ಭಾವ ಗೀತೆ -9
🌹 ಹೃದಯದ ಅರಮನೆಗೆ ಬಾ ಗೆಳತಿ🌹
ನನ್ನ ಹೃದಯದ ಅರಮನೆಗೆ
ಬಲಗಾಲಿಟ್ಟು ಬಾ ಗೆಳತಿ
ಕೆಂಪು ರತ್ನಗಂಬಳಿ ಹಾಸಿ
ಬಾಗಿಲಲ್ಲಿ ಕಾದಿರುವೆ
ಮನದಿ ನೂರೆಂಟು ಆಸೆ
ಹೂಗನಸ ಭಾಷೆ
ನನ್ನ ಮನವ ತಾಕಿದೆ
ನಕ್ಕು ನಲಿಯು ಬಾ //ಪಲ್ಲವಿ//
ಮೋಡದ ಬಾನಿನಲ್ಲಿ
ಕನಸಿನ ಮನೆ ಕಟ್ಟಿ
ತಂಗಾಳಿಯಲ್ಲಿ ನೀ ತೇಲಿ
ಮನವ ಮುಟ್ಟು ಬಾ
ನನ್ನ ಅರಮನೆಗೆ
ನಕ್ಷತ್ರದ ಸಾಲು ಬೆಳಕು
ನೀಲಿ ಆಕಾಶದಿ
ನೀ ನಡೆದು ಬಾ
ನೂರು ಕವಿತೆಗಳ ಮಾಡಿ
ಕಾರ್ಮೋಡವಾಗಿದೆ ಮನವು
ಸಿಡಿಲು ಬಡಿದಂತೆ ಬಡಿದು
ಕವನದ ಮಳೆ ಸುರಿಸು ಬಾ
ಹಾಲು ಬೆಳದಿಂಗಳ ಚಂದ್ರನಂತೆ
ಅಕ್ಷರದ ಬಾಳು ಬೆಳಗು ಬಾ
ನನ್ನದೇಯ ಗೂಡಿನಲ್ಲಿ ಮುದ್ದಾದ
ಕಾವ್ಯವಾಗಿ ಹರಿದು ಬಾ
************ ರಚನೆ********
ಡಾ. ಚಂದ್ರಶೇಖರ್ ಸಿ.ಹೆ ಚ್
Comments
Post a Comment