ಕೂಲಿ ನಾನು



ಆಸೆಗಳಾ ಮೂಟೆ ಕಟ್ಟಿ

ಕನಸ್ಸುಗಳ ಮರವ ಸುಟ್ಟಿ

ಜೀವನವೆಂಬ ಕೆಂಡದಿ 

ಒಪ್ಪೋತಿನ ಊಟಕೆ

ದುಡಿವ ಕೂಲಿ ನಾನು


ಎದ್ದರೆ ತಣ್ಣೀರು ಸ್ನಾನ

ಅಲ್ಪ ಸ್ವಲ್ಪ ತಿಂಡಿ ಪಾನ

ಬೆವರು ಹರಿಸಿ ರಕ್ತ ಸವೆಸಿ

ಮಾಲೀಗಾಗಿ ದುಡಿವ ಕೂಲಿ ನಾನು


ಬೇವರ ಹನಿಯೇ ಮಳೆಯೂ

ಹರಿವ ರಕ್ತದ ಬಿಸಿಯು

ಹರಿದ ಅರುಕು ಅಂಗಿ

ತೊಟ್ಟು ಮುರುಕು ಲುಂಗಿ

ಸೂಟು ಬೂಟಿನ ಕೆಳಗೆ ಕೂಲಿ ನಾನು


ಸಂಸಾರ ಸಾಕಲು ಬೇಕು ಅನ್ನ

ದಿನವೂ ಬಿಸಿಲಿನ  ಗುನ್ನ 

ರಾತ್ರಿಯಲಿ ಒಂಚೂರು ಪಾನ

ಮನೆಮಂದಿಗೆ ಉಸಿರೇ ಮಾನ 

ಸ್ವಲ್ಪ ಹಿಟ್ಟಿಗಾಗಿ ಬರುವ ಕೂಲಿ ನಾನು


ಯಾರು ಬಂದರೆ ಏನು

ಯಾರು ಹೋದರೆ ಏನು

ಬಣ್ಣ ಮಾಸುವಾ ಜಗದಿ

ಬಣ್ಣ ಹಚ್ಚಿ ಕುಣಿವ ಜನದಿ

ಬದುಕಿಗಾಗಿ ದುಡಿವ ಕೂಲಿ ನಾನು


*********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ