ಭಾವ ಗೀತೆ -21
🌹 ಕಾಡುವ ನೋಟ🌹
ಮೋಹ ಎನ್ನಲೆ ದ್ರೋಹ ಎನ್ನಲೇ
ನಿನ್ನ ಕಾಡುವ ನೋಟಕ್ಕೆ
ಪ್ರಣಯ ಎನ್ನಲೇ ಪ್ರಳಯ ಎನ್ನಲೇ
ಪ್ರೀತಿ ವಯಸ್ಸಿನ ಸೆಳೆತಕೆ // ಪಲ್ಲವಿ//
ಓರೇಗಣ್ಣಲ್ಲಿ ಮೋಡಿ ಮಾಡಿದೆ
ರೆಪ್ಪೆ ಅಂಚಲಿ ಸಂಚು ಮಾಡಿದೆ
ಗೆಜ್ಜೆ ಸದ್ದಿಗೆ ಹೆಜ್ಜೆ ಕುಣಿದಿದೆ
ನಾಟ್ಯ ಬೇಡಿದೆ ಮನವು
ಮೌನದ ಕವಿತೆಯು ಗೀತೆಯಾಗಿದೆ
ಹಾಡು ಬಾರೆ ನನ್ನೊಡತಿ
ನಿನ್ನ ಪ್ರೀತಿಗೆ ಮೊಗದ ಭಾವಕೆ
ಸೆಳೆತ ಎನ್ನಲೇ ನನ್ನ ಅರಸಿ
ಬಿಂಕದ ನಡುಗೆ ತೋರಿ ಸಲುಗೆ
ಹೃದಯ ಕದ್ದೆ ಏಕೆ
ಪ್ರಣಯದ ಹೊಸಿಲಲಿ ಮನವ ಕಲಕಿ
ಒಲವಲಿ ತಣಿಸು ಬಾ ನನ್ನಾಕೆ
ಪ್ರಳಯದ ಸೆಳೆತವೋ ಪ್ರಣಯದ ಸೆಳೆತವೊ
ಅಮಲು ತಂದಿದೆ ನನಗೆ
ನಿನ್ನ ಬಲೆಯಲ್ಲಿ ಬಿದ್ದ ನನಗೆ
ಭಾವಗೀತೆಯ ಹೂ ನಗೆ
********ರಚನೆ *******
ಡಾ.ಚಂದ್ರಶೇಖರ್ ಸಿ.ಹೆ ಚ್
Comments
Post a Comment