ಭಾವ ಗೀತೆ-16
🌹 ಮಧುಚಂದ್ರಕ್ಕೆ ಬಾರೆ🌹
ಮಧುಚಂದ್ರಕ್ಕೆ ಬಂದ ಮೇಲೆ
ಗೆಳತಿ ನೀ ಸಿಹಿ ಜೇನ ಜೊಲ್ಲೆ
ವಸಂತ ಮಾಸ ಚಿಗುರಿದ ಮೇಲೆ
ಕಾಯಿ ಹಣ್ಣಾಗುವುದ ಬಲ್ಲೆ //ಪಲ್ಲವಿ//
ಹರಿವ ನದಿಯು ಮುಂದೆ ತಾ ಓಡುತಾ
ಸೇರಿ ತೇಕೆ ಕಡಲನು
ಕಡಲ ಅಲೆಯು ದಡವ ತಾಕಿ
ಮತ್ತೆ ಬಂತು ತಿರುಗಿ ನೋಡಲು
ಬಯಸಿ ಬಂದ ನನ್ನ ನಲ್ಲೆ
ಪ್ರೀತಿ ಮುತ್ತು ಒಮ್ಮೆ ಕೊಡಲೆ
ವಿರಹ ಒಂದು ಒಲವ ಜ್ವರವು
ಚಂದ್ರನಿಗೂ ಕೂಡ ಪ್ರೀತಿ ಸ್ವರವು
ಹೃದಯ ತಾಕಿ ಮನವ ಕಲಕಿ
ಮನಸ್ಸು ಏಕೋ ಮಾಗಿದೆ
ಜೊತೆಯಾಗಿ ಇರಲು ನನ್ನ ನಲ್ಲೆ
ಬಾಳಿನ ಸೋಲು ನಾ ಗೆಲ್ಲ ಬಲ್ಲೆ
ಎಂದು ಮನವು ಕೂಗಿದೆ
**********ರಚನೆ**********
ಡಾ.ಚಂದ್ರಶೇಖರ್ ಸಿ.ಹೆಚ್
Comments
Post a Comment