ಭಾವ ಗೀತೆ -6
🌹ನೋಟ ತಾಕೀತು 🌹
ಕಣ್ಣ ನೋಟವು ನನ್ನ ಹೃದಯ ಇರಿದೀದೆ ಗೆಳತಿ
ಕಣ್ಣ ನೀರು ಕಂಬನಿಯಾಗಿದೆ ಕೇಳು ಗೆಳತಿ //ಪಲ್ಲವಿ//
ಗೆಜ್ಜೆ ಕಟ್ಟಿದ ನಿನ್ನ ಹೆಜ್ಜೆ ಗುರುತು ನನ್ನ ಕಾಡಿದೆ ಗೆಳತಿ
ಮನದಿ ಹೊಸತು ರಾಗ ತಂದಿಹುದು ಗೆಳತಿ
ನಿನ್ನ ಮಾತು ಮುತ್ತಂತೆ ನಗುವ ಕವನ ಗೆಳತಿ
ಬರೆದ ಮೇಲೆ ಬರಡು ಹೃದಯಕೆ ಜೀವ ಗೆಳತಿ
ಬೆಳಕಿನಲ್ಲಿ ಮನಕೆ ಬಂದು ಇರುಳಿನಲ್ಲಿ ಕಳೆದೆ ಗೆಳತಿ
ನಿನ್ನ ಉಸಿರ ಸವಿಗಾನ ಹೃದಯ ತಾಕಿದೆ ಗೆಳತಿ
ನಿನ್ನ ಸೌಂದರ್ಯಕ್ಕೆ ಬೆರಗಾಗಿ ನಾ ಸೋತೆ ಗೆಳತಿ
ನೀನು ಇರದ ನನ್ನ ಮನಕೆ ಬದುಕು ಬರಡು ಗೆಳತಿ
**********ರಚನೆ*********
ಡಾ. ಚಂದ್ರಶೇಖರ್ ಸಿ.ಹೆ ಚ್
Comments
Post a Comment