ಭಾವ ಗೀತೆ -2
🌹 ಅಮ್ಮ ನಿನ್ನ ಪಡೆದ 🌹
ಅಮ್ಮ ನಿನ್ನ ಪಡೆದ
ನಾವುಗಳೇ ಧನ್ಯರು
ತುತ್ತು ಕೊಟ್ಟು ಸಾಕಿದ
ನೀನು ತಾನೇ ದೇವರು. //ಪ//
ನೀನೆ ಮೊದಲ ಪಾಠಶಾಲೆ
ನೀನು ತಾನೆ ಅಕ್ಷರ
ಕೈಯ ನಾನು ಮುಗಿಯಲೇಗೆ
ಗುಡಿ ಗೋಪುರ ಮಂದಿರ
ಬಾಳ ದಾರಿ ತೋರಿ ಸಾಗಿದೆ
ನೋವ ಬವಣೆ ಸವೆಸಿ
ಹೃದಯ ಇಂದು ಮಿಡಿದಿದೆ
ನಿನ್ನ ಪ್ರೀತಿ ನೆನೆಸಿ
ದುಃಖಕ್ಕೆ ಕಣ್ಣೀರು ನೀನು
ನಗುವ ಮೊಗವೆ ಚೆಂದ
ಹೇಗೆ ವರ್ಣಿಸಲಿ ನಾನು
ನಿನ್ನ ಪ್ರೀತಿ ಬಂದಾ
ಕವಿತೆಯೆಂದು ಸಾಲದು
ಬಣ್ಣಿಸಲು ನಿನ್ನ
ಕೋಟಿ ಪದವ ಹುಡುಕಿದಲ್ಲಿ
ಅಮ್ಮ ಪದವೆ ಚೆನ್ನಾ
**********ರಚನೆ********
ಡಾ. ಚಂದ್ರಶೇಖರ್ ಸಿ.ಹೆ ಚ್
Comments
Post a Comment