ಭಾವ ಗೀತೆ -18
🌹 ನೀ ನನ್ನ ಮನದರಸಿ 🌹
ನೀ ನನ್ನ ಮನದರಸಿ
ಮನದಾಸೆ ನೀ ತಿಳಿಸಿ
ಹೃದಯವು ನಿನ್ನ ಬಯಸಿ
ಈ ಬದುಕಲಿ......... ಮತ್ತೇನಿದೆ...... ನುಡಿ ಎನ್ನ ಚೆಲುವೆ. //ಪಲ್ಲವಿ//
ಆಗಸದೆ ನಿನ್ನ ಅಲೆದಾಟ
ಕಾರ್ಮೋಡದಿ ನಿನ್ನ ಸುಳಿದಾಟ
ಮಳೆ ಬೋರ್ಗರೆದು ಬರುವಾಗ
ಚುಂಬಿಸಿದಂತೆ........ ಇಳೆಗೆ...... ಅಪ್ಪಿ ನಿನ್ನ ಬಾಹುವಿನಲ್ಲಿ
ಮುತ್ತಿಟ್ಟು ನೀ ಹೃದಯ ಸೋಕಲು
ನಿನ್ನ ನುಡಿ ನನ್ನ ಮನ ತಾಕಲು
ಭಾಗ್ಯವು ನನ್ನರಸಿ ಬಂದಂತೆ
ಮರೆಯಿತೇಕೋ........ ಕಾಲ...... ಬದುಕ ಬಂಧನದಲಿ
ಪ್ರತಿದಿನವೂ ನಿನ್ನದೇ ಧ್ಯಾನ
ಮರೆತು ನೆನೆದೆ ಮೌನ
ನೀನಾದರೆ ಒಲವಗಾನ
ಹಾಡುವೆ........ ಉಸಿರಾಡುವೆ..... ಈ ಪ್ರೀತಿ ಅಮರ ಎಂದು
********ರಚನೆ**********
ಡಾ.ಚಂದ್ರಶೇಖರ್ ಸಿ.ಹೆ ಚ್
Comments
Post a Comment