Posts

Showing posts from September, 2022

ಓಡು ಗೆಳೆಯ ಓಡು& ಓಡು ಗೆಳತಿ ಓಡು

Image
  ಓಡು ಗೆಳೆಯ ಓಡು ನೋಡು ಗೆಳತಿ ನೋಡು  ಕಾಲ ಒಡುತಿದೆ ಕನಸ್ಸು ಅರಳುತಿದೆ ಮನಸ್ಸು ಕೇರಳುತಿದೆ ಭಾವನೆ ಮಿಡಿಯುತಿದೆ ನೆನಪು ಕಾಡುತಿದೆ ವಯಸ್ಸು ಉರುಳುತಿದೆ ಜೀವನ ಸಾಗುತಿದೆ ಆಸೆ ನೂರೆಂಟಿದೆ ಭಾಷೆ ಬಾಡಿದೆ ಬದುಕು ಸವೆಯುತಿದೆ ಕಷ್ಟ ಕರಗುತಿದೆ ನಷ್ಟ ಮರುಗುತಿದೆ ಇಷ್ಟ ಇಂಡುತಿದೆ ಮಾತು ಮುತ್ತಾಗಿದೆ ಪ್ರೀತಿ ಮತ್ತಾಗಿದೆ ಸುಖ ಕರೆಯುತಿದೆ ದುಃಖ ದೂರವಾಗಿದೆ ಚಿಂತೆ ಮರೆಯಾಗಿದೆ  ಓಡು ಗೆಳೆಯ ಓಡು ಜೀವನ ಜಿಕುವ ವರೆಗೆ ಓಡು ಭರವಸೆಯೇ ಬದುಕು ಚಿಂತೆ ಬಿಟ್ಟು ಬದುಕ ಬಂಡಿ ನೂಕು ಮದ್ಯೆ ಅನ್ಸಿದ್ರೆ ಇನ್ನು ಬೇಕು ಬೇಜಾರಾದ್ರೆ ಒಂದೂ ಕ್ವಾಟ್ರು ಹಾಕು ಓಡು ಗೆಳಯ ಓಡು ಅನ್ಸೋವರೆಗೂ ಸಾಕು ಹಾಗದಿದ್ದರೆ ಒಮ್ಮೆ ದೇವರ ಬೇಡು ಬೇಡುತ ಒಮ್ಮೆ ಹರಿ ನಾಮ ಹಾಡು  ಕಾಪಾಡುವನು ದೇವರು ನೋಡು *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

Bon Voyoge ಶುಭ ಪ್ರಯಾಣ

Image
  ಮರೆಯದ ನೆನಪು ನೂರು ಬಿಟ್ಟೋಗಲು ಬಲು ಬೇಜಾರು ಸ್ನಾತಕೋತ್ತರ ಕೇಂದ್ರದ ಸೂರು ಗೆಳಯರಿಲ್ಲದೆ ಇರುವುದು ಯಾಕೊ ಬಲು ಬೋರು ಕಳೆದ್ವಿ ನಾವು ಎರಡು ವರ್ಷ  ಒಂದೂ ವರ್ಷ ಕೊರೋನ  ಎಂಬ ಕರೀನಾ ನೋಡಿದ ಹಾಗೆ ಮತ್ತೊಂದು ವರ್ಷ ಲ್ಯಾಬ್ ಇಲ್ಲದೆ ಕತ್ರಿನಾ ನೋಡಿದ ಹಾಗೆ ಮೊನ್ನೆ ಸೇರಿದ ಹಾಗಿದೆ ನಾವು ಕಳೆಯುವ ಸಮಯದ ಕಾವು ಎಲ್ಲರಿಗೂ ತರಿಸಿದೆ ನೋವು ಮನಸ್ಸೇ ಬರ್ತಾ ಇಲ್ಲ ಬಿಡಲು ತಿಂದ್ರುನು ಬೆಲ್ಲ ಇಲ್ಲದ ಬೇವು  ಬಿಟ್ಟೋಗೋ ಸಮಯದಿ ಮುಂದಿನ ಭವಿಷ್ಯದ ಚಿಂತೆ ಉದ್ಯೋಗ ಸಿಗೋದು   ಕಷ್ಟ ಎಂಬ ಅಂತೇ ಕಂತೆ ಮನದ ತಲ್ಲಣ್ಣ ನೊರೆಂಟು ಅಂತೇ ಸಮಾಧಾನವಾಗಿರು ಉಟ್ಟಿಸಿದ ದೇವರು ಎಲ್ಲರಿಗೂ ಉಲ್ಲು ಮೈಸೂ ತಾನೇ ಮರೆತು ಚಿಂತೆ  ಬೈಕೊಂಡ್ವಿ ನಾವು ಟೀಚರಗಳನ್ನ ನೆನುಸ್ಕೊಂಡ್ರೆ ಬೇಜಾರು ಫ್ಯೂಚರನ್ನ ಸ್ಪೋರ್ಟ್ಸ್ ಹಾಡಿ ಮಜಾ ಮಾಡಿ ಕಳ್ದ್ವಿ ದಿನಗಳನ್ನ ಟೀಚರ್ ಕಂಡ್ರೆ ಬೇಜಾರು  ಆದ್ರೂನು ಅನ್ಸುತ್ತೆ ಒಮ್ಮೊಮ್ಮೆ  ನಮ್ಮ ಟೀಚರ್ ಸೂಪರ್  ಕುಣಿದು ಕುಪ್ಪಳಿಸಿ ಹಾಕು ಸ್ಟೇಪ್ಪು Gc pc ಹುಡುಗಳು ಮಾಡಲ್ಲ ತಪ್ಪು ನೋಡೋಕೆ ನಾವು ಒಂತರ ರಪ್ಪು ಮುಂದಿನ ವರ್ಷ RCB ದೆ ಕಪ್ಪು  ಬಿಟ್ಟೋಗೋ ಖುಷಿಲಿ ಬರೆಯೋಣ ಎಕ್ಸಾಮ್ ನೆನಪುಗಳು ಸವಿ ಒಂತರ ಮನ್ಸೂನ್ ಜ್ಞಾಪಸೊಕೊ ಒಮ್ಮೆ     ಯಾರಿಗದ್ರೋ ಕೊಟ್ಟಿರೋ ದಿಲ್ಲನು ಪ್ರೀತಿ ಒಂತರ   ಗುಲಾಬ ಜಾಮೂನ್  ಪ್ರೀತಿ ಫೈಲ್ ಆದ್ರೆ ಒಡೆದು ಹೋದ ಹಾ...

ಪ್ರೀತಿ ಮಾಡ ಹೋದೆ

Image
ಪ್ರೀತಿ ಮಾಡ ಹೋದೆ ತರುಣಿಯೊಡನೆ ಬಂದೆ ತರುಣಿ ಸೇರ ಹೋಗಿ ಒಲವ ಮಳೆಯಲ್ಲಿ ನೆನೆದೆ ಮಳೆಯ ಹಿಡಿಯ ಹೋದೆ ನಗುವ ನದಿಯಂತೆ ಹರಿದೆ ಕಣ್ಣ ನೋಟಕೆ ಕಾದು ಸೆಳೆವ ಹುಡುಗಿಯೊಡನೆ ಬಂದೆ ತಿರುಗಿ ನೋಡಲು ಇವಳು ಕಾಣೆಯಾದಳು ಪ್ರೀತಿ ಮಾಡ ಹೋದೆ ತರುಣಿಯೊಡನೆ ಬಂದೆ ನಕ್ಕರೆ ನಾಚಿ ಮುತ್ತು ತರುವ ಕಲೆತರೆ ಮನಸ್ಸು ಕೊಟ್ಟು ಬಿಡುವ ಪ್ರೇಮ ಸಂಚಿಕೆ ರಾಗ ಮಾಲಿಕೆ ತಿರುಗಿ ನೋಡಲು ಇವಳು ಕಾಣೆಯಾದಳು ಪ್ರೀತಿ ಮಾಡ ಹೋದೆ ತರುಣಿಯೊಡನೆ ಬಂದೆ ಅರಿತರೆ ಚೆಂದದಿ ನಗುವೇ ಬೇರೆತರೆ ನನ್ನನ್ನು ಕಾಡುವ ಒಲವೇ ಸೌಂದರ್ಯ ಕನ್ನಿಕೆ ಕವಿಯ ಬೇಡಿಕೆ ತಿರುಗಿ ನೋಡಲು ಇವಳು ಕಾಣೆಯಾದಳು ಪ್ರೀತಿ ಮಾಡ ಹೋದೆ ತರುಣಿಯೊಡನೆ ಬಂದೆ ಕಣ್ಣ ನೋಟಕೆ ಕಾದು ಸೆಳೆವ ಹುಡುಗಿಯೊಡನೆ ಬಂದೆ ತಿರುಗಿ ನೋಡಲು ಇವಳು ಕಾಣೆಯಾದಳು *********ರಚನೆ********** ಡಾ. ಚಂದ್ರಶೇಖರ. ಸಿ. ಹೆಚ್

ಗೆಳತಿ ನೀ ನಗಬೇಕು

Image
ನಗಬೇಕು ಗೆಳೆತಿ ನೀ ನಗಬೇಕು ನನ್ನೆದೆಯ ತೋಟದಲ್ಲಿ ಮಲ್ಲಿಗೆಯ ಗಿಡವಾಗಿ ಮೋಗ್ಗೊಂದು ಅರಳಿದಂತೆ ನೀ ನಗಬೇಕು ನಗಬೇಕು ಗೆಳೆತಿ ನೀ ನಗಬೇಕು ಕನಸ್ಸುಗಳು ಮುದುಡಿದರು  ಮನಸ್ಸುಗಳು ಕದಡಿದರು  ಹರಿವ ಜರಿಯಂತೆ ನೀ ನಗಬೇಕು ನಗಬೇಕು ಗೆಳೆತಿ ನೀ ನಗಬೇಕು ದೇಹಕೆ ಅವರಿಸಿದ ಮುಪ್ಪು ಮುಖದ ತುಂಬಾ ಸುಕ್ಕು ಕಾಂತಿಹೀನ ಕಣ್ಗಳು ಬಿರುಕಿನ ಕೆಂಪು ತುಟಿ ಬಿಟ್ಟು  ಹೊಳೆವ ಹಲ್ಲಿನಂತೆ ನೀ ನಗಬೇಕು ನಗಬೇಕು ಗೆಳೆತಿ ನೀ ನಗಬೇಕು ಇರುಳ ಕತ್ತಲೆಯಲಿ ಆಕಾಶದ ಊರಿನಲ್ಲಿ ನಕ್ಷತ್ರಗಳ ಮನೆಯಲಿ ಚಂದ್ರ ನಕ್ಕಂತೆ ನೀ ನಗಬೇಕು ನಗಬೇಕು ಗೆಳೆತಿ ನೀ ನಗಬೇಕು ಇರುಳ ಕತ್ತಲೆ ಮನೆಯಲಿ ಮನಸ್ಸುಗಳು ಕುಣಿವ ಖುಷಿಲಿ  ಬೆಳಕು ಹುಡುಕುವ ಬರದಿ ಊರಿವ ದೀಪದ ಹಣತೆಯಂತೆ ನೀ ನಗಬೇಕು ನಗಬೇಕು ಗೆಳೆತಿ ನೀ ನಗಬೇಕು ಭೂತಾಯಿಯ ಮಡಿಲಲ್ಲಿ ನದಿಗಳ ಒಡಲಲ್ಲಿ ಹಸಿರು ಕಾಣುವ ರೀತಿ ನೀ ನಗಬೇಕು ನಗಬೇಕು ಗೆಳೆತಿ ನೀ ನಗಬೇಕು ನಮ್ಮೂರ ಜಾತ್ರೆಯಲಿ ಬಸವಣ್ಣನಾ ಬೀದಿಯಲ್ಲಿ ದೇವರ ಗುಡಿಗೆ ಎಳೆದ ಸೀರಿಯಲ್ ಸೆಟ್ ಬೆಳಕಂತೆ ನೀ ನಗಬೇಕು ನಗಬೇಕು ಗೆಳತಿ ನೀ ನಗಬೇಕು ಹಸಿರು ಮೈಯ್ದು ಆಕಳು ಕರುವನ್ನು ಇಯ್ದು ಕರು ಕುಡಿವ ಬಿಳಿ ಕೆನೆ ಹಾಲಂತೆ ನೀ ನಗಬೇಕು ನಗಬೇಕು ಗೆಳತಿ ನೀ ನಗಬೇಕು ಮನವು ನೋವಿಂದ ಬೆಂದು ದುಃಖವ ಹೊತ್ತು ತಂದರು  ಹೊಳೆವ ಕಣ್ಣೀರ ಹನಿಯಂತೆ ನೀ ನಗಬೇಕು  ********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ನೆಮ್ಮದಿ ಹುಡುಕಿ

Image
ಬದುಕಿನ ಜಂಜಾಟಾದಲ್ಲಿ ಎತ್ತಾ ಸಾಗಿಹೇವು ನಾವು ಸುತ್ತಲೂ ಮಾನವರ ನೆರಳು ಕಾಣುವೆವು ಎಲ್ಲರಲು ಒಂದೇ ಹಣ ಗಳಿಸುವ ಗುರಿಯು ಮರೆತು ಬದುಕು ಬೇಕು ಇಲ್ಲಿ ಮಕ್ಕಳು ಮರಿಯು ನಿತ್ಯವೂ ಸಾಗುತಿದೆ ಎಳು ಬೀಳಿನ ಜೀವನ ನೆಮ್ಮದಿಯ ಹುಡುಕುತಿರು ಜನ ಕಣ್ಣು ಬಿಟ್ಟು ಎದ್ದು ಕೆಲಸಕೆ ಹೋಗುವ ಗೋಜು ಶನಿವಾರ ಬಂದರೆ ವಾರದ ಕೊನೆ ಮೋಜು ಹೊರಟಿಹರು ಹುಡುಕುತ ನೆಮ್ಮದಿ ಅರಸಿ ಬದುಕನು ಸವೆಸಿ  ಮಕ್ಕಳು ಶಾಲೆಗೆ ಅಪ್ಪ ಅಮ್ಮನು ಕೆಲಸಕೆ ಸಂಜೆ ಕವಿದ ಮೇಲೆ ಮಂಜು ಮುತ್ತಿದ ಹಾಗೆ ಎಲ್ಲರೂ ಉಂಡು ತಿಂದು ಮಲಗಿ ಕಾಯುತಿಹರು ಇಲ್ಲಿ  ಮುಂಜಾನೆ  ಸೂರ್ಯನ ಕಿರಣ ನಗುವ ಹುಡುಕಲು ಇಲ್ಲಿ ದುಡ್ಡು ಕೊಡಬೇಕಂತೆ ಅಪ್ಪ ಅಮ್ಮನಿಗೆ ವೃದ್ಧರ ಕೇಂದ್ರವಂತೆ ಅನಾಥ ಮಕ್ಕಳಿಗೂ ಆಶ್ರಮವಂತೆ ಮರೆತು ಬಾಳಬೇಕು ನೂರೆಂಟು ಚಿಂತೆ ನನ್ನವರು ಯಾರಿಲ್ಲ ಅಕ್ಕರೆಯ ತವರಿಲ್ಲ ಆಸೆಗಳಿಗೆ ರೆಕ್ಕೆ ಪುಕ್ಕ ಬಂದಿದ್ದೇಯೆಲ್ಲಾ ಕನಸುಗಳು ನನಸು ಮಾಡಲು  ದಿನವೂ ದುಡಿಯುವರು ಎಲ್ಲಾ ವೇಗದಲಿ ಹೊಡುತಿಹಾ ಜೀವನ ಮೆಟ್ರೋ ರೈಲಿನತೆಲ್ಲಾ ಸಾಕು ಎಂದರೆ ಬಿಡಲು ಹಾಗುವುದಿಲ್ಲ ಚಿಂತೆಗಳ ಸಂತೆಯಲಿ ನೆಮ್ಮದಿ ಅರಸುತ ಬದುಕು ದೂಡ ಬೇಕು ಮೂಕರಾಗಿ ವಾಹನದ ದಟ್ಟನಿಯ ಜಗದ ಒಳಗೆ ಜಾಗೂರುಕರಾಗಿ ಮಳೆ ಬಂದಾಗ ರಸ್ತೆಗಳು ಹಾಗಿಹವು ಗುಂಡಿಗೋಟರು ನಾನಿರುವ ಬೀದಿ ತುಂಬಾ ನೀರಿನ ತೊಡರು  ಮುಳುಗಿ ಹೇಳುಬೇಕು ಇಲ್ಲಿ ನೀರನು ಮೊಗೆದು  ಕಟ್ಟೀಹರು ಮನೆಯ ಇಲ್ಲಿ ಮಣ್ಣ ಬಗೆದು ಬೇಕು ಸಾಕುಗಳ ಬದಿಗಿಟ್ಟು...

ಜಾಲಿ ಮರ

Image
ಬರಡು ಭೂಮಿಯಲಿ ಹಸಿರು  ಅಂಬರ ನೀನು ನನ್ನ ಹೊಲವ ಕಾಯುವ ತಂತಿ  ಬೇಲಿಯೇ ನೀನು ಮೈತುಂಬಾ ಮುಳ್ಳು ಹೊದ್ದು  ನಗುತಿರುವ ನಲ್ಲೆ ನೀನು ಊರು ತುಂಬಾ ಸಾವಿರ  ಮರಗಳಲಿ ಗಟ್ಟಿಗಿತ್ತಿ ನೀನು ನನ್ನೆದಯ ಆಳದಲ್ಲಿ ಮುಳ್ಳು  ಚುಚ್ಚಿ ಸಕ್ಕರೆಯ ಕಾಯಿಲೆಗೆ ಓಷಧಿಗೆ ಗುರಿಯಾದೆ ನೀನು ಆಗ್ಗದ ಮರಗಳು ನೂರು  ಕೂಗ್ಗದ ಮರ ನೀನು ಜಗ್ಗಲು ಮುಳ್ಳಿನಿಂದ  ಮುತ್ತಿಕುವವಳು ನೀನು ಬೀಟೆ, ಸಾಗೂನಿ ಮರಕೆ ಸಡ್ದು  ಒಡೆದು ಮಂಚವಾದೆ ಕವಿ ಬರೆಯೋ ಕವನದ  ಪದಗಳಲಿ ಕುಂಚವಾದೆ ಬೆಂದು ಬೆಯ್ದು ಬೆಂಕಿಯಲಿ ಕೆಂಡದ ಕಪ್ಪು ಇದ್ದಿಲಾದೆ ಭಾವನೆಗಳ ಇಲ್ಲದ ಬದುಕಿಗೆ  ನೀ ಕುಕ್ಕಿ ಅಳುವಾದೆ ಯಾರು ಬೆಳೆಯದ ಬರಡಲಿ  ಸಾಮ್ರಾಜ್ಯ ನಿನದೆ ಇತಿಹಾಸ ಸೃಷ್ಟಿಸುವ ರಾಜನಂತೆ ಮೈಯೆಲ್ಲಾ ಮುಳ್ಳ ಕವಚವಾದೆ ನೀರು ಕಾಣದ  ನೆಲದಲ್ಲಿ  ಬೆಂಕಿಗೆ ಕಾಡಗಿಚ್ಚು ನೀನಾದೆ ಶ್ರೀಗಂಧದ ಸುಗಂಧದ  ಕಂಪಿನಲಿ ನೀನು ಮರೆಯಾದೆ ಕಾಣದೆ ಕಾಲಿಗೆ ನೀ ಕಚ್ಚಿ  ಕಂಬನಿಯಲಿ ಕಣ್ಣ ನೀರ ಹನಿಯಾದೆ ಮನುಷ್ಯನ ಕಾಲುತುಳೀತಕೆ ಸಿಗದೇ ಬಂಡಾಯದ ಜಾಲಿ ಮರವಾದೆ  ************ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಕೂಲಿ ನಾನು

Image
ಆಸೆಗಳಾ ಮೂಟೆ ಕಟ್ಟಿ ಕನಸ್ಸುಗಳ ಮರವ ಸುಟ್ಟಿ ಜೀವನವೆಂಬ ಕೆಂಡದಿ  ಒಪ್ಪೋತಿನ ಊಟಕೆ ದುಡಿವ ಕೂಲಿ ನಾನು ಎದ್ದರೆ ತಣ್ಣೀರು ಸ್ನಾನ ಅಲ್ಪ ಸ್ವಲ್ಪ ತಿಂಡಿ ಪಾನ ಬೆವರು ಹರಿಸಿ ರಕ್ತ ಸವೆಸಿ ಮಾಲೀಗಾಗಿ ದುಡಿವ ಕೂಲಿ ನಾನು ಬೇವರ ಹನಿಯೇ ಮಳೆಯೂ ಹರಿವ ರಕ್ತದ ಬಿಸಿಯು ಹರಿದ ಅರುಕು ಅಂಗಿ ತೊಟ್ಟು ಮುರುಕು ಲುಂಗಿ ಸೂಟು ಬೂಟಿನ ಕೆಳಗೆ ಕೂಲಿ ನಾನು ಸಂಸಾರ ಸಾಕಲು ಬೇಕು ಅನ್ನ ದಿನವೂ ಬಿಸಿಲಿನ  ಗುನ್ನ  ರಾತ್ರಿಯಲಿ ಒಂಚೂರು ಪಾನ ಮನೆಮಂದಿಗೆ ಉಸಿರೇ ಮಾನ  ಸ್ವಲ್ಪ ಹಿಟ್ಟಿಗಾಗಿ ಬರುವ ಕೂಲಿ ನಾನು ಯಾರು ಬಂದರೆ ಏನು ಯಾರು ಹೋದರೆ ಏನು ಬಣ್ಣ ಮಾಸುವಾ ಜಗದಿ ಬಣ್ಣ ಹಚ್ಚಿ ಕುಣಿವ ಜನದಿ ಬದುಕಿಗಾಗಿ ದುಡಿವ ಕೂಲಿ ನಾನು *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ನಾ ನೆಟ್ಟ ಗಿಡ

Image
ನಾ ಮುರಿದ ಗಿಡವೊಂದು ನಗುತಾ ಸತ್ತಿತು ನನ್ನೆದೆಯ ಆಳದಲ್ಲಿ ನೋವು ಅಳುತಾ ಕೂಗಿತ್ತು ಎರಡು ವರ್ಷ ಸಾಕಿ ಸಲುವಿದ ಮಗುವು ಬಿಟ್ಟಂತೆ ನನ್ನ ಬಿಟ್ಟು ಮಣ್ಣಲ್ಲಿ ಬೇರುಗಳು ಹೂತಿಟ್ಟು ಮತ್ತೆ ಚಿಗುರದೆ ಮಸಣ ಸೇರಿತು ಮನವೆಕೋ ಇಂದು ಕಂಬನಿ ಮಿಡಿಯಿತು ಸಾಕಲು ನಿನ್ನ ನೀರು ಬಿಟ್ಟಿದೆ ಗೊಬ್ಬರ ಹಾಕಿ ನಾನು ಸಲುವಿದ್ದೆ  ನೀ ಬೆಳೆಯಲು ನಾ ನಿಗಾ ಇಟ್ಟಿದೆ ದಿನವೂ ಸಾಯುವವು ಸಾವಿರ ಗಿಡಗಳು ಯಾವತ್ತೂ ದುಃಖ ದುಮ್ಮಿಕ್ಕಿರಲಿಲ್ಲ ಕಣ್ಣೆದುರೇ ನಿನ್ನ ಮೇಲೆ ನನ್ನ ಟ್ರ್ಯಾಕ್ಟರ್ ಅತ್ತಿತಲ್ಲ ಕಾಣದ ನೋವೊಂದು ಮನವ ಕಾಡಿತಲ್ಲ ಯೋಚಿಸಲು ನಾ ಅರಿತೆ ನೀನು ನನ್ನ ಹಣ ಬಿಟ್ಟೋದೇ ನನ್ನ ಒಲವ ಹಣವಿಲ್ಲದ ಹೆಣ ಹಣವಿಲ್ಲದೆ ಇದ್ದರೆ ನೋವು ಹಾಗುತ್ತಿರಲಿಲ್ಲವೇನೋ ಯಾಕೆಂದರೆ ದಿನವೂ ಸಾಯುವವು ನೂರಾರು ಗಿಡಗಳು ಮರ ಹಾಗುವ ಒಳಗೆ ನಿನ್ನ ಕಣ್ಣೀರಿಗೆ ನಾ ಹೇಗೆ ಬೆಲೆ ಕಟ್ಟಲಿ ಇದ್ದರೆ ನೀ ಕೊಡುತ್ತಿದೆ  ಜೀವದ ಬೆಲೆ ಇಲ್ಲಿ  ನೋವಿನಲ್ಲಿ ಹೇಳುವೆನು ನಿನಗೆ ವಿಧಾಯ ಸಸಿ ಬೇರೆ ನೆಟ್ಟು ಮತ್ತೆ ಹಾಡುವೆನು ನಿನಗೆ ಮುಕ್ತಾಯ ನೋವು ಒಂದು ಹಾಗೆ ಹೇಳಿದೆ ನಿನ್ನಿಲ್ಲದೆ ಇಲ್ಲ ಆಧಾಯ ಕಾಪಾಡು ಓ ದೇವರೇ ಈ ಬಡಪಾಯ  *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ನೋವು

Image
ಕಾಲಲ್ಲಿ ಚುಚ್ಚಿದ ಮುಳ್ಳು ಕಣ್ಣೀರು ತರುತಿಲ್ಲ ಕಂದ ನಿನ್ನ ಕೈ ಮುರಿದ ನೋವಲ್ಲಿ ನಿನ್ನ ತೆಗೆದ ಮುಳ್ಳು ನನ್ನ ಮನದ ಅಳುವನು ನುಂಗಿತ್ತಲ್ಲ ಕಂದ ಬಡತನವು ನಮ್ಮನ್ನು ಸುಟ್ಟು ಬಿಟ್ಟಿದೆ ಬಗಲ್ಲಲ್ಲಿ ಮಗುವೊಂದು ನಾ ಬಾಚಿ ತಬ್ಬಿದೆ ತಲೆ ಮೇಲೆ ನೀರಿನ ಬಿಂದಿಗೆ ಹೊತ್ತಿದೆ ನೆತ್ತಿಯ ಸೂರ್ಯ ಸುಡುತಿಹನು ಬಡತನವ ಕೊಟ್ಟ ದೇವರು ನಗುತಿಹನು ಕಣ್ಣೀರು ಬಾರದ ಕಣ್ಗಳು ನಿನ್ನ ನೋಡಿವೆ ನಿನ್ನಯ ನೋವಿಗೆ ನೊಂದು ಹೇಳಿವೆ ಆನಂದಬಾಷ್ಪ ಮನದುಂಬಿ ಹಾಡಿವೆ ನನ್ನೆದೆಯ ಮಡಿಲಲ್ಲಿ ಹೊತ್ತು ಹೆತ್ತ ಮನಸ್ಸು ಓ ಮಗುವೇ ಸಾಕು ಮೇಲೇಳು ಮುಂದೆ ಹೆಜ್ಜೆ ಹಾಕುವೆ ಕೂಗಿ ಹೇಳಿದೆ ********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್ ********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಪ್ರೀತಿಯು ಬೇಡ

Image
ಪ್ರೀತಿಯು ಬೇಡ ಪ್ರಣಯವು ಬೇಡ ವಿರಹ ಏಕೆನೆಗೆ ಸುಖವು ಬೇಡ ದುಃಖವು ಬೇಡ ಸವಿ ಬದುಕು ಬೇಕೆನೆಗೆ ಸೌಂದರ್ಯ ನಂಬಿ ಸೋಲುವ ದುಂಬಿ ಮೋಸ ಹೋಗಬೇಡ ನೀನು ಕಣ್ಣಿನ ನೋಟಕೆ ಪ್ರೀತಿಯು ಬೇಡ ಪ್ರಣಯವು ಬೇಡ ವಿರಹ ಏಕೆನೆಗೆ ತನನನಾ  ತನನನಾ  ತನನನಾ ಪ್ರೀತಿಯ ಈ ಸಾರ ತಿಳಿವುದು ಬಲು ಘೋರ ಮನಸ್ಸು ಏಕೊ ಒಲವ ಚೋರ ಈ ಕನಸ್ಸುಗಳ ಕಥೆ ಸಾಕೆನೆಗೆ ನೆನಪುಗಳ ಮಾತೇಕೆ ಕನಸ್ಸುಗಳ ಕಥೆ ಸಾಕೆ ನನ್ನ ಹಿಂಡಿ ನಾ ನಲುಗುವುದೇಕೆ ಮನ ಮಿಡಿವ ಹೃದಯದ ವ್ಯಥೆ ಸಾಕೆ ಪ್ರೀತಿಯ ಚೆಲ್ಲಿದರು ಜೀವನ ಕಥೆಯಾದರೂ ಸತ್ಯದ ಕೆಂಡದ ಮೇಲೆ ಕುಳಿತಿಹೇನಾ ಪ್ರೀತಿಯು ಬೇಡ ಪ್ರಣಯವು ಬೇಡ ವಿರಹ ಏಕೆನೆಗೆ ನೋವಿನ ಬಾಣಗಳು ಗಾಜಿನ ಕನ್ನಡಿಯಲಿ ಸತ್ಯವಾ ಸಾರುವುದಿಲ್ಲ ನೆನಪುಗಳು ಕಥೆಯು ಮನದಈಟಿ ಮೋಡದ ಮುಗಿಲುಗಳು ನಿಂತಲ್ಲಿ ನಿಲ್ಲುವುದಿಲ್ಲ ಗಾಳಿಗೆ ಓಡಿದೆ ನೋವಲಿ ಹಾರಿ ಜೀವನಾ ಸಾಗುವುದು ಕನಸ್ಸುಗಳ ಬೇಲಿಯಲಿ ನೆನಪುಗಳ ಮೇಲೆ ಈ ಪಯಣ ಪ್ರೀತಿಯು ಬೇಡ ಪ್ರಣಯವು ಬೇಡ ವಿರಹ ಏಕೆನೆಗೆ ಸುಖವು ಬೇಡ ದುಃಖವು ಬೇಡ ಸವಿ ಬದುಕು ಬೇಕೆನೆಗೆ ಸೌಂದರ್ಯ ನಂಬಿ ಸೋಲುವ ದುಂಬಿ ಮೋಸ ಹೋಗಬೇಡ ನೀನು ಕಣ್ಣಿನ ನೋಟಕೆ ಪ್ರೀತಿಯು ಬೇಡ ಪ್ರಣಯವು ಬೇಡ ವಿರಹ ಏಕೆನೆಗೆ ತನನನಾ  ತನನನಾ  ತನನನಾ *********ರಚನೆ ******** ಡಾ  ಚಂದ್ರಶೇಖರ. ಸಿ. ಹೆಚ್

ಮತ್ತಿನಂಥ ಮತ್ತೂ

Image
ನಲ್ಲ ನನ್ನಾಣೆ ಆಸೆ ಬಂತು ನಿನ್ನ ಮೇಲಾಣೆ ಪ್ರೀತಿ ತಂತು ಕರೆಯದೇನೆ ಬಳಿ ಬಂದೆ ನೋಡು ತರುಣ ತರುಣಾ ತರುಣಾ ನನ್ನಾಣೆ ನಾ ಇರೇನಾ  ಕಿಸ್ ಯು ಕಿಸ್ ಯು ಕಿಸ್ ಯು ನಲ್ಲ ನನ್ನಾಣೆ ಆಸೆ ಬಂತು ನಿನ್ನ ಮೇಲಾಣೆ ಪ್ರೀತಿ ತಂತು ಕರೆಯದೇನೆ ಬಳಿ ಬಂದೆ ನೋಡು ಪ್ರೀತಿ ಜೇನಿನ ಸಿಹಿ ಮತ್ತು  ರೂಪ ನಿನ್ನಯ ಸ್ವತ್ತು ನನ್ನ ಸೌಂದರ್ಯದ ದೇಹದಲ್ಲಿದೆ ಅದನಾ ಒಮ್ಮೆ ಸವಿಯೋ ನೀನು ಕಾಡಿಗೆ ಕಾಡುವ ಮತ್ತು ಕೆನ್ನೆ ಆದರದ ಮತ್ತು ತುಟಿಯ ಮೇಲು ಪಿಂಕ್ ಮತ್ತಿದೆ ಅದನಾ ಒಮ್ಮೆ ಸವಿಯೋ ನೀನು ಸವಿಯೋ ನೀನು ಈ ಮತ್ತಿನಲ್ಲಿ ತೇಲಿ ನೀ ತಬ್ಬಿಕೊಂಡ ಮೇಲೆ ನಾನಾದೆ ನಿನ್ನ ಬೆಳದಿಂಗಳ ಬಾಲೆ ಲಾಲಾ ಲಾಲಾ ಲಾಲ  ನಲ್ಲ ನನ್ನಾಣೆ ಆಸೆ ಬಂತು ನಿನ್ನ ಮೇಲಾಣೆ ಪ್ರೀತಿ ತಂತು ಕರೆಯದೇನೆ ಬಳಿ ಬಂದೆ ನೋಡು ಬಾರೋ ನನ್ನ ಸಾಹುಕಾರ ಬಾರೋ ನನ್ನ ಸರದಾರ ಹಾಕು ನನಗೆ ಮುತ್ತಿನ ಹಾರ ಕಾಣಿಸು, ಪ್ರೇಮಿಸು, ಮೋಹಿಸು ನನ್ನ ನೀನು ನನ್ನ ಮೋಹದ ಗಂಡು ನಾನು ನಿನ್ನ ಪ್ರೀತಿಯ ಚೆಂಡು ನಾ ಮೂಕಳಾದೆ ನಿನ್ನ ಕಂಡು ಮೆರೆಸು. ಕುಣಿಸು, ಬಳಸು ನನ್ನ ಈ ಮತ್ತಿನಲ್ಲಿ ತೇಲಿ ನೀ ತಬ್ಬಿಕೊಂಡ ಮೇಲೆ ನಾನಾದೆ ನಿನ್ನ ಬೆಳದಿಂಗಳ ಬಾಲೆ ಲಾಲಾ ಲಾಲಾ ಲಾಲ ನಲ್ಲ ನನ್ನಾಣೆ ಆಸೆ ಬಂತು ನಿನ್ನ ಮೇಲಾಣೆ ಪ್ರೀತಿ ತಂತು ಹಾ ಹಾ ಹಾ  ಕರೆಯದೇನೆ ಬಳಿ ಬಂದೆ ನೋಡು ತರುಣ ತರುಣಾ ತರುಣಾ ನನ್ನಾಣೆ ನಾ ಇರೇನಾ ಕಿಸ್ ಯು ಕಿಸ್ ಯು ಕಿಸ್ ಯು ***********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಬಾಡಿದ ಹೂವು

Image
ನನ್ನೆದೆಯ ಬಾಂಧಳದಿ ಚಿಗುರಿದ ಗಿಡದಿ ನಕ್ಕ ಮೊಗ್ಗು ನೀನು ಅರಳುವ ಒಳಗೆ ಮುದುಡಿದೆ ಕಟ್ಟಿದ ಕನಸುಗಳು ಕರಗಿದೆ ಭಾವನೆಗಳ ಬಳ್ಳಿಯಲಿ ಬಳುಕುವ ಬಣ್ಣ ಸೋರಗಿದೆ ಯಾರ ಕಣ್ಣು ನಿನ್ನ ಸೋಕಿತು ಮೂಡಿಯುವಾಸೆ ಮನದಿ ಮೂಡಿತೋ ದುಂಬಿಯೊಂದು ನಿನ್ನ ಹುಡುಕಿತೋ ಅರಿಯದಾದೆ ನಿನ್ನ ನೆನಪಲಿ ನಾನು ಮನದಿ ಮನೆ ಮಾಡಿ ನಿನ್ನ ತಂದಿಡುವಾಸೆ ನನಗೆ ನೂರೆಂಟು ತುಮುಲ ಒಳಗೊಳಗೇ ಏಕೆ ಬಾಡಿದೆ ನೀನು  ನಿನ್ನ ಕೈಡಿದ ನನ್ನ ಕೈಯಲ್ಲಿ ಕೆಂಪು ಕಾರಂಜಿ ತಿಂದಗಾಯಿತು ನಿನ್ನ ನೋಡಿ ಗುಳಗಂಜಿ ನೋವು ಮನವ ಕದಡಿದೆ ಕಣ್ಣೀರು ಕಂಬನಿ ಮಿಡಿದಿದೆ ಭಾವನೆಗಳು ಬತ್ತಿದೆ ಜೀವವೇ ಸುಮ್ಮನೆ ಸೊರಗಿದೆ ಎದೆಯಾಳದಿ ಕನಸ್ಸು ಕೊಳೆತಿದೆ ಹನಿಯೊಂದು ಹಾಗೆ ಜಾರಿದೆ  ನನ್ನೆದೆಯ ಬಾಂಧಳದಿ ಚಿಗುರಿದ ಮೊಗ್ಗು ನೀನು ಅರಳುವ ಒಳಗೆ ಮುದುಡಿದೆ ***********ರಚನೆ *********    ಡಾ. ಚಂದ್ರಶೇಖರ. ಸಿ. ಹೆಚ್

ತನು ಕರಗದಾಗಿದೆ

Image
  ಮೋಸದ ವ್ಯಥೆ ನೂರಿದೆ ಕಣ್ಣೀರು ಕಥೆ ಹೇಳಿದೆ ಮನಸು ಮಸಣದಂತಿದೆ ತನು ಏಕೊ ಕರಗದಾಗಿದೆ ಜೀವನದಿ ನಗು ಜೋಕಲಿ ಮಾತು ಪ್ರೀತಿ ಉಯ್ಯಾಲಿ ಕನಸು ಇಲ್ಲಿ ಮಾಮೂಲಿ ನನಸು ಕಾಣದ ಖಯಾಲಿ  ಅತ್ತರೆ ಮನವೆಕೋ ಭಾರ ಯಾರಿಗೆ ನೀಡಲಿ ದೂರ ತನು ಕರಗದ ಚಿತ್ತ ಚೋರ ದೇಹ ಬಣ್ಣದ ಬರಿ ಆಕಾರ ನೂರೆಂಟು ಕನಸು ಮನದಿ ಮೂಡಿತು ಹಾಗೆ ಭಯದಿ ಕುಣಿಯಿತು ಪ್ರೀತಿ ಬಲದಿ ಆತ್ಮ ಹರಿಯಿತು ಕಾಣದ ಜಲದಿ  *************ರಚನೆ *******   ಡಾ. ಚಂದ್ರಶೇಖರ. ಸಿ. ಹೆಚ್

ನಗಲು ಆದಿತೆ

Image
ಆಸೆಗಳ ಅದುಮಿಟ್ಟು ಭಾವನೆಗಳ ಬದಿಗಿಟ್ಟು ಕನಸುಗಳ ಮಡಿಚ್ಚಿಟ್ಟು ದುಃಖವ ತಡೆದಿಟ್ಟು ನಗಲು ಆದಿತೆ ಮೊಗದಲಿ ಮರೆತು  ನೋವ ಬಿಟ್ಟು ಭ್ರಮೆಯಲಿ ತೆಲಾಡಿ ಖುಷಿಯಲಿ ಓಲಾಡಿ ನೋವನ್ನು ಜಾಲಾಡಿ ನಿಜದಲ್ಲಿ ತೂರಾಡಿ ಮರೆಯಲಾದಿತೆ ಮಾಸಿದ ಬಣ್ಣ ತುಳುಕಾಡಿ  ಬದುಕು ಜಂಜಾಟ ದಿನವೂ ಜೂಜಾಟ ಕಷ್ಟ  ಏಕೊ ಗೊಳಾಟ ಮರೆಯಲಾದಿತೆ ಕಣ್ಣ ಹನಿ ನೀರಿನ ಪರದಾಟ  ಬಯಕೆ ಒಂಚೂರು ಕಾಸು ಬರಿ ಬೆವರು ದೂರಸೆ ಕಹಿ ನೀರು ದೇಹ ದುಃಖದ ತೇರು ಅಂಬಿಗನ ದೋಣಿ ಬಲ್ಲವರು ಯಾರು  ಜೀವನ ಒಂದು ಸಂತೆ ಸಾಗುವ ಒಲವ ಕಂತೆ ಬೇಜಾರಿನ ತಕ್ಕ ಬಂತೆ ಬದುಕು ಬುತ್ತಿ  ಚಿಂತೆ  ತಿಂದವನೇ ಬಲ್ಲ ಸವಿರುಚಿಯ ಅಂತೇ **********ರಚನೆ **********    ಡಾ. ಚಂದ್ರಶೇಖರ. ಸಿ. ಹೆಚ್

ಓ ಮಂಜುನಾಥ

Image
ಬಿಟ್ಟೋಗೋ ಬದುಕಲ್ಲಿ ಯಾರು ನನ್ನವರಲ್ಲ ಸುಟ್ಟಿರುವ ನಸೀಬು ಬಿಡದೆ ಕಾಡಿದೆಯಲ್ಲಾ ಕಾಯೋ ಹರ ನೀನೇ ಮಂಜುನಾಥ ಮೂರು ದಿನದ ಬಾಳು ಗೆಲುವು ಸೋಲು ಎಲ್ಲಾ  ಕಷ್ಟ ದುಃಖಗಳನ್ನು ಹೊತ್ತು ಒಯ್ಯುವರು ಯಾರಿಲ್ಲ ಕಾಯೋ ಕರುಣಾಮಯಿ ನೀನೇ ಮಂಜುನಾಥ ಬಣ್ಣ ಬಣ್ಣದ ಮಾತು ನಟಿಸಿ ನಡೆದರು ಎಲ್ಲಾ ನಾಳೆಯ ಬಲ್ಲವರು ಯಾರು ಕಾಣವರು ಇಲ್ಲ  ಕಾಣುವನು ಎಲ್ಲಾ ನೀನೇ ಕಾಯೋ ತಂದೆ ಮಂಜುನಾಥ ಬದುಕು ಜಟಕಾ ಬಂಡಿ ಸಾಗಿಸು ಗಂಡ ಗುಂಡಿ ವಿಧಿಯೂ ಆಡೋ ಬಂಡಿ ತುಂಬಿಸು ದೇವರ ಹುಂಡಿ ನಂಬಿರುವೆ ಕಾಯೋ ಮಂಜುನಾಥ ಜೀವನ ಜಾತ್ರೆ ಜೋರು ನಿನದೆ ಪೂಜೆ ತೇರು ಹೂವು ಹಾರವ ಮುಡಿದು ಹರಸು ನಮ್ಮ ಕರೆದು ಭಕ್ತಿಯು ನಿನಗೆ ತಾನೇ ಕಾಯೋ ಮಂಜುನಾಥ ಮನವು ಕದಡಿದ ನೀರು ಹರಿವ ನದಿಯು ನೂರು ಕನಸು ಕಾಣದ ಊರು ಬಲ್ಲವ ನೀನೇ ಜೋರು ಕಾಯೋ ನಮಿಸುವೆ ನಿನ್ನ  ಮಂಜುನಾಥ ನುಡಿದಂತೆ ನಡೆವರು ಇಲ್ಲ  ನಂಬಿ ಕೆಟ್ಟವರಿಲ್ಲ ಬೇಡದೆ ಕಂಡವರಿಲ್ಲ ಸಾವನು ಯಾರು ಬಲ್ಲ ಅರಿತವಾ ನೀನೇ ಎಲ್ಲಾ ಕಾಯೋ ಮಂಜುನಾಥ  ಆಸೆಗಳು ನೂರು ಹುಟ್ಟಿ ಮೊಳಕೆಗಳಾಗಿ ಚಿಗುರಿ ಬೇರುಗಳ ಬೆನ್ನಟ್ಟಿ ದಿಕ್ಕೇಟ್ಟು ಕೂತಿರುವೆ ನಾನು ಕಾಯೋ ಆತ್ಮಲಿಂಗ, ಜ್ಯೋತಿರಲಿಂಗ ಓ ಮಂಜುನಾಥ ದಿಕ್ಕು ದಿಕ್ಕಲು ನೀನೇ ಕಲ್ಲಿನ ಗುಡಿಯಲು ನೀನೇ ಜಾರುವ ಹಿಮದಲು ನೀನೇ ಕಾಣುವ ಲಿಂಗವು ನೀನೇ ಮುಕ್ಕಣ್ಣು ಶಿವನೇ,  ಓ ಹರ ನೀನೇ ಕಾಯೋ ಮಂಜುನಾಥ  *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಹೂವದೆನಾ

Image
ನಿನ್ನೆದೆಯ ಗೂಡಲಿ ಹಕ್ಕಿಯದೇನಾ ಕಣ್ಣ ಅಂಚಲಿ ಸೆರೆಯದೇನಾ ಕೆಂಪು ತುಟಿಯಲಿ ಮುತ್ತದೇನಾ ಕನಸು ಕಣೋ ವಯಸ್ಸು ಅರಳಿದೆ ಹೂವಂತೆ ಮನಸ್ಸು ಯೌವನವೇ ಬೀಸಿ ಸೊಗಸು ನೋಟದಿ ನಾ ಕರಗಿದಂಗೆ  ಐಸ್  ಮುಟ್ಟದೆನೇ ಹೊಡದಂಗಾಯಿತು ಕರೆಂಟ್ ಗೊತ್ತಿಲದೇ ಬಂತು ಪ್ರೀತಿ ವಾರೆಂಟ್ ನೀನೇ ತಾನೇ ನನ್ನ ಸ್ವೀಟ್ ಹಾರ್ಟ್  ಹುಡುಗಿ ನಿನ್ನ ನೋಡಿದ್ರೆ ಕುಡಿದ ಹಾಗೇ ಆಯಿತು ನೈನ್ಟಿ ನೀನು ಮಾತಲ್ಲಿ  ಮಜಾ ತರಿಸೋ  ಗ್ರೀನ್ ಟೀ  ನಕ್ಕರೆ ನೀನು ಫುಲ್ ಕ್ಯೂಟ್ ಕಿಕ್ ಹೊಡೆದಂಗೆ ಆಯುತು ಲೈಟ್ ದೇವರ ಆಣೆ ನೀನೇ ನನ್ನ ಲೈಫ್ ಹಾಗ್ತಿಯ ನನ್ನ ಮುದ್ದು  ವೈಫ್  ***********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಬಾರೆ ಗೆಳತಿ

Image
ಲ ಲಾಲಾ ಲಾಲಾ ಬಾರೆ ಗೆಳತಿ ಓಡುವ ಪ್ರೇಮ ರಾಗ ಹಾಡುವ ಬಾನ ಅಂಗಳದಿ ಕುಣಿಯುವ ನನ್ನ ಉಸಿರು ಕೂಗಿದೆ ನಿನ್ನ ಜೊತೆಯಾಗಿ ನಾವು ಬಾಳುವ ಇನ್ನ ಮನೆಸೆಕೋ ಹಕ್ಕಿಯಂತೆ ಹಾರಿದೆ ಆಕಾಶದಿ ತೇಲಿ ನಲಿದಿದೆ ಬಾ ಬಾರೆ ಗೆಳತಿ ಓಡುವ ಪ್ರೇಮ ರಾಗ ಹಾಡುವ ಭಾನ ಅಂಗಳದಿ ಕುಣಿಯುವ ಉಸಿರೇಕೋ ಇಂದು ಹಸಿರು  ನೋಡು ಚಿಟ್ಟೆಯು ಕೂತ ಹೂವ ನೋಡು ಕಣ್ಣ ಅಂಚಲಿ ಏಕೊ ಮಿಂಚು ನೀ ಮಾಡಿದ ಒಲವಲಿ ಸಂಚು ಹಾಡಲ್ಲಿ ನಿನದೆ ಮೌನ  ರಾಗ ನುಡಿಯುತಿದೆ ನಿನದೆ ಪ್ರೀತಿ ಯೋಗ  ಲ ಲಾಲಾ ಲಾಲಾ ಬಾರೆ ಗೆಳತಿ ಓಡುವ ಪ್ರೇಮ ರಾಗ ಹಾಡುವ ಭಾನ ಅಂಗಳದಿ ಕುಣಿಯುವ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಮಳೆ ಹನಿ

Image
ಮುಂಗಾರು ಮಳೆಗೆ  ಈ ದೇಹ ನೆನೆದಿದೆ ನಿನ್ನ ಜೊತೆ ಕೂಡಿ ಕನಸು ಕುಣಿದಿದೆ ಮೈಗೆ ಮೈ ತಾಗಿ ಮಿಂಚೊನ್ದು ಮೂಡಿದೆ ಕಣ್ಣ ಸನ್ನೆಯಲಿ ಏನೇನೊ ಬೇಡಿದೆ ತುಟಿ ಅಂಚಲಿ ಸುರಿವ ಜೇನೊಂದು ಕೇಳಿದೆ ಮನಸು ಮನಸು ಬೆರೆತು ಪ್ರೀತಿ ಹಾಡು ಹಾಡಿದೆ ಹೃದಯದಲಿ ಏಕೊ ನದಿಯೊಂದು ಓಡಿದೆ ಏಕೊ ಸುಡುತಿದೆ ದೇಹ ಬಾರೆ ನೀನು ಸನಿಹ ತಾಳೇನು ಇನ್ನು ವಿರಹ ಬರೆಯುವೆ ಪ್ರೀತಿ ಬರಹ ಮನದ ಹಾಳೆಯಲಿ ಮೂಡಿದ ಚಿತ್ರ ನೀನು ಕಣ್ಣ ರೆಪ್ಪೆಯಲಿ ಗೀಚಿದ  ಪ್ರೇಮ ಪತ್ರ ನೀನು ನಿನ್ನ ಒಲವ ಬೆಂಕಿಯಲ್ಲಿ ಹನಿವ ಮಳೆ ಹನಿಗೆ ಕರಗೋ ಕೆಂಡ ನಾನು ನೋಡುತ ಭೂಮಿ ಭಾನು ***********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಆಸೆ ನೀನು

Image
ಹೇ ಹೇ ಮನದ ಆಸೆ ನೀನು  ನನ್ನ ಕನಸು ನೀನು  ಹೃದಯ ಗೆದ್ದ ಗೆಳೆಯ ನೀನು  ಬಾಳಲಿ ಬಂದ ಸವಿ ಕನಸು ನೀನಾಗಿ ಹೃದಯದಿ ಮಿಡಿತ ನೀನಾಗಿ ನನ್ನ ಪ್ರೀತಿ ತೇರಾಗಿ ಜಾತ್ರೇಲಿ ನನ್ನ ಜೊತೆಯಾಗಿ  ಮನದಿ ನಿನ್ನಯ ಉದಯ ಮರೆತೇನು ಬೆಳಗೋ ರವಿಯ ಕಂಡೆನು ಒಲವ ಸವಿಯ ನೀನೆ ನನ್ನಯ ಇನಿಯ ಹೇ ಹೇ ಮನದ ಆಸೆ ನೀನು  ನನ್ನ ಕನಸು ನೀನು  ಹೃದಯ ಗೆದ್ದ ಗೆಳೆಯ ನೀನು  ಬದುಕು ಒಂದು ಪ್ರೀತಿಯ ಸಂತೆ ಬಾಳುವ ನಾವು ಮರೆತು ಚಿಂತೆ ನಗುವ ಮರೆತು ನೋವಿನ ಕಂತೆ ಹೇ ಹೇ  ನನ್ನಯ ಉಸಿರು ನೀನು  ಬಾಳಿನ ಹಸಿರು ನೀನು  ಪ್ರೀತಿಗೆ ಹೆಸರು ನೀನು  ***********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ಮಾಯೆ

Image
ಮನಸು ಕರಗದ ಮಾಯೆ ಕಾಡಿದೆ ನಿನ್ನಯ  ಛಾಯೆ ಏತಕೆ ನನಗೆ  ಈ ಮೋಹ ತೀರದ ಒಲವಿನ ದಾಹ ನೆನಪೊಂದು ಸವಿ ಮಾತು ಬಿಡದೆ ನನ್ನ ಕಾಡಿತು ಹೃದಯದಿ ನದಿಯೊಂದು ಓಡಿತು ಕಾಣದ ಕಡಲಿಗೆ ಸೇರಿತು ಮನಸು ಕರಗದ ಮಾಯೆ ಕಾಡಿದೆ ನಿನ್ನಯ  ಛಾಯೆ ಕಣ್ಣೀರು ಕಥೆಯ ಹೇಳಿದೆ ನಯನ ನಗುತಾ ಬಾಡಿದೆ ಕನಸು ಏಕೊ ಕರಗಿದೆ ಮತ್ತೊಂದು ಬಿಡಿಸದ  ಒಗಟು ಮನವು ನುಸುಳುವ ಗಂಟು ಗಂಟ್ಟಿನಲಿ ನಮ್ಮಯ ನಂಟು ಏನು ಹೇಳಲಿ ಒಲವೇ ಆಸೆ ದುಃಖದ ಮಗುವೇ ಏಕೊ ಬಾರದು ದುಗುಡದಿ ನಗುವೇ ಮನಸು ಕರಗಿದ ಮಾಯೆ ಕಾಡಿದೆ ನಿನ್ನಯ  ಛಾಯೆ **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಗುರು ನೀನೆ

Image
ಗುರುವೇ ನೀನು ವಿದ್ಯೆಗೆ ಜಗವು ಗುರುವೇ ನಿನ್ನಿಂದ ತಾನೇ ಗೆಲುವು ಗುರುವೇ ನಿನ್ನಿಂದ ಕುಣಿವುದು ಮನವು ಗುರುವೇ ನೀನು ಪ್ರೀತಿಯ ಒಲವು ಗುರುವೇ ನಿನ್ನಿಂದ ಬಾಳಲಿ ಬೆಳಕು ಗುರುವೇ ನಿನ್ನಿಂದ ಮಾಯಾ ಕೊಳಕು ಗುರುವೇ ನಿನ್ನಿಂದ ಖುಷಿ ಈ ಬದುಕು ಗುರುವೇ ನಿನ್ನಿಂದ ಮುಚ್ಚಿದೆ ಬಿರುಕು ಗುರುವೇ ನೀನೆ ಒಲವ ಚಲವು ಗುರುವೇ ನೀನು ಮನದ ಅರಿವು ಗುರುವೇ ನೀನು ತಾಳ್ಮೆಯ ಭಯವು ಗುರುವೇ ನೀನು ನಮ್ಮಯ ನಗುವು ಗುರುವೇ ನೀನು ಶಿಕ್ಷಣ ಲೋಕ ಗುರುವೇ ನೀನು ಅಕ್ಷರ ಪಾಕ ಗುರುವೇ ನೀನು. ಮಾತಲಿ ತೂಕ ಗುರುವೇ ನೀನು ಮನದಿ ಮೂಕ ಗುರು ಇಲ್ಲದೆ ಗುರಿ ಎಲ್ಲಿದೆ ಶಿಕ್ಷಣ ಇಲ್ಲದೆ ಮನೆ ಎಲ್ಲಿದೆ ಅಕ್ಷರ ಇಲ್ಲದೆ ಬದುಕು ಎಲ್ಲಿದೆ ಅಕ್ಕರೆ ಇಲ್ಲದೆ ಪ್ರೀತಿ ಎಲ್ಲಿದೆ ಗುರುವೇ ನೀನು ತಾನೇ ಚಲ ಗುರುವೇ ನೀನು ತಾನೇ ಬಲ ಗುರುವೇ ನೀನು ವಿದ್ಯೆ ಫಲ ಗುರುವೇ ನೀನು ಪ್ರಬಲ ಎಲ್ಲಾ ನನ್ನ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು ************** ರಚನೆ ***** ಡಾ. ಚಂದ್ರಶೇಖರ. ಸಿ. ಹೆಚ್

ಬಾರೋ ಚೆಲುವ

Image
ಹೇ ತನ ನಾನಾ ನನಾ   ತನ ನಾನಾ ನನಾ ಬಾರೋ ಬಾರೋ ಚೆಲುವ ಕೊಡುವೆ ನಿನಗೆ ಮನವ ಜಗವ ನಾವು  ಗೆಲುವ ನೋವ ಮರೆತು  ಕುಣಿವ ಪ್ರೀತಿಯಲಿ ಹೃದಯ ಕರೆದಿದೆ ನೀನೇ ನನ್ನ ಕನಸು ಎಂದಿದೆ ನೂರೆಂಟು ಆಸೆ ತಂದಿದೆ ಮನವೆಕೋ ಒಲವ ಸವಿಯ ಕೇಳಿದೆ ಎಳು ಹೆಜ್ಜೆಯಲಿ ಗಂಟಾದೆ ನೀನು ಸ್ವಪ್ತ ಸ್ವರದಲ್ಲಿ ಹಾಡಾದೆ ನೀನು ನನ್ನ ಜೀವಕೆ ಉಸಿರಾದೆ ನೀನು ಈ ಬಾಳಲಿ ನಂಟಾದೆ ನೀನು ಬಾರೋ ಬಾರೋ ಚೆಲುವ ಕೊಡುವೆ ನಿನಗೆ ಮನವ ಜಗವ ನಾವು  ಗೆಲುವ ನೋವ ಮರೆತು  ಕುಣಿವ ನೂರು ಜನ್ಮಕೂ ನೀನೆ ನನ್ನ ಇನಿಯ ಏಕೆ ನೋಡುವೆ ಬಾರೋ ನನ್ನ ಗೆಳೆಯ ಹೃದಯ ಬಡಿದಿದೆ ಕೇಳು ಆ ನುಡಿಯ ಹರೆಯ ಕುಣಿದಿದೆ ಬಾರೋ ನೋಡು ಸಿಹಿಯ ಕಣ್ಣ ನೋಟ ಮಿಂಚಂತೆ ಬಂದು ಮನದ ಮನೆಯಲಿ ಮಳೆಯ ತಂದು ಪ್ರೀತಿ ಹನಿಯಲಿ ನಾನು ಮಿಂದು ನಿನ್ನ ಕೂಗಿದೆ ಬಾರೋ ಬಾರೋ ಚೆಲುವ ಕೊಡುವೆ ನಿನಗೆ ಮನವ ಜಗವ ನಾವು  ಗೆಲುವ ನೋವ ಮರೆತು  ಕುಣಿವ ಹೇ ತನ ನಾನಾ ನನಾ   ತನ ನಾನಾ ನನಾ **************ರಚನೆ ***** ಡಾ. ಚಂದ್ರಶೇಖರ. ಸಿ. ಹೆಚ್

ನನ್ನ ನಾ ಮರೆತೆ

Image
  ನನ್ನ  ನಾ ಮರೆತೆ ನಿನ್ನಲಿ ಏಕೊ ಬೇರೆತೆ ಮನಸ್ಸು ಅರಳೋ ಒಳಗೆ ನೀ ದುಂಬಿಯಂತೆ  ಕಲೆತೆ ಆಸೆ ನೂರು ನನಗೆ ಉಸಿರು ನೀನು ನನಗೆ ಪ್ರೀತಿಯ ಬಲೆಗೆ ಸಿಲುಕಿದೆ ಕೊನೆಗೆ  ಕಣ್ಣ ಅಂಚಿನಲ್ಲಿ ಕಾಡಿದೆ ನೀನು ಕನಸ್ಸ ಮತ್ತಿನಲ್ಲಿ ಬೇಡಿದೆ ನಿನ್ನೆ ನಾನು ಈ ಹೃದಯದಲ್ಲಿ ನಿನ್ನದೆ ಬಡಿತ ಪ್ರೀತಿಯ ಸವಿ ಮನಕೆ ನಿನ್ನದೆ  ಮಿಡಿತ ನನ್ನ  ನಾ ಮರೆತೆ ನಿನ್ನಲಿ ಏಕೊ ಬೇರೆತೆ ಮನಸ್ಸು ಅರಳೋ ಒಳಗೆ ನೀ ದುಂಬಿಯಂತೆ  ಕಲೆತೆ ಹರಿವ ನದಿಯು ಮರೆತು ನಿಂತಂತೆ ಮೋಡದಿ ಮಳೆಯೂ ಧುಮುಕಿ ಬಂದಂತೆ  ಹುಚ್ಚು ಮನಕೆ ನಿನ್ನ ಪ್ರೀತಿಯ ಚಿಂತೆ ಒಲವ ಜಾತ್ರೆಯಲ್ಲಿ ನಿನ್ನ ಕನಸ್ಸಿನ ಸಂತೆ ಬಾರೋ ನನ್ನ ಗೆಳೆಯ ನೀನೆ ನನ್ನ ಹೃದಯ ನನ್ನ  ನಾ ಮರೆತೆ ನಿನ್ನಲಿ ಏಕೊ ಬೇರೆತೆ ಮನಸ್ಸು ಅರಳೋ ಒಳಗೆ ನೀ ದುಂಬಿಯಂತೆ  ಕಲೆತೆ **********ರಚನೆ ******** ಡಾ. ಚಂದ್ರಶೇಖರ ಸಿ. ಹೆಚ್