ಭಾವ ಗೀತೆ -25
🌹 ಒಲವಿನ ಸವಿ ನೋಟ 🌹
ನಿನ ಒಲವಿನ ಸವಿನೋಟಕೆ
ಸೋತವನು ನಾನಾದೆ
ನಿನ ಹೃದಯದ ಅರಮನೆಯ
ಬಯಸಿ ಕುರುಡಾದೆ //ಪಲ್ಲವಿ//
ಲತೆಯಲ್ಲಿರೋ ಮೊಗ್ಗೆಲ್ಲವೂ
ಸವಿ ಕನಸಿಗೆ ಹೂವಾಗಿ
ಮುತ್ತಿಕ್ಕಲು ಮುಂದಾದರೆ
ಕನಸೆಲ್ಲವೂ ಹಾವಗಿ
ಸಂಪಿಗೆಯ ಸುವಾಸನೆ
ನಲ್ಲೆಯ ಮೂಡಿ ತುಂಬ
ಹೂವು ಜಾರಲು ನನ್ನೊಳಗೆ
ಅವಳ ನಗುವೇ ಪ್ರತಿಬಿಂಬ
ಈ ಮೋಹಕ ಬಲು ಪ್ರಾಯವು
ಜೇಡರ ಬಲೆಯಂತೆ
ಬಿದ್ದರೆ ತಾನೇ ತಿಳಿಯುವುದು
ಚಕ್ರವ್ಯೂಹದಿ ತಾ ಬಲಿಯಾದಂತೆ
*********ರಚನೆ********
ಡಾ.ಚಂದ್ರಶೇಖರ್ ಸಿ.ಹೆಚ್l
Comments
Post a Comment