಿಯಾಗಲಿ
ಬದುಕು ಬಳಲಿ ಬೆಂಡಾಗಿ
ಅಳಲು ಬಂದು ಜೊತೆಯಾಗಿ
ಪ್ರೀತಿ ಹೂವು ಕರೆದಿರಲು
ನಗುವು ನನ್ನ ಮನದಿ ಒಡಮೂಡಲಿ
ಆಕಾಶದ ಗೂಡಿನಲ್ಲಿ
ಹುಣ್ಣಿಮೆಯ ಬೆಳಕಿನಲ್ಲಿ
ನಕ್ಷತ್ರಗಳ ಬೀದಿಯಲ್ಲಿ
ನಗುವ ಚಂದ್ರನ ಬೆಳಕಾಗಲಿ
ಬೆಂದ ಈ ಬದುಕಿನಲ್ಲಿ
ಉಸಿರಿಲ್ಲದ ಹೆಸರಿನಲ್ಲಿ
ನೀರಿರದ ಕೊಳದಲ್ಲಿ
ಸಂತೋಷವೆಂಬ ಕಾರಂಜಿ ಪುಟಿದೆಳಲಿ
*********ರಚನೆ*********
ಡಾ. ಚಂದ್ರಶೇಖರ್ ಸಿ.ಹೆ ಚ್
Comments
Post a Comment