ಪ್ರೀತಿಯು ಬೇಡ
ಪ್ರೀತಿಯು ಬೇಡ ಪ್ರಣಯವು ಬೇಡ
ವಿರಹ ಏಕೆನೆಗೆ
ಸುಖವು ಬೇಡ ದುಃಖವು ಬೇಡ
ಸವಿ ಬದುಕು ಬೇಕೆನೆಗೆ
ಸೌಂದರ್ಯ ನಂಬಿ ಸೋಲುವ ದುಂಬಿ
ಮೋಸ ಹೋಗಬೇಡ ನೀನು ಕಣ್ಣಿನ ನೋಟಕೆ
ಪ್ರೀತಿಯು ಬೇಡ ಪ್ರಣಯವು ಬೇಡ
ವಿರಹ ಏಕೆನೆಗೆ
ತನನನಾ ತನನನಾ ತನನನಾ
ಪ್ರೀತಿಯ ಈ ಸಾರ
ತಿಳಿವುದು ಬಲು ಘೋರ
ಮನಸ್ಸು ಏಕೊ ಒಲವ ಚೋರ
ಈ ಕನಸ್ಸುಗಳ ಕಥೆ ಸಾಕೆನೆಗೆ
ನೆನಪುಗಳ ಮಾತೇಕೆ ಕನಸ್ಸುಗಳ ಕಥೆ ಸಾಕೆ
ನನ್ನ ಹಿಂಡಿ ನಾ ನಲುಗುವುದೇಕೆ
ಮನ ಮಿಡಿವ ಹೃದಯದ ವ್ಯಥೆ ಸಾಕೆ
ಪ್ರೀತಿಯ ಚೆಲ್ಲಿದರು
ಜೀವನ ಕಥೆಯಾದರೂ
ಸತ್ಯದ ಕೆಂಡದ ಮೇಲೆ ಕುಳಿತಿಹೇನಾ
ಪ್ರೀತಿಯು ಬೇಡ ಪ್ರಣಯವು ಬೇಡ
ವಿರಹ ಏಕೆನೆಗೆ
ನೋವಿನ ಬಾಣಗಳು
ಗಾಜಿನ ಕನ್ನಡಿಯಲಿ
ಸತ್ಯವಾ ಸಾರುವುದಿಲ್ಲ
ನೆನಪುಗಳು ಕಥೆಯು
ಮನದಈಟಿ
ಮೋಡದ ಮುಗಿಲುಗಳು
ನಿಂತಲ್ಲಿ ನಿಲ್ಲುವುದಿಲ್ಲ
ಗಾಳಿಗೆ ಓಡಿದೆ ನೋವಲಿ ಹಾರಿ
ಜೀವನಾ ಸಾಗುವುದು
ಕನಸ್ಸುಗಳ ಬೇಲಿಯಲಿ
ನೆನಪುಗಳ ಮೇಲೆ ಈ ಪಯಣ
ಪ್ರೀತಿಯು ಬೇಡ ಪ್ರಣಯವು ಬೇಡ
ವಿರಹ ಏಕೆನೆಗೆ
ಸುಖವು ಬೇಡ ದುಃಖವು ಬೇಡ
ಸವಿ ಬದುಕು ಬೇಕೆನೆಗೆ
ಸೌಂದರ್ಯ ನಂಬಿ ಸೋಲುವ ದುಂಬಿ
ಮೋಸ ಹೋಗಬೇಡ ನೀನು ಕಣ್ಣಿನ ನೋಟಕೆ
ಪ್ರೀತಿಯು ಬೇಡ ಪ್ರಣಯವು ಬೇಡ
ವಿರಹ ಏಕೆನೆಗೆ
ತನನನಾ ತನನನಾ ತನನನಾ
*********ರಚನೆ ********
ಡಾ ಚಂದ್ರಶೇಖರ. ಸಿ. ಹೆಚ್
Comments
Post a Comment